ಇಂದಿನಿಂದ ಖೇಲ್​ ಖತಂ: PUBG ಪೂರಾ ಬಂದ್​!

|

Updated on: Oct 30, 2020 | 2:57 PM

ದೆಹಲಿ: ದೇಶದ ಯುವ ಜನತೆಯನ್ನು ತನ್ನತ್ತ ಸೆಳೆದಿದ್ದ ಪಾಪ್ಯುಲರ್​ ಮೊಬೈಲ್​ ಗೇಮ್​ PUBG ಇದೀಗ ವಿದಾಯ ಹೇಳುವ ಕಾಲ ಬಂದಿದೆ. ಇಂದಿನಿಂದ PUBG ಮೊಬೈಲ್​ ಹಾಗೂ PUBG ಮೊಬೈಲ್ ಲೈಟ್​ ಌಪ್​ಗಳು ದೇಶದಲ್ಲಿ ಆಡಲು ಲಭ್ಯವಿರುವುದಿಲ್ಲ. ಚೀನಾ ಮೂಲದ ಈ ಗೇಮಿಂಗ್​ ಌಪ್​ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದ್ದ ಹಿನ್ನೆಲೆಯಲ್ಲಿ ಈ ಌಪ್​ನ ಗೂಗಲ್​ ಪ್ಲೇ ಸ್ಟೋರ್​ ಹಾಗೂ ಌಪಲ್​ ಌಪ್​ ಸ್ಟೋರ್​ನಿಂದ ಕಿತ್ತೊಗೆಯಲಾಗಿತ್ತು. ಆದರೆ, ಈ ಹಿಂದೆ PUBG ಡೌನ್​ಲೋಡ್​ ಮಾಡಿಕೊಂಡಿದ್ದ ಕೆಲವರಿಗೆ ಇದನ್ನು […]

ಇಂದಿನಿಂದ ಖೇಲ್​ ಖತಂ: PUBG ಪೂರಾ ಬಂದ್​!
Follow us on

ದೆಹಲಿ: ದೇಶದ ಯುವ ಜನತೆಯನ್ನು ತನ್ನತ್ತ ಸೆಳೆದಿದ್ದ ಪಾಪ್ಯುಲರ್​ ಮೊಬೈಲ್​ ಗೇಮ್​ PUBG ಇದೀಗ ವಿದಾಯ ಹೇಳುವ ಕಾಲ ಬಂದಿದೆ. ಇಂದಿನಿಂದ PUBG ಮೊಬೈಲ್​ ಹಾಗೂ PUBG ಮೊಬೈಲ್ ಲೈಟ್​ ಌಪ್​ಗಳು ದೇಶದಲ್ಲಿ ಆಡಲು ಲಭ್ಯವಿರುವುದಿಲ್ಲ.

ಚೀನಾ ಮೂಲದ ಈ ಗೇಮಿಂಗ್​ ಌಪ್​ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದ್ದ ಹಿನ್ನೆಲೆಯಲ್ಲಿ ಈ ಌಪ್​ನ ಗೂಗಲ್​ ಪ್ಲೇ ಸ್ಟೋರ್​ ಹಾಗೂ ಌಪಲ್​ ಌಪ್​ ಸ್ಟೋರ್​ನಿಂದ ಕಿತ್ತೊಗೆಯಲಾಗಿತ್ತು. ಆದರೆ, ಈ ಹಿಂದೆ PUBG ಡೌನ್​ಲೋಡ್​ ಮಾಡಿಕೊಂಡಿದ್ದ ಕೆಲವರಿಗೆ ಇದನ್ನು ಆಡುವ ಅವಕಾಶವಿತ್ತು. ಇದೀಗ, ಌಪ್​ನ ನಿಮಾತೃ ಕಂಪನಿಯಾದ ಚೀನಾ ಮೂಲದ ಟೆನ್ಸೆಂಟ್​ ಗೇಮ್ಸ್ ಭಾರತದಲ್ಲಿರುವ ತನ್ನ ಸರ್ವರ್​ಗಳನ್ನು ಬಂದ್​ ಮಾಡಲಿದೆ. ಇದರಿಂದ, PUBG ಗೇಮ್​ ಪ್ರಿಯರಿಗೆ ತಮ್ಮ ನೆಚ್ಚಿನ ಆಟವಾಡುವ ಅವಕಾಶ ಸಿಗುವುದಿಲ್ಲ.