ಕಾರ್ಗಿಲ್​ ದಿವಸ್​ ಆಚರಣೆಗಾಗಿ ಜಮ್ಮು-ಕಾಶ್ಮೀರ, ಲಡಾಖ್​ಗೆ ತೆರಳಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್​ 

| Updated By: Lakshmi Hegde

Updated on: Jul 18, 2021 | 2:42 PM

Kargil Vijay Diwas: ಭಾರತ 1999ರ ಜುಲೈ 26ರಂದು ಪಾಕ್ ವಿರುದ್ಧ​ ಕಾರ್ಗಿಲ್​ ಯುದ್ಧವನ್ನು ಗೆದ್ದಿದೆ. ಅಂದು ಭಾರತದ ಅದೆಷ್ಟೋ ವೀರಯೋಧರು ಹುತಾತ್ಮರಾಗಿದ್ದಾರೆ. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಕಾರ್ಗಿಲ್​ ದಿವಸ್ ಆಚರಿಸಲಾಗುತ್ತದೆ.

ಕಾರ್ಗಿಲ್​ ದಿವಸ್​ ಆಚರಣೆಗಾಗಿ ಜಮ್ಮು-ಕಾಶ್ಮೀರ, ಲಡಾಖ್​ಗೆ ತೆರಳಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್​ 
ರಾಮನಾಥ ಕೋವಿಂದ್​
Follow us on

ಜುಲೈ 26ರಂದು ಕಾರ್ಗಿಲ್​ ದಿವಸ್​ ಆಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ (Ram Nath Kovind)​ ಅವರು ಬರುವ ವಾರ ಮೂರು ದಿನಗಳ ಕಾಲ ಜಮ್ಮು-ಕಾಶ್ಮೀರ ಮತ್ತು ಲಡಾಖ್​ಗೆ ಭೇಟಿ ಕೊಡಲಿದ್ದಾರೆ. ಅವರು ಜುಲೈ 25ರಂದು ಜಮ್ಮುಕಾಶ್ಮೀರ (Jammu-Kashmir) ಕ್ಕೆ ತೆರಳಿ, ಮರುದಿನ ಕಾರ್ಗಿಲ್​ ದಿವಸ್(Kargil Diwas)​ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಮೂಲಗಳು ತಿಳಿಸಿವೆ. ರಾಷ್ಟ್ರಪತಿಯವರು ತಮ್ಮ ಭೇಟಿ ಸಮಯದಲ್ಲಿ ಕಾರ್ಗಿಲ್​ ಯುದ್ಧದ ಸ್ಮಾರಕಕ್ಕೆ ಭೇಟಿ ಕೊಡುವ ಸಾಧ್ಯತೆ ಇದೆ. ಆದರೆ ಅವರ ಪ್ರವಾಸದ ಸಂಪೂರ್ಣ ಯೋಜನೆಯ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎನ್ನಲಾಗಿದೆ.

ಭಾರತ 1999ರ ಜುಲೈ 26ರಂದು ಪಾಕ್ ವಿರುದ್ಧ​ ಕಾರ್ಗಿಲ್​ ಯುದ್ಧವನ್ನು ಗೆದ್ದಿದೆ. ಅಂದು ಭಾರತದ ಅದೆಷ್ಟೋ ವೀರಯೋಧರು ಹುತಾತ್ಮರಾಗಿದ್ದಾರೆ. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಮತ್ತು ವಿಜಯದ ಸಂಭ್ರಮ ನೆನಪಿಸಿಕೊಳ್ಳುವ ನಿಮಿತ್ತ ಪ್ರತಿವರ್ಷವೂ ಜುಲೈ 26ರಂದು ಕಾರ್ಗಿಲ್​ ದಿವಸ್​ ಆಚರಿಸುತ್ತದೆ. ಹಾಗೇ ಈ ಬಾರಿ ಆಪರೇಶನ್​ ವಿಜಯ್​ (Operation Vijay)ದ 22ನೇ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ.

ಪಾಕಿಸ್ತಾನ ಸೈನಿಕರು ಮತ್ತು ನುಸುಳುಕೋರರಿಂದ ಆಕ್ರಮಿಸಲ್ಪಟ್ಟಿದ್ದ ಕಾರ್ಗಿಲ್ ವಲಯದಲ್ಲಿ ಭಾರತೀಯ ಯೋಧರು ಆಪರೇಶನ್​ ವಿಜಯ್​ ನಡೆಸಿದ ಬಳಿಕ ಎರಡೂ ದೇಶಗಳ ನಡುವೆ ಯುದ್ಧ ನಡೆದಿತ್ತು. 1999ರ ಮೇ ತಿಂಗಳಿನಿಂದಲೂ 1999ರ ಜುಲೈ 26ರವರೆಗೆ ಯುದ್ಧ ನಡೆದು, ಅಂತಿಮವಾಗಿ ವಿಜಯ ಭಾರತಕ್ಕೆ ದಕ್ಕಿತ್ತು. ಈಗಲೂ ಸಹ ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ಸದಾ ಕಾಲುಕೆರೆದುಕೊಂಡು ಬರುತ್ತಲೇ ಇರುತ್ತದೆ. 2019ರಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದಾಗಿನಿಂದ ಪಾಕ್​ ಮತ್ತಷ್ಟು ಕಿಡಿಕಾರುತ್ತಿದೆ.

ಇದನ್ನೂ ಓದಿ: Viral Video: ವಿದೇಶಿ ಮಗುವಿನ ಬಾಯಲ್ಲಿ ನಮಸ್ತೇ ಇಂಡಿಯಾ! ವಿಡಿಯೋ ನೋಡಿ ದೃಷ್ಟಿ ತೆಗೆದ ಭಾರತೀಯರು

President Kovind to visit Jammu Kashmir and Ladakh to celebrate Kargil Diwas

Published On - 2:39 pm, Sun, 18 July 21