ಲಕ್ನೋ, ಫೆ.19: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಫೆ.19) ಉತ್ತರಪ್ರದೇಶದ ಸಂಭಾಲ್‌ನಲ್ಲಿ ಹಿಂದೂ ದೇಗುಲ ಕಲ್ಕಿ ಧಾಮ್‌ನ ಶಂಕುಸ್ಥಾಪನೆ (Shri Kalki Dham Temple)ಮಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜತೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಶ್ರೀ ಕಲ್ಕಿ ಧಾಮ ನಿರ್ಮಾಣ ಟ್ರಸ್ಟ್‌ನ ಅಧ್ಯಕ್ಷ ಆಚಾರ್ಯ ಪ್ರಮೋದ್ ಕೃಷ್ಣಂ ಉಪಸ್ಥಿತರಿದ್ದರು. ಇದರ ಜತೆಗೆ ಪ್ರಧಾನಿ ಮೋದಿ ಅವರು ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023ರಲ್ಲೂ ಭಾಗವಹಿಸಲಿದ್ದಾರೆ. ಅಲ್ಲಿ 10 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 14,000 ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಪ್ರಧಾನಿ ಮೋದಿ ಉತ್ತರಪ್ರದೇಶದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಚಾಲನೆಯನ್ನು ನೀಡಲಿದ್ದಾರೆ. ಇದಕ್ಕೂ ಮುನ್ನ ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ನಗರಗಳನ್ನು ದೀಪಗಳಿಂದ ಅಲಂಕರಿಸಲಾಗಿದೆ. ಹಾಗೂ ಅನೇಕ ಸಿದ್ಧತೆಗಳನ್ನು ನಡೆಸಲಾಗಿದೆ. ಕಲ್ಕಿ ಧಾಮ್‌ನ ಶಂಕುಸ್ಥಾಪನೆ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ಮೋದಿ ಅವರು ಭಕ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸಭಾ ವೇದಿಕೆಯಲ್ಲಿ ಅನೇಕ ಸಂತರು ಕೂಡ ಭಾಗಿಯಾಗಿದ್ದಾರೆ.
#WATCH | Uttar Pradesh: Prime Minister Narendra Modi performs pooja during the foundation stone laying ceremony of Hindu shrine Kalki Dham in Sambhal.
Uttar Pradesh CM Yogi Adityanath and Shri Kalki Dham Nirman Trust Chairman Acharya Pramod Krishnam also present. pic.twitter.com/F4CT2rff7x
— ANI (@ANI) February 19, 2024
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಮಾಡಲಾಗಿದೆ. ಇದು ಮುಂಬರುವ ಸಾವಿರ ವರ್ಷಗಳ ಮೇಲೆ ಪ್ರಭಾವ ಬೀರುವ ಹೊಸ ಯುಗದ ಆರಂಭ ಎಂದು ಹೇಳಿದ್ದಾರೆ. ಇಂದು ಸಂತರ ಶ್ರದ್ಧೆ ಮತ್ತು ಸಾರ್ವಜನಿಕರ ಉತ್ಸಾಹದಿಂದ ಮತ್ತೊಂದು ಪುಣ್ಯಕ್ಷೇತ್ರದ ಶಂಕುಸ್ಥಾಪನೆ ನಡೆಯುತ್ತಿದ್ದು, ಆಚಾರ್ಯರು, ಸಂತರ ಸಮ್ಮುಖದಲ್ಲಿ ಭವ್ಯ ಕಲ್ಕಿಧಾಮದ ಶಂಕುಸ್ಥಾಪನೆ ನೆರವೇರಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ಕಲ್ಕಿಧಾಮವು ಭಾರತೀಯ ನಂಬಿಕೆಯ ಮತ್ತೊಂದು ಮಹಾನ್ ಕೇಂದ್ರವಾಗಿ ಹೊರಹೊಮ್ಮುತ್ತದೆ ಎಂಬ ವಿಶ್ವಾಸ ನನಗಿದೆ” ಎಂದು ಅವರು ಹೇಳಿದರು.
ಇಂದು, ಉತ್ತರ ಪ್ರದೇಶದ ನೆಲದಲ್ಲಿ ಭಕ್ತಿ, ಭಾವನೆ ಮತ್ತು ಆಧ್ಯಾತ್ಮಿಕತೆಯ ಮತ್ತೊಂದು ಹೊಳೆ ಹರಿಯಲು ಸಿದ್ಧವಾಗಿದೆ ಎಂದು ಹೇಳಿದರು. ಸಂತರ ಭಕ್ತಿ ಮತ್ತು ಜನರ ಉತ್ಸಾಹದಿಂದ ಮತ್ತೊಂದು ಪವಿತ್ರ ಸ್ಥಳದ ಅಡಿಪಾಯ ಹಾಕಲಾಗುತ್ತಿದೆ. ನಿಮ್ಮೆಲ್ಲರ ಸಮ್ಮುಖದಲ್ಲಿ ಭವ್ಯವಾದ ಕಲ್ಕಿ ಧಾಮದ ಶಿಲಾನ್ಯಾಸವನ್ನು ನೆರವೇರಿಸುವ ಮೂಲಕ ಕಲ್ಕಿಧಾಮವು ಮತ್ತೊಂದು ಶ್ರೇಷ್ಠ ನಂಬಿಕೆಯ ಕೇಂದ್ರವಾಗಿ ಹೊರಹೊಮ್ಮಲಿದೆ. ಹಾಗೂ ಇಂದು ಪುಣ್ಯ ದಿನ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನವೂ ಆಗಿದೆ ಎಂದರು.
#WATCH | UP: At the foundation stone laying ceremony of the Hindu shrine Kalki Dham in Sambhal, PM Modi says “…Today is also the birth anniversary of Chhatrapati Shivaji Maharaj, hence this day becomes more sacred and more inspiring…On this occasion, I respectfully bow at the… pic.twitter.com/uPvYdLY3PJ
— ANI (@ANI) February 19, 2024
ಇದು ಭಾರತ ಕಾಣುತ್ತಿರುವ ಸಾಂಸ್ಕೃತಿಕ ಪುನರುಜ್ಜೀವನ ಮತ್ತು ನಮ್ಮ ಅಸ್ಮಿತೆಯ ಬಗ್ಗೆ ಹೆಮ್ಮೆ ಪಡುವ ಕ್ಷಣ. ನಮ್ಮ ಸಾಂಸ್ಕೃತಿಯನ್ನು ನೆನಪಿಸಿಕೊಳ್ಳಬೇಕಿದೆ. ಇದನ್ನು ಛತ್ರಪತಿ ಶಿವಾಜಿ ಮಹಾರಾಜರ ದಿನದ ನೆನಪಿಸಿಕೊಳ್ಳುವುದು ಮತ್ತಷ್ಟು ಉತ್ತಮ ಎಂದು ಹೇಳಿದರು. ಈ ಕಾರ್ಯಕ್ರಮದ ಮೋದಿ ಅವರು ಛತ್ರಪತಿ ಶಿವಾಜಿ ಮಹಾರಾಜರಿಗೆ ಪುಷ್ಪಾರ್ಚನೆ ಮಾಡಿದರು.
ಇದನ್ನೂ ಓದಿ: 370ನೇ ವಿಧಿ ತೆಗೆದು ಹಾಕಿದ ಬಳಿಕ ಜಮ್ಮು ಕಾಶ್ಮೀರಕ್ಕೆ ಪ್ರಧಾನಿ ಮೋದಿ ಮೊದಲ ಭೇಟಿ
ಇನ್ನು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಯುಪಿ ಸಿಎಂ ಯೋಗಿ ಅವರು, ಕಳೆದ 10 ವರ್ಷಗಳಲ್ಲಿ ನಾವು ಹೊಸ ಭಾರತವನ್ನು ನೋಡಿದ್ದೇವೆ. ಹೊಸ ಭಾರತದಲ್ಲಿ ದೇಶವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಕಲ್ಕಿ ಧಾಮ ನಿರ್ಮಾಣ ಟ್ರಸ್ಟ್ ಅಧ್ಯಕ್ಷ, ಆಚಾರ್ಯ ಪ್ರಮೋದ್ ಕೃಷ್ಣಂ, 18 ವರ್ಷಗಳ ಹಿಂದೆ ಕಂಡ ‘ಸನಾತನ ಧರ್ಮ’ದ ಕನಸನ್ನು ನನಸು ಮಾಡಲು ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಸಂತರು ಸಂಭಾಲ್‌ನಲ್ಲಿ ಜಮಾಯಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ