ಅತೀಕ್ ಅಹ್ಮದ್ ಮತ್ತು ಸಹೋದರನ ಹತ್ಯೆಯ ತನಿಖೆಗಾಗಿ 3 ಸದಸ್ಯರ ವಿಶೇಷ ತನಿಖಾ ತಂಡ ರಚಿಸಿದ ಯುಪಿ ಪೊಲೀಸ್

ಈ ತಂಡಕ್ಕೆ ಹೆಚ್ಚುವರಿ ಉಪ ಪೊಲೀಸ್ ಆಯುಕ್ತರಾದ ಸತೀಶ್ ಚಂದ್ರ ನೇತೃತ್ವ ವಹಿಸಲಿದ್ದು ಸತೇಂದ್ರ ಪ್ರಸಾದ್ ತಿವಾರಿ, ಸಹಾಯಕ ಪೊಲೀಸ್ ಕಮಿಷನರ್ (ಕೊತ್ವಾಲಿ), ಮತ್ತು ಪ್ರಯಾಗ್​​​ರಾಜ್ ಪೋಲೀಸ್ ಅಪರಾಧ ವಿಭಾಗದ ತನಿಖಾ ಸೆಲ್ ಇನ್ಸ್ಪೆಕ್ಟರ್ ಓಂ ಪ್ರಕಾಶ್ ಇದರಲ್ಲಿದ್ದಾರೆ.

ಅತೀಕ್ ಅಹ್ಮದ್ ಮತ್ತು ಸಹೋದರನ ಹತ್ಯೆಯ ತನಿಖೆಗಾಗಿ 3 ಸದಸ್ಯರ ವಿಶೇಷ ತನಿಖಾ ತಂಡ ರಚಿಸಿದ ಯುಪಿ ಪೊಲೀಸ್
ಅತೀಕ್ ಅಹ್ಮದ್ ಮತ್ತು ಆತನ ಸಹೋದರ
Follow us
|

Updated on: Apr 17, 2023 | 3:58 PM

ಗ್ಯಾಂಗ್​​ಸ್ಟರ್ ರಾಜಕಾರಣಿ ಅತೀಕ್ ಅಹ್ಮದ್ (Atiq Ahmad) ಮತ್ತು ಅವರ ಸಹೋದರ ಅಶ್ರಫ್ ಹತ್ಯೆ ಬಗ್ಗೆ ಉತ್ತರ ಪ್ರದೇಶ (Uttar Pradesh) ಪೊಲೀಸ್ ಪಡೆ ಸ್ಥಾಪಿಸಿದ ಮೂವರು ಸದಸ್ಯರ ವಿಶೇಷ ತನಿಖಾ ತಂಡದಿಂದ (SIT) ತನಿಖೆ ನಡೆಸಲಾಗುವುದು. ಈ ತಂಡಕ್ಕೆ ಹೆಚ್ಚುವರಿ ಉಪ ಪೊಲೀಸ್ ಆಯುಕ್ತರಾದ ಸತೀಶ್ ಚಂದ್ರ ನೇತೃತ್ವ ವಹಿಸಲಿದ್ದು ಸತೇಂದ್ರ ಪ್ರಸಾದ್ ತಿವಾರಿ, ಸಹಾಯಕ ಪೊಲೀಸ್ ಕಮಿಷನರ್ (ಕೊತ್ವಾಲಿ), ಮತ್ತು ಪ್ರಯಾಗ್​​​ರಾಜ್ ಪೋಲೀಸ್ ಅಪರಾಧ ವಿಭಾಗದ ತನಿಖಾ ಸೆಲ್ ಇನ್ಸ್ಪೆಕ್ಟರ್ ಓಂ ಪ್ರಕಾಶ್ ಇದರಲ್ಲಿದ್ದಾರೆ. ತನಿಖೆಯನ್ನು ಗುಣಮಟ್ಟ ಮತ್ತು ಕಾಲಮಿತಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಪೂರ್ಣಗೊಳಿಸುವಂತೆ ಎಸ್‌ಐಟಿಗೆ ಸೂಚಿಸಲಾಗಿದೆ ಎಂದು ಪ್ರಯಾಗ್‌ರಾಜ್‌ನ ಉನ್ನತ ಪೊಲೀಸ್ ಕಚೇರಿಯ ಹೇಳಿಕೆ ತಿಳಿಸಿದೆ.’ಸಾಕ್ಷಿಗಳ ಹೆಚ್ಚಿನ ಸಂಖ್ಯೆಯ ಹೇಳಿಕೆಗಳು / ಸಾಕ್ಷ್ಯಗಳು, ಆರ್ಕೈವಲ್ / ಎಲೆಕ್ಟ್ರಾನಿಕ್ ಪುರಾವೆಗಳ ಸಂಕಲನ (ಮತ್ತು) ವೈಜ್ಞಾನಿಕ / ವಿಧಿವಿಜ್ಞಾನ ಪುರಾವೆಗಳ ಸಂಕಲನ, ಹಾಗೆಯೇ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಪರೀಕ್ಷೆಗಳನ್ನು ನಡೆಸುವುದು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಇವುಗಳು ನ್ಯಾಯಯುತ ಮತ್ತು ಗುಣಮಟ್ಟದ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಅದು ಸೂಚಿಸಿದೆ.ತನಿಖಾ ತಂಡಕ್ಕೆ ಹೆಚ್ಚುವರಿಯಾಗಿ, ಎಸ್‌ಐಟಿಯ ಪ್ರಗತಿಯ ಮೇಲ್ವಿಚಾರಣೆಗಾಗಿ ಯುಪಿ ಪೊಲೀಸ್ ಮಹಾನಿರ್ದೇಶಕ ಆರ್‌ಕೆ ವಿಶ್ವಕರ್ಮ ಅವರು ಮೇಲ್ವಿಚಾರಣಾ ತಂಡವನ್ನು ರಚಿಸಿದ್ದಾರೆ.

ಮೇಲ್ವಿಚಾರಣಾ’ ತಂಡವು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಪ್ರಯಾಗ್ ರಾಜ್ ವಲಯ) ಭಾನು ಭಾಸ್ಕರ್ ಅವರನ್ನು ಮುಖ್ಯಸ್ಥರನ್ನಾಗಿ ಮತ್ತು ಪ್ರಯಾಗ್ ರಾಜ್ ಪೊಲೀಸ್ ಆಯುಕ್ತ ರಮಿತ್ ಶರ್ಮಾ ಮತ್ತು ರಾಜ್ಯದ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರನ್ನು ಸದಸ್ಯರನ್ನಾಗಿ ಪರಿಗಣಿಸುತ್ತದೆ.

ಅತೀಕ್ ಅಹ್ಮದ್ ಹತ್ಯೆಯೂ ನ್ಯಾಯಾಂಗ ತನಿಖೆಗೆ ಒಳಪಡಲಿದೆ.

ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರವಿಂದ್ ಕುಮಾರ್ ತ್ರಿಪಾಠಿ ನೇತೃತ್ವದಲ್ಲಿ ಯುಪಿ ಸರ್ಕಾರ ಭಾನುವಾರ ಮೂವರು ಸದಸ್ಯರ ತಂಡವನ್ನು ರಚಿಸಿದೆ. ಇದು ನಿವೃತ್ತ ನ್ಯಾಯಾಧೀಶ ಬ್ರಿಜೇಶ್ ಕುಮಾರ್ ಸೋನಿ ಮತ್ತು ಮಾಜಿ ಡಿಜಿಪಿ ಸುಭೇಶ್ ಕುಮಾರ್ ಸಿಂಗ್ ಅವರನ್ನು ಒಳಗೊಂಡಿದೆ

ಇದನ್ನೂ ಓದಿ: ಅರವಿಂದ ಕೇಜ್ರಿವಾಲ್ ವಿರುದ್ಧ ಘೋಷಣೆ ಕೂಗಿ ದೆಹಲಿ ವಿಧಾನಸಭೆಯ ಹೊರಗಡೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಝಾನ್ಸಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಯುಪಿ ಪೊಲೀಸ್‌ನ ವಿಶೇಷ ಕಾರ್ಯಪಡೆಯ ಗುಂಡಿಗೆ ಅತೀಕ್ ಅಹ್ಮದ್ ಮಗ ಮತ್ತು ಸಹಾಯಕ ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಅತೀಕ್ ಅಹ್ಮದ್‌ನ ಕೊಲೆ ನಡೆದಿದೆ. ಇಬ್ಬರನ್ನು ಬಂಧಿಸಲು ‘ವಿಶೇಷ ಕಾರ್ಯಾಚರಣೆ’ ನಡೆಸಿದ ಪೊಲೀಸರು ಅಸದ್ ಅಹ್ಮದ್ ಮತ್ತು ಗುಲಾಮ್ ಅವರನ್ನು ಗುಂಡಿಕ್ಕಿ ಕೊಂದಿದ್ದರು.

2005 ಫೆಬ್ರವರಿಯಲ್ಲಿ ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಅವರ ಹತ್ಯೆಗೆ ಸಾಕ್ಷಿಯಾಗಿದ್ದ ವಕೀಲ ಉಮೇಶ್ ಪಾಲ್ ಅವರ ಹತ್ಯೆಯಲ್ಲಿ ಅತೀಕ್ ಮತ್ತು ಅಸದ್ ಇಬ್ಬರೂ ಆರೋಪಿಗಳಾಗಿದ್ದರು. ಉಮೇಶ್ ಪಾಲ್ ಮತ್ತು ಅವರ ಕಾವಲು ನಿಯೋಜಿತ ಇಬ್ಬರು ಯುಪಿ ಪೊಲೀಸರನ್ನು ಪ್ರಯಾಗ್‌ರಾಜ್‌ನಲ್ಲಿರುವ ಮನೆಯ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು