Atiq Ahmad Killers: ಪ್ರತಾಪ್ಗಢ ಕಾರಾಗೃಹಕ್ಕೆ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಹಂತಕರ ಸ್ಥಳಾಂತರ
ಪ್ರಯಾಗ್ರಾಜ್ನಲ್ಲಿ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್(Atiq Ahmad) ಹಾಗೂ ಅಶ್ರಫ್ ಅಹ್ಮದ್ ಹತ್ಯೆ ಮಾಡಿದ್ದ ಆರೋಪಿಗಳನ್ನು ಭದ್ರತಾ ಕಾರಣಗಳಿಂದ ಬೇರೆ ಜೈಲಿಗೆ ಸ್ಥಳಾಂತರಿಸಲಾಗಿದೆ. ಸನ್ನಿ ಸಿಂಗ್, ಅರುಣ್ ಮೌರ್ಯ, ಲವಲೇಶ್ ತಿವಾರಿಯನ್ನು ಪ್ರಯಾಗ್ರಾಜ್ನಿಂದ ಪ್ರತಾಪ್ಗಢ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದಾರೆ. ಅಹ್ಮದ್ ಗ್ಯಾಂಗ್ ಅನ್ನು ನಿರ್ಮೂಲನೆ ಮಾಡುವ ಮೂಲಕ ತಾವು ಹೆಸರು ಗಳಿಸಲು ಬಯಸಿದ್ದೆವು ಎಂದು ಮೂವರು ಹಂತಕರು ಹೇಳಿಕೊಂಡಿದ್ದಾರೆ. ಅವರು ಕೊಲೆಯನ್ನು ಎಚ್ಚರಿಕೆಯಿಂದ ಯೋಜಿಸಿದ್ದರು. ಶನಿವಾರ ಇಡೀ ದಿನ ಪೊಲೀಸರ ವಶದಲ್ಲಿದ್ದ ಅಹ್ಮದ್‌ನನ್ನು ಹಿಂಬಾಲಿಸಿದ್ದರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. […]
ಪ್ರಯಾಗ್ರಾಜ್ನಲ್ಲಿ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್(Atiq Ahmad) ಹಾಗೂ ಅಶ್ರಫ್ ಅಹ್ಮದ್ ಹತ್ಯೆ ಮಾಡಿದ್ದ ಆರೋಪಿಗಳನ್ನು ಭದ್ರತಾ ಕಾರಣಗಳಿಂದ ಬೇರೆ ಜೈಲಿಗೆ ಸ್ಥಳಾಂತರಿಸಲಾಗಿದೆ. ಸನ್ನಿ ಸಿಂಗ್, ಅರುಣ್ ಮೌರ್ಯ, ಲವಲೇಶ್ ತಿವಾರಿಯನ್ನು ಪ್ರಯಾಗ್ರಾಜ್ನಿಂದ ಪ್ರತಾಪ್ಗಢ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದಾರೆ. ಅಹ್ಮದ್ ಗ್ಯಾಂಗ್ ಅನ್ನು ನಿರ್ಮೂಲನೆ ಮಾಡುವ ಮೂಲಕ ತಾವು ಹೆಸರು ಗಳಿಸಲು ಬಯಸಿದ್ದೆವು ಎಂದು ಮೂವರು ಹಂತಕರು ಹೇಳಿಕೊಂಡಿದ್ದಾರೆ. ಅವರು ಕೊಲೆಯನ್ನು ಎಚ್ಚರಿಕೆಯಿಂದ ಯೋಜಿಸಿದ್ದರು. ಶನಿವಾರ ಇಡೀ ದಿನ ಪೊಲೀಸರ ವಶದಲ್ಲಿದ್ದ ಅಹ್ಮದ್‌ನನ್ನು ಹಿಂಬಾಲಿಸಿದ್ದರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಗ್ ರಾಜ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿದ್ದ ವೇಳೆ ಏಕಾಏಕಿ ದಾಳಿ (Attack) ನಡೆಸಿದ ದುಷ್ಕರ್ಮಿಗಳು ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಅತೀಕ್ ಮತ್ತು ಅಶ್ರಫ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಪ್ರಯಾಗರಾಜ್‌ನಲ್ಲಿರುವ ಅವರ ಗ್ರಾಮದಲ್ಲಿ ಹೂಳಲಾಯಿತು.
ಪ್ರಕರಣದ ಗಂಭೀರತೆ ಅರಿತ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ. ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯಲ್ಲಿ ಭಾನುವಾರ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ರಾಜ್ಯದಾದ್ಯಂತ ಬೃಹತ್ ಸಭೆ ಆಯೋಜನೆಯನ್ನು ನಿಷೇಧಿಸಲಾಗಿತ್ತು.
ಮತ್ತಷ್ಟು ಓದಿ: Atiq Ahmad Death: ಅತೀಕ್ ಅಹ್ಮದ್, ಅಶ್ರಫ್ ಹತ್ಯೆ ಬಳಿಕ ಸಿಎಂ ಯೋಗಿ ಅಧಿಕಾರಿಗಳಿಗೆ ನೀಡಿದ ಸೂಚನೆ ಏನು?
ಗ್ಯಾಂಗ್ಸ್ಟರ್ ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಹತ್ಯೆ ಬಗ್ಗೆ ಉತ್ತರ ಪ್ರದೇಶ ಪೊಲೀಸ್ ಪಡೆ ಸ್ಥಾಪಿಸಿದ ಮೂವರು ಸದಸ್ಯರ ವಿಶೇಷ ತನಿಖಾ ತಂಡದಿಂದ (SIT) ತನಿಖೆ ನಡೆಸಲಾಗುವುದು. ಈ ತಂಡಕ್ಕೆ ಹೆಚ್ಚುವರಿ ಉಪ ಪೊಲೀಸ್ ಆಯುಕ್ತರಾದ ಸತೀಶ್ ಚಂದ್ರ ನೇತೃತ್ವ ವಹಿಸಲಿದ್ದು ಸತೇಂದ್ರ ಪ್ರಸಾದ್ ತಿವಾರಿ, ಸಹಾಯಕ ಪೊಲೀಸ್ ಕಮಿಷನರ್ (ಕೊತ್ವಾಲಿ), ಮತ್ತು ಪ್ರಯಾಗ್ರಾಜ್ ಪೋಲೀಸ್ ಅಪರಾಧ ವಿಭಾಗದ ತನಿಖಾ ಸೆಲ್ ಇನ್ಸ್ಪೆಕ್ಟರ್ ಓಂ ಪ್ರಕಾಶ್ ಇದರಲ್ಲಿದ್ದಾರೆ.
ತನಿಖೆಯನ್ನು ಗುಣಮಟ್ಟ ಮತ್ತು ಕಾಲಮಿತಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಪೂರ್ಣಗೊಳಿಸುವಂತೆ ಎಸ್‌ಐಟಿಗೆ ಸೂಚಿಸಲಾಗಿದೆ ಎಂದು ಪ್ರಯಾಗ್‌ರಾಜ್‌ನ ಉನ್ನತ ಪೊಲೀಸ್ ಕಚೇರಿಯ ಹೇಳಿಕೆ ತಿಳಿಸಿದೆ.’ಸಾಕ್ಷಿಗಳ ಹೆಚ್ಚಿನ ಸಂಖ್ಯೆಯ ಹೇಳಿಕೆಗಳು / ಸಾಕ್ಷ್ಯಗಳು, ಆರ್ಕೈವಲ್ / ಎಲೆಕ್ಟ್ರಾನಿಕ್ ಪುರಾವೆಗಳ ಸಂಕಲನ (ಮತ್ತು) ವೈಜ್ಞಾನಿಕ / ವಿಧಿವಿಜ್ಞಾನ ಪುರಾವೆಗಳ ಸಂಕಲನ, ಹಾಗೆಯೇ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಪರೀಕ್ಷೆಗಳನ್ನು ನಡೆಸುವುದು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಅತೀಕ್ ಅಹ್ಮದ್ ಮತ್ತು ಅಶ್ರಫ್ ಜತೆಗೆ 20 ಮಂದಿ ಪೊಲೀಸರ ತಂಡವಿತ್ತು, ಹಂತಕರು ಸುಮಾರು 20 ಸುತ್ತು ಗುಂಡು ಹಾರಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ