ಪಂಜಾಬ್​ನ ಗುರುದ್ವಾರದಲ್ಲಿ ನಡೆದ ಗುಂಡಿನ ದಾಳಿಗೆ ಪೊಲೀಸ್ ಅಧಿಕಾರಿ ಬಲಿ, ಮೂವರಿಗೆ ಗಾಯ

ಪಂಜಾಬ್​ನ ಕಪುರ್ತಲಾ ಜಿಲ್ಲೆಯ ಗುರುದ್ವಾರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್​ ಅಧಿಕಾರಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.

ಪಂಜಾಬ್​ನ ಗುರುದ್ವಾರದಲ್ಲಿ ನಡೆದ ಗುಂಡಿನ ದಾಳಿಗೆ ಪೊಲೀಸ್ ಅಧಿಕಾರಿ ಬಲಿ, ಮೂವರಿಗೆ ಗಾಯ
ಗುಂಡಿನ ದಾಳಿ
Image Credit source: News 9

Updated on: Nov 23, 2023 | 8:53 AM

ಪಂಜಾಬ್​ನ ಕಪುರ್ತಲಾ ಜಿಲ್ಲೆಯ ಗುರುದ್ವಾರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್​ ಅಧಿಕಾರಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಕಪುರ್ತಲಾದ ಶ್ರೀ ಅಕಲ್ ಬುಂಗಾ ಗುರುದ್ವಾರದಲ್ಲಿ ಪೊಲೀಸರು ಮತ್ತು ನಿಹಾಂಗ್ ಸಿಖ್‌ಗಳ ಗುಂಪಿನ ನಡುವೆ ಘರ್ಷಣೆಯ ನಂತರ ಗುಂಡಿನ ಘಟನೆ ನಡೆದಿದೆ. 2020 ರ ಆರಂಭದಲ್ಲಿ, ನಿಹಾಂಗ್ ಪ್ರತಿಭಟನಾಕಾರರು ಕೊರೊನಾ ಅವಧಿಯಲ್ಲಿ ಲಾಕ್‌ಡೌನ್ ಹೇರಲು ಪ್ರಯತ್ನಿಸುತ್ತಿದ್ದಾಗ ಪಟಿಯಾಲಾದಲ್ಲಿ ಪೊಲೀಸ್ ಅಧಿಕಾರಿಯ ಕೈಯನ್ನು ಕತ್ತರಿಸಿದ್ದರು.

ಪೊಲೀಸರು ಗುರುದ್ವಾರ ಸಂಕೀರ್ಣವನ್ನು ಖಾಲಿ ಮಾಡಲು ಹೋಗಿದ್ದರು, ಅದನ್ನು ನಿಹಾಂಗ್‌ಗಳು ವಶಪಡಿಸಿಕೊಂಡಿದ್ದರು. ಅಷ್ಟರಲ್ಲಿ ನಿಹಾಂಗ್ ಸಿಖ್ಖರು ಮನಬಂದಂತೆ ಗುಂಡು ಹಾರಿಸತೊಡಗಿದರು. ಗುರುದ್ವಾರದೊಳಗೆ ಇನ್ನೂ ಹಲವು ನಿಹಾಂಗ್‌ಗಳು ಇದ್ದಾರೆ ಮತ್ತು ಅವರನ್ನು ಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಓದಿ: ಅಮೆರಿಕದಲ್ಲಿ ಮನೆಯಲ್ಲಿ ಗುಂಡಿನ ದಾಳಿ; 6 ತಿಂಗಳ ಮಗು, ತಾಯಿ ಸೇರಿ 6 ಜನ ಸಾವು

ನಿಹಾಂಗ್‌ಗಳು ಗುಂಡಿನ ದಾಳಿ ನಡೆಸಿದಾಗ ಪೊಲೀಸರು ರಸ್ತೆಯಲ್ಲಿ ನಿಂತಿದ್ದರು ಎಂದು ಕಪುರ್ತಲಾ ಪೊಲೀಸ್ ವರಿಷ್ಠಾಧಿಕಾರಿ (ಪ್ರಧಾನ ಕಛೇರಿ) ತೇಜ್‌ಬೀರ್ ಸಿಂಗ್ ಹುಂಡಾಲ್ ಪಿಟಿಐಗೆ ತಿಳಿಸಿದ್ದಾರೆ.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:21 am, Thu, 23 November 23