Punjab: ಅಮೃತಸರದಲ್ಲಿ ಡ್ರಗ್ಸ್​​ ಸಾಗಿಸುತ್ತಿದ್ದ ಪಾಕಿಸ್ತಾನಿ ಡ್ರೋನ್ ಹೊಡೆದುರುಳಿಸಿದ ಬಿಎಸ್​ಎಫ್​ ಯೋಧರು, 4 ದಿನಗಳಲ್ಲಿ 5ನೇ ಘಟನೆ

ಅಮೃತಸರದಲ್ಲಿ ಡ್ರಗ್ಸ್​ ಸಾಗಿಸುತ್ತಿದ್ದ ಪಾಕಿಸ್ತಾನಿ ಡ್ರೋನ್​ ಅನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ. 4 ದಿನದಲ್ಲಿ ನಡೆದ ಐದನೇ ಘಟನೆ ಇದಾಗಿದೆ. ಅಧಿಕಾರಿಗಳ ಪ್ರಕಾರ, ಹೆರಾಯಿನ್ ಎಂದು ಶಂಕಿಸಲಾದ ಎರಡು ಪ್ಯಾಕೆಟ್‌ಗಳನ್ನು ತಪಾಸಣೆಯ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆ.

Punjab: ಅಮೃತಸರದಲ್ಲಿ ಡ್ರಗ್ಸ್​​ ಸಾಗಿಸುತ್ತಿದ್ದ ಪಾಕಿಸ್ತಾನಿ ಡ್ರೋನ್ ಹೊಡೆದುರುಳಿಸಿದ ಬಿಎಸ್​ಎಫ್​ ಯೋಧರು, 4 ದಿನಗಳಲ್ಲಿ 5ನೇ ಘಟನೆ
ಡ್ರೋನ್
Image Credit source: India TV

Updated on: May 23, 2023 | 2:14 PM

ಅಮೃತಸರದಲ್ಲಿ ಡ್ರಗ್ಸ್​ ಸಾಗಿಸುತ್ತಿದ್ದ ಪಾಕಿಸ್ತಾನಿ ಡ್ರೋನ್​ ಅನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ. 4 ದಿನದಲ್ಲಿ ನಡೆದ ಐದನೇ ಘಟನೆ ಇದಾಗಿದೆ. ಅಧಿಕಾರಿಗಳ ಪ್ರಕಾರ, ಹೆರಾಯಿನ್ ಎಂದು ಶಂಕಿಸಲಾದ ಎರಡು ಪ್ಯಾಕೆಟ್‌ಗಳನ್ನು ತಪಾಸಣೆಯ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆ. ಪಂಜಾಬ್‌ನ ಅಮೃತಸರದ ಅಂತರಾಷ್ಟ್ರೀಯ ಗಡಿಯ ಬಳಿ ಮಾದಕ ದ್ರವ್ಯ ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಬಿಎಸ್‌ಎಫ್ ಹೊಡೆದುರುಳಿಸಿದ್ದು ಮತ್ತೊಮ್ಮೆ ಆ ಭಾಗದಲ್ಲಿ ಆತಂಕ ಸೃಷ್ಟಿಯಾಗಿದೆ.

ಬಿಒಪಿ ರಾಜತಾಲ್ ಪ್ರದೇಶದಲ್ಲಿ ಬಿಎಸ್‌ಎಫ್‌ನ 144 ಕಾರ್ಪ್ಸ್‌ನ ಪಡೆಗಳು ಕಾರ್ಯಾಚರಣೆ ನಡೆಸಿ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ.
ನಿಷೇಧಿತ ಪ್ರದೇಶದಲ್ಲಿ ಡ್ರೋನ್ ಹಾರಿ ಬರುತ್ತಿತ್ತು, ಇದರಲ್ಲಿ ಬಿಳಿಯ ಪ್ಯಾಕೆಟ್​ಗಳು ಇರುವುದನ್ನು ಗಮನಿಸಿ ದಾಳಿ ಮಾಡಲಾಗಿದೆ. ಕಳ್ಳಸಾಗಣೆ ತಡೆಯಲು ಗಡಿಯಲ್ಲಿ ಬಿಗಿ ಬಂದೋಬಸ್ತ್​ ಮಾಡಲಾಗಿದೆ.

ಈ ಮೂಲಕ ಸೇನೆ ಪಾಕಿಸ್ತಾನದ ಮತ್ತೊಂದು ಕೃತ್ಯವನ್ನು ವಿಫಲಗೊಳಿಸಿದೆ. ಇದಕ್ಕೂ ಮೊದಲು ಭಾನುವಾರವೂ ಇದೇ ಭಾಗದಿಂದ ಬಂದ ಡ್ರೋನ್​ ಅನ್ನು ಹೊಡೆದುರುಳಿಸಲಾಗಿತ್ತು.

ಮತ್ತಷ್ಟು ಓದಿ: Amritsar: ಅಮೃತಸರದ ಗಡಿ ಬಳಿ ಪಾಕ್​ ಡ್ರೋನ್ ಹೊಡೆದುರುಳಿಸಿದ ಬಿಎಸ್​ಎಫ್ ಯೋಧರು

ಇದಕ್ಕೂ ಮೊದಲು, ಪಂಜಾಬ್‌ನ ಅಮೃತಸರದಿಂದ ಶಂಕಿತ ಮಾದಕವಸ್ತುಗಳನ್ನು ಒಳಗೊಂಡಿರುವ ಬ್ಯಾಗ್‌ನೊಂದಿಗೆ ಮತ್ತೊಂದು ಪಾಕಿಸ್ತಾನಿ ಡ್ರೋನ್ ಅನ್ನು ಬಿಎಸ್‌ಎಫ್ ಹೊಡೆದುರುಳಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಎಸ್ಎಫ್ ಪ್ರಕಾರ, ಕಳೆದ 4 ದಿನಗಳಲ್ಲಿ ಅವರು ಹೊಡೆದುರುಳಿಸಿದ 5 ಡ್ರೋನ್ ಇದಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us