Amritsar: ಅಮೃತಸರದ ಗಡಿ ಬಳಿ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್ ಯೋಧರು
ಅಮೃತಸರದ ಬಳಿ ಗಡಿ ಪ್ರವೇಶಿಸಿದ ಪಾಕ್ ಡ್ರೋನ್ ಅನ್ನು ಬಿಎಸ್ಎಫ್ ಯೋಧರು ಹೊಡೆದುರುಳಿಸಿದ್ದಾರೆ. ಡ್ರೋನ್(Drone)ನಲ್ಲಿದ್ದ 15.5 ಕೆಜಿ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ.
ಅಮೃತಸರದ ಬಳಿ ಗಡಿ ಪ್ರವೇಶಿಸಿದ ಪಾಕ್ ಡ್ರೋನ್ ಅನ್ನು ಬಿಎಸ್ಎಫ್ ಯೋಧರು ಹೊಡೆದುರುಳಿಸಿದ್ದಾರೆ. ಡ್ರೋನ್(Drone)ನಲ್ಲಿದ್ದ 15.5 ಕೆಜಿ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ. ಕಳೆದ ಎರಡು ವಾರಗಳಲ್ಲಿ ಅಮೃತಸರದಲ್ಲಿ ಮೂರು ಬಾಂಬ್ ದಾಳಿಗಳು ನಡೆದಿವೆ. ಜನವರಿಯಲ್ಲಿ ಅಮೃತಸರದಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿ ಮಾದಕದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಏಪ್ರಿಲ್ 16ರಂದು ಗಡಿಯಲ್ಲಿ ನಿಯೋಜಿಸಲಾದ ಗಡಿ ಭದ್ರತಾ ಪಡೆಗಳು ಏಪ್ರಿಲ್ 15 ರಂದು ರಾತ್ರಿ 8.22ಕ್ಕೆ ಅಮೃತಸರದ ಧನೋ ಕಲಾನ್ ಗ್ರಾಮದ ಬಳಿ ಪಾಕಿಸ್ತಾನದಿಂದ ಭಾರತದ ಭೂಪ್ರದೇಶಕ್ಕೆ ಪ್ರವೇಶಿಸುವ ಶಂಕಿತ ಡ್ರೋನ್‌ನ ಶಬ್ದವನ್ನು ಕೇಳಿತ್ತು.
ಭದ್ರತಾ ಪಡೆಗಳು ತಕ್ಷಣವೇ ಗುಂಡು ಹಾರಿಸುವ ಮೂಲಕ ಡ್ರೋನ್ ಅನ್ನು ಪ್ರತಿಬಂಧಿಸಿತ್ತು. ಪ್ರಾಥಮಿಕ ಪ್ರದೇಶದ ಶೋಧದ ಸಮಯದಲ್ಲಿ, ಬಿಎಸ್ಎಫ್ ಪಡೆಗಳು ಹೆರಾಯಿನ್ (ಅಂದಾಜು 3 ಕೆಜಿ ತೂಕದ) ಎಂದು ಶಂಕಿಸಲಾದ 3 ಪ್ಯಾಕೆಟ್ ಮಾದಕವಸ್ತುಗಳನ್ನು ಗೋಧಿ ಹೊಲದಿಂದ ವಶಪಡಿಸಿಕೊಂಡಿದೆ.
ರವಾನೆಗೆ ಬಳಸಲಾಗಿದ್ದ ಒಂದು ಕಬ್ಬಿಣದ ರಿಂಗ್ ಮತ್ತು 4 ಹೊಳೆಯುವ ಪಟ್ಟಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ’ ಎಂದು ಗಡಿ ಸಿಬ್ಬಂದಿ ತಮ್ಮ ಹೇಳಿಕೆಯಲ್ಲಿ ಸೇರಿಸಿದ್ದಾರೆ.
ಮತ್ತಷ್ಟು ಓದಿ: Golden Temple: ಅಮೃತಸರದ ಸ್ವರ್ಣ ಮಂದಿರದ ಬಳಿ ಮತ್ತೊಂದು ಸ್ಫೋಟ
ಇದೇ ರೀತಿಯ ಘಟನೆಯಲ್ಲಿ, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಭಾರತ-ಪಾಕಿಸ್ತಾನ ಗಡಿ ಬಳಿ ಒಳನುಗ್ಗುತ್ತಿದ್ದ ಡ್ರೋನ್ ಅನ್ನು ಹೊಡೆದುರುಳಿಸಿತು. ಮುಂಜಾನೆ 3.21ಕ್ಕೆ ಅಂತಾರಾರಾಷ್ಟ್ರೀಯ ಗಡಿ ಬಳಿಯ ಬಚಿವಿಂಡ್ ಗ್ರಾಮದಲ್ಲಿ ಡ್ರೋನ್ ಪತ್ತೆಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:06 am, Wed, 17 May 23