PSLV-ಸಿ-49 ರಾಕೆಟ್ ಮೂಲಕ 10 ಉಪಗ್ರಹಗಳನ್ನು ಆಂಧ್ರದ ನೆಲ್ಲೂರು ಜಿಲ್ಲೆ ಶ್ರೀಹರಿಕೋಟದ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ.
ಇಒಎಸ್-01 ಭೂವೀಕ್ಷಣೆ ಸ್ವದೇಶಿ ಉಪಗ್ರಹದ ಜೊತೆಗೆ ಒಂಬತ್ತು ವಿದೇಶಿ ಉಪಗ್ರಹಗಳ ಉಡಾವಣೆ ಮಾಡಿದ್ದಾರೆ. ಜೊತೆಗೆ ಉಡಾವಣೆ ಮಾಡಿದ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಇಸ್ರೊ ವಿಜ್ಞಾನಿಗಳು ಯಶ ಕಂಡಿದ್ದು, ಇಸ್ರೊ ವಿಜ್ಞಾನಿಗಳ ಈ ಸಾಧನೆಗೆ ಇಸ್ರೊ ಮುಖ್ಯಸ್ಥರು ಸೇರಿ ಅನೇಕ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಇಸ್ರೋ ವಿಜ್ಞಾನಿಗಳು ಒಟ್ಟು 10 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ್ದು, ಇದರಲ್ಲಿ ಒಂದು ದೇಶೀಯ, ಇನ್ನು 9 ವಿದೇಶಿ ಉಪಗ್ರಹಗಳು ಸೇರಿವೆ. ಆಂಧ್ರ ಪ್ರದೇಶದಲ್ಲಿ ಭಾರಿ ಮಳೆಯ ಕಾರಣ , ಪಿ.ಎಸ್.ಎಲ್.ವಿ -49 ರಾಕೆಟನ್ನು 10 ನಿಮಿಷ ತಡವಾಗಿ ಇಸ್ರೊ ಉಡಾವಣೆ ಮಾಡಿತು.
WATCH ISRO launches EOS01 and 9 customer satellites from Satish Dhawan Space Centre in Sriharikota pic.twitter.com/2ifOeAYIpx
— ANI (@ANI) November 7, 2020
Published On - 4:05 pm, Sat, 7 November 20