AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Migrant Workers: ತವರಿಗೆ ಹೋದ ವಲಸೆ ಕಾರ್ಮಿಕರು ವಾಪಸಾಗುತ್ತಿಲ್ಲ; ಭಾರೀ ಸಂಕಷ್ಟದಲ್ಲಿ ತಮಿಳುನಾಡಿನ ಉದ್ಯಮಗಳು

ತಾಯ್ನಾಡಿಗೆ ತೆರಳಿರುವ ವಲಸೆ ಕಾರ್ಮಿಕರ ವಾಪಸಾತಿ ವಿಳಂಬವಾಗುತ್ತಿರುವುದು ತಮಿಳುನಾಡಿನ ಕೈಗಾರಿಕೋದ್ಯಮಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಾರ್ಮಿಕರು ಮುಖ್ಯವಾಗಿ ಹೋಳಿ ಹಬ್ಬದ ಕಾರಣ ತವರು ರಾಜ್ಯಗಳಿಗೆ ತೆರಳಿದ್ದರು. ಈ ಮಧ್ಯೆ, ಸ್ಥಳೀಯರ ದಾಳಿಗಳ ಕುರಿತಾದ ನಕಲಿ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವುದು ವಲಸೆ ಕಾರ್ಮಿಕರಲ್ಲಿ ಭಯಕ್ಕೆ ಕಾರಣವಾಗಿದೆ.

Migrant Workers: ತವರಿಗೆ ಹೋದ ವಲಸೆ ಕಾರ್ಮಿಕರು ವಾಪಸಾಗುತ್ತಿಲ್ಲ; ಭಾರೀ ಸಂಕಷ್ಟದಲ್ಲಿ ತಮಿಳುನಾಡಿನ ಉದ್ಯಮಗಳು
ಸಾಂದರ್ಭಿಕ ಚಿತ್ರ
ಗಣಪತಿ ಶರ್ಮಾ
|

Updated on:Mar 21, 2023 | 8:25 PM

Share

ಮುಖ್ಯಾಂಶಗಳು

  • ವಲಸೆ ಕಾರ್ಮಿಕರು ವಾಪಸಾಗದಿರುವುದರಿಂದ ತಮಿಳುನಾಡಿನ ಕೈಗಾರಿಕೋದ್ಯಮಿಗಳಲ್ಲಿ ಆತಂಕ
  • ಹೋಟೆಲ್ ಉದ್ಯಮದ ಮೇಲೂ ಭಾರೀ ಹೊಡೆತ
  • ವಲಸೆ ಕಾರ್ಮಿಕರು ಕರ್ನಾಟಕದತ್ತ ಮುಖ ಮಾಡುವ ಆತಂಕದಲ್ಲಿ ತಮಿಳುನಾಡು ಉದ್ಯಮಿಗಳು

ಚೆನ್ನೈ: ತಾಯ್ನಾಡಿಗೆ ತೆರಳಿರುವ ವಲಸೆ ಕಾರ್ಮಿಕರ (Migrant Workers) ವಾಪಸಾತಿ ವಿಳಂಬವಾಗುತ್ತಿರುವುದು ತಮಿಳುನಾಡಿನ ಕೈಗಾರಿಕೋದ್ಯಮಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಾರ್ಮಿಕರು ಮುಖ್ಯವಾಗಿ ಹೋಳಿ ಹಬ್ಬದ ಕಾರಣ ತವರು ರಾಜ್ಯಗಳಿಗೆ ತೆರಳಿದ್ದರು. ಈ ಮಧ್ಯೆ, ಸ್ಥಳೀಯರ ದಾಳಿಗಳ ಕುರಿತಾದ ನಕಲಿ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವುದು ವಲಸೆ ಕಾರ್ಮಿಕರಲ್ಲಿ ಭಯಕ್ಕೆ ಕಾರಣವಾಗಿದೆ. ಹೀಗಾಗಿ ಅವರು ತಮಿಳುನಾಡಿಗೆ ಮರಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇದು ರಾಜ್ಯದ ರಾಜ್ಯದ ಕೈಗಾರಿಕಾ ವಲಯದಲ್ಲಿ ಆತಂಕ ಸೃಷ್ಟಿಸಿದ್ದು, ಉದ್ಯೋಗದಾತರು ಕೆಲಸ ಸ್ಥಗಿತವಾಗುವ ಮತ್ತು ಆದಾಯ ಕುಸಿಯುವ ಭಯದಲ್ಲಿದ್ದಾರೆ.

ಹೋಟೆಲ್ ಉದ್ಯಮವು ನೇರವಾಗಿ ಮತ್ತು ಪರೋಕ್ಷವಾಗಿ ಚೆನ್ನೈನಲ್ಲಿ 10 ಲಕ್ಷ ಜನರಿಗೆ ಉದ್ಯೋಗ ನೀಡುತ್ತದೆ. ಈ ಪೈಕಿ 2.5 ಲಕ್ಷಕ್ಕೂ ಹೆಚ್ಚು ಜನರು ಹೋಟೆಲ್, ಬೇಕರಿ, ಟೀ ಅಂಗಡಿ ಇತ್ಯಾದಿಗಳಲ್ಲಿ ಕೆಲಸ ಮಾಡುತ್ತಿರುವ ಉತ್ತರ ರಾಜ್ಯಗಳ ವಲಸೆ ಕಾರ್ಮಿಕರಾಗಿದ್ದಾರೆ. ಸಾಮಾನ್ಯವಾಗಿ ಅವರು ವರ್ಷಕ್ಕೊಮ್ಮೆ ಒಂದು ತಿಂಗಳ ರಜೆ ಪಡೆದು ತವರಿಗೆ ಹೋಗುತ್ತಾರೆ. ಆದರೆ ಈಗ ಸ್ಥಳೀರು ವಲಸಿಗರ ಮೇಲೆ ಮಾಡುತ್ತಿರುವ ದಾಳಿಗಳಿಗೆ ಸಂಬಂಧಿಸಿದ ನಕಲಿ ವಿಡಿಯೋಗಳು ಸೃಷ್ಟಿಸಿರುವ ಭಯದಿಂದಾಗಿ ಅವರು ಹಿಂದಿರುಗುವ ಬಗ್ಗೆ ಅನುಮಾನಗಳು ಹೆಚ್ಚಾಗಿವೆ. ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರಿಲ್ಲದೆ, ನಮ್ಮ ವ್ಯವಹಾರವು ನಷ್ಟಕ್ಕೆ ಸಿಲುಕಲಿದೆ ಎಂದು ಚೆನ್ನೈ ಹೋಟೆಲ್ ಸಂಘದ ಅಧ್ಯಕ್ಷ ಎಂ. ರವಿ ತಿಳಿಸಿರುವುದಾಗಿ ‘ನ್ಯೂಸ್ 9’ ವರದಿ ಮಾಡಿದೆ. ಸಂಘವು ಚೆನ್ನೈನಲ್ಲಿ ಸುಮಾರು 10,000 ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಸದಸ್ಯತ್ವ ಹೊಂದಿದೆ.

ವಲಸೆ ಕಾರ್ಮಿಕರ ಸುರಕ್ಷತೆ ಮತ್ತು ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಬೇಕೆಂದು ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Tamil Nadu: ತಮಿಳುನಾಡು; ಡಿಎಂಕೆ ಕೌನ್ಸಿಲರ್ ನೇತೃತ್ವದ ಗುಂಪಿನಿಂದ ಹಲ್ಲೆ, ಯೋಧ ಸಾವು

ತಮಿಳುನಾಡು ಸುರಕ್ಷಿತವಾಗಿಲ್ಲ ಎಂದು ವಲಸೆ ಕಾರ್ಮಿಕರಿಗೆ ಅನಿಸಿದರೆ ಅವರು ತಮಿಳುನಾಡಿಗೆ ಬರುವುದರ ಬದಲು ಕರ್ನಾಟಕದಂತಹ ನೆರೆಯ ರಾಜ್ಯಗಳಿಗೆ ಹೋಗಬಹುದು. ಆದ್ದರಿಂದ ಸರ್ಕಾರ ವಲಸೆ ಕಾರ್ಮಿಕರ ಸುರಕ್ಷತೆಯನ್ನು ಖಾತರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವಲಸೆ ಕಾರ್ಮಿಕರು ತಮಿಳುನಾಡಿನಾದ್ಯಂತ ಕೆಲಸ ಮಾಡುತ್ತಿದ್ದರೂ ಕೊಯಮತ್ತೂರು ಮತ್ತು ತಿರುಪ್ಪೂರ್ ಜಿಲ್ಲೆಗಳು ಕ್ರಮವಾಗಿ ಉತ್ಪಾದನೆ ಮತ್ತು ಗಾರ್ಮೆಂಟ್ ಉದ್ಯಮಗಳಿಗೆ ಹೆಸರುವಾಸಿಯಾಗಿದ್ದು, ವಲಸೆ ಕಾರ್ಮಿಕರನ್ನು ಹೆಚ್ಚು ಅವಲಂಬಿಸಿವೆ.

ಕಾರ್ಮಿಕರ ಕೊರತೆಯಿಂದಾಗಿ ಅನೇಕ ಕೈಗಾರಿಕಾ ಘಟಕಗಳಲ್ಲಿ ಉತ್ಪಾದನೆಯು ತೀವ್ರವಾಗಿ ಕುಸಿದಿದೆ ಎಂದು ಕೊಯಮತ್ತೂರು ಕೈಗಾರಿಕಾ ಸಂಸ್ಥೆಗಳ ಒಕ್ಕೂಟದ ಸಂಚಾಲಕ ಜೇಮ್ಸ್ ಎಂ ತಿಳಿಸಿದ್ದಾರೆ.

ಪ್ರಮುಖ ಕಂಪನಿಗಳಲ್ಲಿ, ಕಾರ್ಮಿಕರ ಕೊರತೆಯಿಂದ ಉತ್ಪಾದನೆಯು ಶೇ 10-15ರಷ್ಟು ಕುಂಠಿತವಾಗಿದೆ. ಇರುವ ಕಾರ್ಮಿಕರನ್ನೇ ಹೆಚ್ಚುವರಿ ದುಡಿಸಿಕೊಂಡು ಉತ್ಪಾದನೆ ಮಾಡುವ ಸವಾಲುಗಳನ್ನು ಉದ್ಯಮಗಳು ಎದುರಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ಸುಮಾರು 1ರಿಂದ 1.5 ಲಕ್ಷ ವಲಸೆ ಕಾರ್ಮಿಕರು ತವರು ರಾಜ್ಯಗಳಿಗೆ ತೆರಳಿದವರು ವಾಪಸಾಗಿಲ್ಲ ಎಂಬುದು ಕೈಗಾರಿಕಾ ಸಂಸ್ಥೆಗಳ ಒಕ್ಕೂಟದ ಲೆಕ್ಕಾಚಾರಗಳಿಂದ ತಿಳಿದುಬಂದಿದೆ ಎಂದು ವರದಿ ಉಲ್ಲೇಖಿಸಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Tue, 21 March 23

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ