ದೆಹಲಿ: ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಯನ್ನು (Padma Awards 2023) ನಾಳೆ ಮಾರ್ಚ್ 22ರಂದು ಪ್ರದಾನ ಮಾಡಲಾಗುತ್ತಿದೆ. ಕರ್ನಾಟಕ ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (SM Krishna), ಸಾಹಿತಿ ಎಸ್ಎಲ್ ಭೈರಪ್ಪ (SL Bhairappa), ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ (Sudha Murthy) ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ ಒಟ್ಟು 106 ಮಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿವಿಧ ವಿಭಾಗ ಹಾಗೂ ಕ್ಷೇತ್ರಗಳಲ್ಲಿ ಗಮನಾರ್ಹ ಕೆಲಸ ಮಾಡಿ ಕೊಡುಗೆ ನೀಡಿದ ಮಹನೀಯರನ್ನು ಗೌರವಿಸುವ ನಿಟ್ಟಿನಲ್ಲಿ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತದೆ.
ಸುಕಮ ಆಚಾರ್ಯ, ಜೋಧಯ್ಯಬಾಯಿ ಬೈಗಾ, ಪ್ರೇಮ್ಜಿತ್ ಬರಿಯಾ, ಉಷಾ ಬಾರ್ಲೆ, ಮುನೀಶ್ವರ ಚಂದಾವರ, ಹೇಮಂತ್ ಚೌಹಾಣ್ ಭಾನುಭಾಯಿ ಚಿತಾರಾ, ಹೆಮೊಪ್ರೊವಾ ಚುಟಿಯಾ, ನರೇಂದ್ರ ಚಂದ್ರ ದೆಬ್ಬರ್ಮ (ಮರಣೋತ್ತರ), ಸುಭದ್ರಾ ದೇವಿ, ಖಾದರ್ ವಲ್ಲಿ ದೂದೇಕುಲ, ಹೇಂ ಚಂದ್ರ ಗೋಸ್ವಾಮಿ, ಪ್ರಿತಿಕಾನಾ ಗೋಸ್ವಾಮಿ, ರಾಧಾ ಚರಣ್ ಗುಪ್ತಾ, ಮೊಡಡುಗು ವಿಜಯ್ ಗುಪ್ತಾ, ಅಹ್ಮದ್ ಹುಸೇನ್ ಮತ್ತು ಮೊಹಮ್ಮದ್ ಹುಸೇನ್ (ಜೋಡಿ), ದಿಲ್ಶಾದ್ ಹುಸೇನ್, ಭಿಕು ರಾಮ್‌ಜಿ ಇದತೇ, ಸಿ ಐ ಇಸಾಕ್, ರತ್ತನ್ ಸಿಂಗ್ ಜಗ್ಗಿ, ಬಿಕ್ರಮ್ ಬಹದ್ದೂರ್ ಜಮಾತಿಯಾ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: BIFFES: ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಗೆ ಸೆಣೆಸಲಿರುವ ಕನ್ನಡ ಸಿನಿಮಾಗಳು
ರಾಮ್ಕುಯಿವಾಂಗ್ಬೆ ಜೆನೆ, ರಾಕೇಶ್ ರಾಧೇಶ್ಯಾಮ್ ಜುಂಜುನ್ವಾಲಾ (ಮರಣೋತ್ತರ), ರತನ್ ಚಂದ್ರ ಕರ್ ಮಹಿಪತ್ ಕವಿ, ಎಂ ಎಂ ಕೀರವಾಣಿ, ಅರೀಜ್ ಖಂಬಟ್ಟಾ (ಮರಣೋತ್ತರ), ಪರಶುರಾಮ ಕೊಮಾಜಿ ಖುನೆ, ಗಣೇಶ ನಾಗಪ್ಪ ಕೃಷ್ಣರಾಜನಗರ ಮಾಗುನಿ ಚರಣ್ ಕುಂರ್, ಆನಂದ್ ಕುಮಾರ್, ಅರವಿಂದ್ ಕುಮಾರ್, ದೋಮರ್ ಸಿಂಗ್ ಕುನ್ವರ್, ರೈಸಿಂಗ್ಬೋರ್ ಕುರ್ಕಲಾಂಗ್ ಹೀರಾಬಾಯಿ ಲೋಬಿ, ಮೂಲಚಂದ್ ಲೋಧಾ, ರಾಣಿ ಮಾಚಯ್ಯ, ಅಜಯ್ ಕುಮಾರ್ ಮಾಂಡವಿ, ಪ್ರಭಾಕರ ಭಾನುದಾಸ್ ಮಂದೆ ಗಜಾನನ ಜಗನ್ನಾಥ ಮಾನೆ, ಅಂತರ್ಯಾಮಿ ಮಿಶ್ರಾ, ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಪ್ರೊ. ಡಾ. ಮಹೇಂದ್ರ ಪಾಲ್ ಉಮಾ ಶಂಕರ್ ಪಾಂಡೆ, ರಮೇಶ್ ಪರ್ಮಾರ್ ಮತ್ತು ಶಾಂತಿ ಪರ್ಮಾರ್, ನಳಿನಿ ಪಾರ್ಥಸಾರಥಿ, ಹನುಮಂತ ರಾವ್ ಪಸುಪುಲೇಟಿ ರಮೇಶ ಪತಂಗೆ, ಕೃಷ್ಣ ಪಟೇಲ್, ಕೆ ಕಲ್ಯಾಣಸುಂದರಂ ಪಿಳ್ಳೆ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ವಿ ಪಿ ಅಪ್ಪುಕುಟ್ಟನ್ ಪೊದುವಾಳ್, ಕಪಿಲ್ ದೇವ್ ಪ್ರಸಾದ್, ಎಸ್ಆರ್ಡಿ ಪ್ರಸಾದ್, ಶಾ ರಶೀದ್ ಅಹ್ಮದ್ ಕ್ವಾದ್ರಿ, ಸಿವಿ ರಾಜು, ಬಕ್ಷಿ ರಾಮ್, ಚೆರುವಾಯಲ್ ಕೆ ರಾಮನ್, ಸುಜಾತಾ ರಾಮದೊರೈ, ಅಬ್ಬಾರೆಡ್ಡಿ ನಾಗೇಶ್ವರ ರಾವ್, ಪರೇಶಭಾಯಿ ರಾತ್ವಾ, ಬಿ ರಾಮಕೃಷ್ಣ ರೆಡ್ಡಿ, ಮಂಗಳಾ ಕಾಂತಿ ರಾಯ್, ಕೆಸಿ ರನ್ನರಸಂಗಿ ವಡಿವೇಲ್ ಗೋಪಾಲ್ ಮತ್ತು ಮಾಸಿ ಸದಯ್ಯನ್, ಮನೋರಂಜನ್ ಸಾಹು, ಪತಾಯತ್ ಸಾಹು, ಋತ್ವಿಕ್ ಸನ್ಯಾಲ್, ಕೋಟ ಸಚ್ಚಿದಾನಂದ ಶಾಸ್ತ್ರಿ, ಸಂಕುರಾತ್ರಿ ಚಂದ್ರಶೇಖರ್, ಕೆ ಶಾನತೋಯಿಬಾ ಶರ್ಮಾ, ನೆಕ್ರಮ್ ಶರ್ಮಾ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಗುರ್ಚರಣ್ ಸಿಂಗ್, ಲಕ್ಷ್ಮಣ್ ಸಿಂಗ್, ಮೋಹನ್ ಸಿಂಗ್, ತೌನೋಜಮ್ ಚಾವೋಬಾ ಸಿಂಗ್, ಪ್ರಕಾಶ್ ಚಂದ್ರ ಸೂದ್, ನೈಹುನಾವೋ ಸೋರಿ, ಡಾ. ಜನುಮ್ ಸಿಂಗ್ ಸೋಯ್, ಕುಶೋಕ್ ಥಿಕ್ಸೇ ನವಾಂಗ್ ಚಂಬಾ ಸ್ಟಾಂಜಿನ್, ಎಸ್ ಸುಬ್ಬರಾಮನ್, ಮೋವಾ ಸುಬಾಂಗ್, ಪಾಲಂ ಕಲ್ಯಾಣ ಸುಂದರಂ, ರವೀನಾ ರವಿ ಟಂಡನ್, ವಿಶ್ವನಾಥ್ ಪ್ರಸಾದ್ ತಿವಾರಿ, ಧನಿರಾಮ್ ಟೊಟೊ, ತುಲಾ ರಾಮ್ ಉಪ್ರೇತಿ, ಗೋಪಾಲಸಾಮಿ ವೇಲುಚಾಮಿ, ಈಶ್ವರ ಚಂದರ್ ವರ್ಮಾ, ಕೂಮಿ ನಾರಿಮನ್ ವಾಡಿಯಾ, ಕರ್ಮ ವಾಂಗ್ಚು (ಮರಣೋತ್ತರ), ಗುಲಾಮ್ ಮುಹಮ್ಮದ್ ಝಾಝ್ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
Watch LIVE?#PadmaAwards 2023
President #DroupadiMurmu to present #PadmaAwards 2023 at Rashtrapati Bhavan
?️ 22 March 2023
? 6 PMWatch on #PIB‘s?
Facebook: https://t.co/ykJcYlMTtL
YouTube: https://t.co/DK2bQyadxp— PIB India (@PIB_India) March 21, 2023
ಮುಲಾಯಂ ಸಿಂಗ್ ಯಾದವ್ (ಮರಣೋತ್ತರ), ಬಾಲಕೃಷ್ಣ ದೋಷಿ (ಮರಣೋತ್ತರ), ಜಾಕಿರ್ ಹುಸೇನ್, ಎಸ್ ಎಂ ಕೃಷ್ಣ, ದಿಲೀಪ್ ಮಹಲನಾಬಿಸ್ (ಮರಣೋತ್ತರ), ಶ್ರೀನಿವಾಸ್ ವರದನ್ ಅವರು ನಾಳೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಎಸ್ಎಲ್ ಭೈರಪ್ಪ, ಕುಮಾರ್ ಮಂಗಲಂ ಬಿರ್ಲಾ, ದೀಪಕ್ ಧಾರ್, ವಾಣಿ ಜೈರಾಮ್, ಸ್ವಾಮಿ ಚಿನ್ನ ಜೀಯರ್, ಸುಮನ್ ಕಲ್ಯಾಣಪುರ, ಕಪಿಲ್ ಕಪೂರ್, ಸುಧಾ ಮೂರ್ತಿ, ಕಮಲೇಶ್ ಡಿ ಪಟೇಲ್ ಅವರು ನಾಳೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಮಾಜಿ ಸಿಎಂ ಎಸ್.ಎಂ.ಕೃಷ್ಣ (ಸಾರ್ವಜನಿಕ ವ್ಯವಹಾರ ಕ್ಷೇತ್ರ), ಎಸ್ಎಲ್ ಭೈರಪ್ಪ (ಸಾಹಿತ್ಯ ಮತ್ತು ಶಿಕ್ಷಣ), ಸುಧಾ ಮೂರ್ತಿ (ಸಮಾಜ ಕಾರ್ಯ), ಖಾದರ್ ವಲ್ಲಿ ದೂದೇಕುಲ (ವಿಜ್ಞಾನ ಮತ್ತು ಎಂಜಿನಿಯರಿಂಗ್), ಎಂಎಸ್ ರಾಣಿ ಮಾಚಯ್ಯ (ಕಲೆ), ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ (ಕಲೆ), ಶಾ ರಶೀದ್ ಅಹ್ಮದ್ ಕ್ವಾದ್ರಿ (ಕಲೆ), ಎಸ್ ಸುಬ್ರಮಣ್ (ಇತರ ಕ್ಷೇತ್ರ).
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:06 pm, Tue, 21 March 23