ಪಕ್ತಿಯಾ ಗುರುದ್ವಾರ ಮೇಲಿನ ಸಿಖ್ ಧಾರ್ಮಿಕ ಧ್ವಜ ತಾಲಿಬಾನಿಗಳು ಕಿತ್ತುಹಾಕಿದ್ದನ್ನು ಉಗ್ರವಾಗಿ ಖಂಡಿಸಿದ ಭಾರತ
ಸಿಖ್ ಧರ್ಮದ ಸಂಸ್ಥಾಪಕ ಗುರು ನಾನಕ್ ಅವರು ಈ ಗುರುದ್ವಾರಕ್ಕೆ ಒಮ್ಮೆ ಭೇಟಿ ನೀಡಿದ್ದರಿಂದ ಸಿಖ್ ಸಮುದಾಯ ಅದನ್ನು ಪವಿತ್ರ ಎಂದು ಪರಿಗಣಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ಪೋಸ್ಟ್ ಆ ಗುರುದ್ವಾರದ ಇಮೇಜುಗಳಲ್ಲಿ ಧ್ವಜ ಕಾಣಿಸುತ್ತಿಲ್ಲ.
ಅಫ್ಘಾನಿಸ್ತಾನದ ಪೂರ್ವ ಪ್ರಾಂತ್ಯದ ಪಕ್ತಿಯಾಲ್ಲಿನ ಗುರುದ್ವಾರವೊಂದರ ಮಾಳಿಗೆ ಮೇಲಿದ್ದ ಸಿಖ್ ಧಾರ್ಮಿಕ ಧ್ವಜವನ್ನು ತಾಲಿಬಾನ್ ಶುಕ್ರವಾರ ತೆಗೆದುಹಾಕಿರುವುದನ್ನು ಭಾರತ ಖಂಡಿಸಿದೆ. ಸದರಿ ಪ್ರಾಂತ್ಯದಲ್ಲಿ ಆಫ್ಘನ್ ಭದ್ರತಾ ದಳ ಮತ್ತು ತಾಲಿಬಾನಿಳ ನಡುವೆ ಕಳೆದ ಕೆಲವು ವಾರಗಳಿಂದ ಹೋರಾಟ ಜಾರಿಯಲ್ಲಿದೆ. ಅಫ್ಘಾನಿಸ್ತಾನದಿಂದ ಲಭ್ಯವಾಗಿರುವ ವರದಿಗಳ ಪ್ರಕಾರ ಪಕ್ತಿಯಾ ಪ್ರಾವಿನ್ಸ್ನ ಚಮ್ಕಾನಿ ಎಂಬ ಪ್ರದೇಶದಲ್ಲಿರುವ ಗುರುದ್ವಾರ ತಾಲಾ ಸಾಹಿಬ್ ಮಂದಿರದ ಮೇಲಿದ್ದ ನಿಶಾನ್ ಸಾಹಿಬ್ (ಪವಿತ್ರ ಧ್ವಜ) ಅನ್ನು ತಾಲಿಬಾನಿಗಳು ಮಂದಿರದ ಪಾಲಕರಿಗೆ ಬಲವಂತ ಮಾಡಿ ತೆಗೆಸಿದ್ದಾರೆ
ಸಿಖ್ ಧರ್ಮದ ಸಂಸ್ಥಾಪಕ ಗುರು ನಾನಕ್ ಅವರು ಈ ಗುರುದ್ವಾರಕ್ಕೆ ಒಮ್ಮೆ ಭೇಟಿ ನೀಡಿದ್ದರಿಂದ ಸಿಖ್ ಸಮುದಾಯ ಅದನ್ನು ಪವಿತ್ರ ಎಂದು ಪರಿಗಣಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ಪೋಸ್ಟ್ ಆ ಗುರುದ್ವಾರದ ಇಮೇಜುಗಳಲ್ಲಿ ಧ್ವಜ ಕಾಣಿಸುತ್ತಿಲ್ಲ.
‘ಗುರುದ್ವಾರ ತಾಲಾ ಸಾಹಿಬ್ ಮಾಳಿಗೆ ಮೇಲಿಂದ ನಿಶಾನ್ ಸಾಹಿಬ್ ತೆಗೆದುಹಾಕಿರುವುದನ್ನು ನಾವು ಮಾಧ್ಯಮ ವರದಿಗಳ ಮೂಲಕ ತಿಳಿದುಕೊಂಡಿದ್ದೇವೆ. ಭಾರತ ಇದನ್ನು ಉಗ್ರವಾಗಿ ಖಂಡಿಸುತ್ತದೆ ಮತ್ತು ಎಲ್ಲ ಸಮುದಾಯಗಳನ್ನು ಜೊತೆಗೂಡಿಸಿಕೊಂಡು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಯುವುದು ಅಫ್ಘಾನಿಸ್ತಾನದ ಭವಿಷ್ಯದ ಉದ್ದೇಶವಾಗಿರಬೇಕು, ಎಂದು ಈ ಬೆಳವಣಿಗೆಗಳ ಬಗ್ಗೆ ಮಾಹಿತಿಯಿರುವ ಮತ್ತು ಹೆಸರು ಹೇಳಿಕೊಳ್ಳಲಿಚ್ಛಿಸದ ವ್ಯಕ್ತಿಯೊಬ್ಬರು ಹೇಳಿದರು.
ಕಳೆದ ವರ್ಷ ಜೂನ್ನಲ್ಲಿ ಅಫ್ಘಾನಿಸ್ತಾನದ ಹಿಂದೂ ಮತ್ತು ಸಿಖ್ ಅಲ್ಪಸಂಖ್ಯಾತರ ನಾಯಕರಾಗಿರುವ ನಿದಾನ ಸಿಂಗ್ ಸಚದೇವ ಅವರನ್ನು ತಾಲಿಬಾನಿಗಳು ಇದೇ ಗುರುದ್ವಾರದಿಂದ ಅಪಹರಿಸಿದ್ದರು. ಅಫ್ಘನ್ ಸರ್ಕಾರ ಮತ್ತು ಸಮುದಾಯದ ನಾಯಕರ ಪ್ರಯತ್ನಗಳ ಮೂಲಕ ಸಚದೇವ ಅವರನ್ನು ಬಿಡುಗಡೆ ಮಾಡಿಸಿಕೊಳ್ಳಲಾಗಿತ್ತು.
ಅದಕ್ಕೆ ಮೊದಲು ಕಾಬೂಲ್ನ ಪ್ರಾರ್ಥಾನಾ ಮಂದಿರವೊಂದರ ಮೇಲೆ ನಡೆದ ಉಗ್ರರ ದಾಳಿಯೊಂದರಲ್ಲಿ ಸಿಖ್ ಸಮುದಾಯದ 30 ಜನರು ಮರಣ ಹೊಂದಿದ್ದರು. ಅ ದಾಳಿ ತಾನಿ ನಡೆಸಿದ್ದು ಅಂತ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೇಳಿಕೊಂಡಿತ್ತು. ಆದರೆ ಅದನ್ನು ಅಲ್ಲಗಳೆದ ಭಾರತದ ಅಧಿಕಾರಿಗಳು ಆ ಕೃತ್ಯದ ಹಿಂದೆ ಹಕ್ಕಾನಿ ನೆಟ್ವರ್ಕ್ ಮತ್ತು ಲಷ್ಕರ್-ಎ-ತೈಬಾ ಕೈವಾಡವಿದೆ ಎಂದು ಹೇಳಿದ್ದರು.
ಅಮೆರಿಕ ಮತ್ತು ನ್ಯಾಟೋ ಪಡೆಗಳು ಅಫ್ಘಾನಿಸ್ತಾನದಿಂದ ವಾಪಸ್ಸು ಹೋದ ನಂತರ ಅಫ್ಘಾನಿಸ್ತಾನ ಮತ್ತು ತಾಲಿಬಾನ ನಡುವೆ ಕಾದಾಟ ಆರಂಭವಾಗಿದೆ.
Published On - 1:42 am, Sat, 7 August 21