Video: ಕಾರಿನಲ್ಲಿ ಬಂದ ಕಳ್ಳರು ಮಾರ್ನಿಂಗ್ ವಾಕ್ಗೆ ಹೋಗುತ್ತಿದ್ದ ಮಹಿಳೆಯ ಸರ ಕದ್ದು ಪರಾರಿ
ಸರಗಳ್ಳತನ ದೇಶಾದ್ಯಂತ ಹೆಚ್ಚುತ್ತಿದೆ, ಬಂಗಾರವನ್ನು ಧರಿಸಿ ಮಹಿಳೆಯರು ಮನೆಯಿಂದ ಆಚೆ ಬರುವುದಕ್ಕೆ ಹೆದರುತ್ತಿದ್ದಾರೆ. ಕಾರಿನಲ್ಲಿ ಬಂದ ಕಳ್ಳರು ಮಾರ್ನಿಂಗ್ ವಾಕ್ಗೆ ಹೋಗುತ್ತಿದ್ದ ಮಹಿಳೆಯ ಸರ ಕದ್ದು ಪರಾರಿಯಾಗಿರುವ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ.
ಸರಗಳ್ಳತನ ದೇಶಾದ್ಯಂತ ಹೆಚ್ಚುತ್ತಿದೆ, ಬಂಗಾರವನ್ನು ಧರಿಸಿ ಮಹಿಳೆಯರು ಮನೆಯಿಂದ ಆಚೆ ಬರುವುದಕ್ಕೆ ಹೆದರುತ್ತಿದ್ದಾರೆ. ಕಾರಿನಲ್ಲಿ ಬಂದ ಕಳ್ಳರು ಮಾರ್ನಿಂಗ್ ವಾಕ್ಗೆ ಹೋಗುತ್ತಿದ್ದ ಮಹಿಳೆಯ ಸರ ಕದ್ದು ಪರಾರಿಯಾಗಿರುವ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಿಳೆ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ ಬಿಳಿ ಬಣ್ಣದ ಕಾರು ಸಮೀಪಕ್ಕೆ ಬಂದು, ಮುಂಬಾಗಿಲಿಗೆ ಒರಗಿದ ವ್ಯಕ್ತಿ ಆಕೆಯ ಸರ ಕಿತ್ತುಕೊಳ್ಳಲು ಯತ್ನಿಸುತ್ತಿರುವುದು ಕಂಡು ಬಂದಿದೆ.
ಇದ್ದಕ್ಕಿದ್ದಂತೆ ಕಳ್ಳತನದ ಅರಿವಾದ ಮಹಿಳೆ ತಡೆಯಲು ಪ್ರಯತ್ನಿಸಿದಳು, ಆದರೆ ಅವಳು ಹಾಗೆ ಮಾಡುತ್ತಿದ್ದಾಗ, ಕಾರಿನಲ್ಲಿದ್ದ ವ್ಯಕ್ತಿ ಅವಳನ್ನು ಸ್ವಲ್ಪ ದೂರದವರೆಗೆ ಕಾರಿನೊಂದಿಗೆ ಎಳೆದೊಯ್ದು ಸರ ಕಿತ್ತುಕೊಂಡು ಅವರನ್ನು ತಳ್ಳಿದ್ದಾನೆ.
ಮತ್ತಷ್ಟು ಓದಿ: Crime News: ವೀಕೆಂಡ್ ಎಣ್ಣೆ ಪಾರ್ಟಿಗಾಗಿ ಸರಗಳ್ಳತನ ಮಾಡುತ್ತಿದ್ದ ಮೂವರು ಅರೆಸ್ಟ್, ಆರೋಪಿಗಳಿಂದ 5 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ
ನಗರದ ಪೀಲಮೇಡು ಪ್ರದೇಶದ ಜಿವಿ ರೆಸಿಡೆನ್ಸಿ ಬಳಿ ಈ ಘಟನೆ ನಡೆದಿದೆ. ಕೌಶಲ್ಯ ಎಂಬ ಮಹಿಳೆ ಸಿಂಗಾನಲ್ಲೂರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ವಾಹನದಲ್ಲಿ ನಂಬರ್ ಪ್ಲೇಟ್ ಇಲ್ಲದಿದ್ದರಿಂದ ಕಳ್ಳರನ್ನು ಹಿಡಿಯುವುದು ಕಷ್ಟ ಎಂದು ಮೂಲಗಳು ತಿಳಿಸಿವೆ.
In a shocking incident that unfolded in broad daylight, miscreants in a car snatching woman’s chain while she was on her morning walk in Coimbatore on Monday. #Crime @News9Tweets pic.twitter.com/LqloKia4eN
— RAMKUMAR R (@imjournalistRK) May 16, 2023
ಕಾರಿನಲ್ಲಿ ಕಳ್ಳರು ಚೈನ್ ಸ್ನ್ಯಾಚಿಂಗ್ ಈ ಮೊದಲು ಬೈಕ್ನಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ ಕಳ್ಳರು, ಇದೀಗ ಕಾರಿನಲ್ಲಿ ಬರುತ್ತಿದ್ದಾರೆ, ಬೈಕ್ ಆದರೆ ವ್ಯಕ್ತಿಯನ್ನು ಬೈಕ್ನಿಂದ ತಳ್ಳಬಹುದು ಅಥವಾ ಬಿಡಿಸಿಕೊಳ್ಳುವ ಪ್ರಯತ್ನ ಮಾಡಬಹುದು, ಆದರೆ ಕಾರಿನಲ್ಲಿ ಬಂದರೆ ಕಳ್ಳರಿಂದ ಬಚಾವಾಗುವುದು ಕಷ್ಟ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ