ದೆಹಲಿ ಅತ್ಯಾಚಾರ ಸಂತ್ರಸ್ತೆಯ ಪಾಲಕರ ಫೋಟೋ ಡಿಲೀಟ್​ ಮಾಡಿದ ರಾಹುಲ್​ ಗಾಂಧಿ..

| Updated By: Lakshmi Hegde

Updated on: Aug 07, 2021 | 9:06 AM

9 ವರ್ಷದ ದಲಿತ ಬಾಲಕಿ ಚಿತಾಗಾರದ ಕೂಲರ್​​ನಿಂದ ತಣ್ಣೀರು ತರಲು ಹೋದಾಗ ಅಲ್ಲಿನ ಅರ್ಚಕ ಮತ್ತು ಸಹಚರರು ಅತ್ಯಾಚಾರ ಮಾಡಿ, ಹತ್ಯೆಗೈದಿದ್ದಾರೆ ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ.

ದೆಹಲಿ ಅತ್ಯಾಚಾರ ಸಂತ್ರಸ್ತೆಯ ಪಾಲಕರ ಫೋಟೋ ಡಿಲೀಟ್​ ಮಾಡಿದ ರಾಹುಲ್​ ಗಾಂಧಿ..
ರಾಹುಲ್ ಗಾಂಧಿ
Follow us on

ದೆಹಲಿ ಚಿತಾಗಾರದಲ್ಲಿ ಅತ್ಯಾಚಾರಕ್ಕೀಡಾಗಿದ್ದ ಬಾಲಕಿಯ ಪಾಲಕರ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದ ರಾಹುಲ್​ ಗಾಂಧಿ (Rahul Gandhi), ಇದೀಗ ಆ ಫೋಟೋವನ್ನು ಡಿಲೀಟ್​ ಮಾಡಿದ್ದಾರೆ. 9 ವರ್ಷದ ದಲಿತ ಬಾಲಕಿ ಚಿತಾಗಾರದ ಕೂಲರ್​​ನಿಂದ ತಣ್ಣೀರು ತರಲು ಹೋದಾಗ ಅಲ್ಲಿನ ಅರ್ಚಕ ಮತ್ತು ಸಹಚರರು ಅತ್ಯಾಚಾರ ಮಾಡಿ, ಹತ್ಯೆಗೈದಿದ್ದಾರೆ ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ. ಈ ಬಾಲಕಿಯ ಪಾಲಕರಿಗೆ ಸಾಂತ್ವನ ಹೇಳಲು ಹೋಗಿದ್ದ ರಾಹುಲ್​ ಗಾಂಧಿ, ಟ್ವೀಟ್ (Tweet)​ ಮಾಡಿ ಅವರ ಫೋಟೋ ಪೋಸ್ಟ್ ಮಾಡಿಕೊಂಡಿದ್ದರು. ಈ ಬಾಲಕಿಯ ಕುಟುಂಬದೊಂದಿಗೆ ನಾನು ಇದ್ದೇನೆ ಎಂದು ಭರವಸೆಯನ್ನೂ ನೀಡಿದ್ದರು.

ಆದರೆ ಅತ್ಯಾಚಾರ ಸಂತ್ರಸ್ತೆಯ ಪಾಲಕರ ಫೋಟೋ ಬಹಿರಂಗಗೊಳಿಸಿದ ರಾಹುಲ್ ಗಾಂಧಿ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಮತ್ತು ಕೆಲವು ವಕೀಲರು ದೂರು ನೀಡಿದ್ದರು. ಪಾಲಕರ ಫೋಟೋ ಹಂಚಿಕೊಂಡ ರಾಹುಲ್ ಗಾಂಧಿಯವರ ಟ್ವಿಟರ್​ ಅಕೌಂಟ್​ ವಿರುದ್ಧ ಕ್ರಮಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಟ್ವಿಟರ್​ ಇಂಡಿಯಾಗೆ ಹೇಳಿತ್ತು. ಹಾಗೇ ದೆಹಲಿ ಮೂಲದ ವಕೀಲರೊಬ್ಬರು ರಾಹುಲ್​ ಗಾಂಧಿ ವಿರುದ್ಧ ದೆಹಲಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಮೃತ ಬಾಲಕಿಯ ಕುಟುಂಬದವರನ್ನು ಭೇಟಿ ಮಾಡಿದ್ದ ರಾಹುಲ್​ ಗಾಂಧಿ ನಂತರ ಆ ಫೋಟೋ ಹಂಚಿಕೊಂಡು, ಆ ಬಾಲಕಿ ಈ ದೇಶದ ಮಗಳು. ಅವಳ ಸಾವಿಗೆ ನ್ಯಾಯ ಒದಗಬೇಕು. ನ್ಯಾಯಕ್ಕಾಗಿ ಹೋರಾಟ ಮಾಡುವ ಹಾದಿಯಲ್ಲಿ ನಾನು ಆಕೆಯ ಪಾಲಕರ ಜತೆ ಸದಾ ಇರುತ್ತೇನೆ ಎಂದು ಹೇಳಿದ್ದರು.  ಆದರೆ ಈಗ ಅವರ ಟ್ವಿಟರ್​​ನಲ್ಲಿ ಈ ಫೋಟೋ ಇಲ್ಲ. ಟ್ವಿಟರ್​​ನ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಟ್ವೀಟ್​ ತೆಗೆಯಲಾಗಿದೆ ಎಂದು ಅಲ್ಲಿ ಸಂದೇಶ ತೋರಿಸುತ್ತಿದೆ.

ಇದನ್ನೂ ಓದಿ: ರಾಜಧಾನಿಯಲ್ಲಿ ಸದ್ದಿಲ್ಲದೇ ಎಂಟ್ರಿ ಕೊಡ್ತಿದೆ ಡೆಡ್ಲಿ ವೈರಸ್; ಈ ವಾರ್ಡ್​​​ಗಳ ಕಡೆ ಹೋಗುವ ಮುನ್ನ ಇರಲಿ ಎಚ್ಚರ

Published On - 9:02 am, Sat, 7 August 21