ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಮತ್ತೆ​ ವಾಗ್ದಾಳಿ, ಕಣ್ಮರೆಗಳ ಸುರಿಮಳೆ

ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಅವರು ವಾಡಿಕೆಯಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು,  ಕಣ್ಮರೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಕೇಂದ್ರ ಸರ್ಕಾರ ಹೇಳಿದ್ದ 12 ಕೋಟಿ ಉದ್ಯೋಗಗಳು ಕಣ್ಮರೆಯಾಗಿವೆ, 5 ಟ್ರಿಲಿಯನ್ ಡಾಲರ್​ನ ಆರ್ಥಿಕತೆ ಕಣ್ಮರೆಯಾಗಿದೆ. ಜೊತೆಗೆ ಜನ ಸಾಮಾನ್ಯರ ಆದಾಯ ಕಣ್ಮರೆಯಾಗಿದೆ ಹಾಗೂ ದೇಶದ ಸಮೃದ್ಧಿ ಹಾಗೂ ಸುರಕ್ಷತೆ ಕಣ್ಮರೆಯಾಗಿದೆ. ಇನ್ನು ಆಡಳಿತದ ಬಗ್ಗೆ ಪ್ರಶ್ನೆ ಕೇಳಿದರೆ, ಉತ್ತರ ಸಹ ಕಣ್ಮರೆಯಾಗಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಟ್ವಿಟ್ಟರ್​ನಲ್ಲಿ ಕೇಂದ್ರ ಸರ್ಕಾರದ […]

ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಮತ್ತೆ​ ವಾಗ್ದಾಳಿ, ಕಣ್ಮರೆಗಳ ಸುರಿಮಳೆ
ಸಾಧು ಶ್ರೀನಾಥ್​

Updated on: Sep 04, 2020 | 6:29 PM

ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಅವರು ವಾಡಿಕೆಯಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು,  ಕಣ್ಮರೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಕೇಂದ್ರ ಸರ್ಕಾರ ಹೇಳಿದ್ದ 12 ಕೋಟಿ ಉದ್ಯೋಗಗಳು ಕಣ್ಮರೆಯಾಗಿವೆ, 5 ಟ್ರಿಲಿಯನ್ ಡಾಲರ್​ನ ಆರ್ಥಿಕತೆ ಕಣ್ಮರೆಯಾಗಿದೆ. ಜೊತೆಗೆ ಜನ ಸಾಮಾನ್ಯರ ಆದಾಯ ಕಣ್ಮರೆಯಾಗಿದೆ ಹಾಗೂ ದೇಶದ ಸಮೃದ್ಧಿ ಹಾಗೂ ಸುರಕ್ಷತೆ ಕಣ್ಮರೆಯಾಗಿದೆ. ಇನ್ನು ಆಡಳಿತದ ಬಗ್ಗೆ ಪ್ರಶ್ನೆ ಕೇಳಿದರೆ, ಉತ್ತರ ಸಹ ಕಣ್ಮರೆಯಾಗಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಟ್ವಿಟ್ಟರ್​ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯ ಮಾಡಿದ್ದಾರೆ.

 

Published On - 6:29 pm, Fri, 4 September 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us