AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿಯ ಮನೆ ಹೆಸರು ಬಳಸಲು ಮಗುವಿಗೆ ಹಕ್ಕಿದೆ, ತಂದೆ ಅದನ್ನು ಆಕ್ಷೇಪಿಸುವಂತಿಲ್ಲ: ದೆಹಲಿ ಹೈಕೋರ್ಟ್​ ಮಹತ್ವದ ತೀರ್ಪು

ಮಗಳ ಹೆಸರು ಬದಲಿಸುವ ತಾಯಿಯ ನಿರ್ಧಾರ ಪ್ರಶ್ನಿಸಿ ತಂದೆಯೊಬ್ಬರು ಸಲ್ಲಿಸಿದ್ದ ಆಕ್ಷೇಪಣೆಯನ್ನು ದೆಹಲಿ ನ್ಯಾಯಾಲಯ ತಳ್ಳಿಹಾಕಿದೆ.

ತಾಯಿಯ ಮನೆ ಹೆಸರು ಬಳಸಲು ಮಗುವಿಗೆ ಹಕ್ಕಿದೆ, ತಂದೆ ಅದನ್ನು ಆಕ್ಷೇಪಿಸುವಂತಿಲ್ಲ: ದೆಹಲಿ ಹೈಕೋರ್ಟ್​ ಮಹತ್ವದ ತೀರ್ಪು
ದೆಹಲಿ ಹೈಕೋರ್ಟ್​
TV9 Web
| Edited By: |

Updated on:Aug 06, 2021 | 10:46 PM

Share

ದೆಹಲಿ: ಮಗುವಿಗೆ ಆಕ್ಷೇಪ ಇಲ್ಲದಿದ್ದರೆ ತಾಯಿಯ ಮನೆತನದ ಹೆಸರನ್ನು ಅದು ಬಳಸಬಹುದು. ತಂದೆಗೆ ಅದನ್ನು ತಡೆಯುವ ಅಧಿಕಾರ ಇಲ್ಲ ಎಂದು ದೆಹಲಿ ಹೈಕೋರ್ಟ್​ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಮಗಳ ಹೆಸರು ಬದಲಿಸುವ ತಾಯಿಯ ನಿರ್ಧಾರ ಪ್ರಶ್ನಿಸಿ ತಂದೆಯೊಬ್ಬರು ಸಲ್ಲಿಸಿದ್ದ ಆಕ್ಷೇಪಣೆಯನ್ನು ದೆಹಲಿ ನ್ಯಾಯಾಲಯ ತಳ್ಳಿಹಾಕಿದೆ.

ಈ ಅಪ್ರಾಪ್ತ ಬಾಲಕಿಗೆ ತನ್ನ ಹೆಸರಿನ ಬಗ್ಗೆ ಖುಷಿಯಿದೆ. ಆ ಹೆಸರು ಮಗುವಿಗೆ ಬೇಡ ಎಂದು ಹೇಳಲು ನೀವ್ಯಾರು? ನೀವು ಮಗುವನ್ನು ನೋಡಿಕೊಳ್ಳುತ್ತಿಲ್ಲ, ಮಗುವಿನ ಜೊತೆಗೆ ವಾಸವಿಲ್ಲ ಎಂದು ನ್ಯಾಯಮೂರ್ತಿ ರೇಖಾ ಪಾಟೀಲ್ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದ ತಂದೆಗೆ ಹೇಳಿದರು. ಇಂಥ ವಿಷಯದ ಬಗ್ಗೆ ನೀವಿಬ್ಬರೂ ಕಿತ್ತಾಡುತ್ತಿದ್ದೀರಿ ಎನ್ನುವುದು ದುರಾದೃಷ್ಟಕರ ಸಂಗತಿ. ಆಕೆಯ ಭವಿಷ್ಯವನ್ನು ನೀವು ಹೀಗೆ ಜಗಳ ಮಾಡಿಕೊಂಡೇ ನಿರ್ಧರಿಸುವಿರಾ ಎಂದು ಕಿವಿಹಿಂಡಿದರು.

ಪೂರ್ವ ದೆಹಲಿ ಮುನಿಸಿಪಲ್ ಕಾರ್ಪೊರೇಷನ್​ನಿಂದ ಮಗುವಿನ ಜನನ ಪ್ರಮಾಣ ಪತ್ರ ತರಿಸಿ ಪರಿಶೀಲಿಸಿದ ನ್ಯಾಯಾಲಯವು, ಹೆಸರು ಬದಲಾವಣೆಯಾದರೆ ಮಗುವಿನ ಹೆಸರಿನಲ್ಲಿ ಇರುವ ಜೀವವಿಮೆ ಬಾಂಡ್ ಅಮಾನ್ಯವಾಗುತ್ತದೆ ಎಂಬ ತಂದೆಯ ಆಕ್ಷೇಪವನ್ನು ಒಪ್ಪಲು ಆಗುವುದಿಲ್ಲ. ಈ ಬಗ್ಗೆ ಅವರು ಸರಿಯಾಗಿ ತಿಳಿದುಕೊಳ್ಳಬೇಕು. ಮಾಜಿ ಪತ್ನಿಯ ವಿರುದ್ಧ ತಮ್ಮ ಸಿಟ್ಟು ತೋರಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿತು.

ಮಗುವಿನ ತಂದೆಯ ಹೆಸರನ್ನು ಶಾಲೆಯ ದಾಖಲೆಗಳಲ್ಲಿ ತೋರಿಸುತ್ತಿಲ್ಲ ಎಂಬ ತಂದೆಯ ಅಳಲನ್ನು ಕೋರ್ಟ್ ಮಾನ್ಯ ಮಾಡಿತು. ತಮ್ಮ ಹೆಸರನ್ನು ಶಾಲಾ ದಾಖಲೆಗಳಲ್ಲಿ ನಮೂದಿಸುವಂತೆ ಅವರು ಶಾಲೆಗೆ ಸೂಕ್ತ ಅರ್ಜಿ ನೀಡಬೇಕು ಎಂದು ನಿರ್ದೇಶನ ನೀಡಿತು. ಈ ಬಗ್ಗೆ ಯಾವುದೇ ಆಕ್ಷೇಪವಿದ್ದರೆ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಹಾಕಿಕೊಳ್ಳಬಹುದು ಎಂದು ನ್ಯಾಯಪೀಠ ಸಲಹೆ ಮಾಡಿತು.

(Child can use mothers surname father cannot dictate choice says Delhi high court)

ಇದನ್ನೂ ಓದಿ: Swami Ramdev: ಅಲೋಪಥಿ ಬಗ್ಗೆ ವಿವಾದಿತ ಹೇಳಿಕೆ; ದೆಹಲಿ ಹೈಕೋರ್ಟ್​ನಿಂದ ಬಾಬಾ ರಾಮ್​ದೇವ್​ಗೆ ನೋಟಿಸ್ ಜಾರಿ

ಇದನ್ನೂ ಓದಿ: ಇವಿಎಂ ಬಳಕೆ ವಿರುದ್ಧದ ಮನವಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

Published On - 10:42 pm, Fri, 6 August 21

Follow Us
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
ಯುದ್ಧ ಪೀಡಿತ ಪ್ರದೇಶದಲ್ಲಿರೋ ಕನ್ನಡಿಗರ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿ
ಯುದ್ಧ ಪೀಡಿತ ಪ್ರದೇಶದಲ್ಲಿರೋ ಕನ್ನಡಿಗರ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿ
ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ
ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ
ಅಧಿಕಾರ ಹಂಚಿಕೆ ಜಟಾಪಟಿ: ಅಚ್ಚರಿಯ ಹೇಳಿಕೆ ಕೊಟ್ಟ ಸತೀಶ್​​ ಜಾರಕಿಹೊಳಿ
ಅಧಿಕಾರ ಹಂಚಿಕೆ ಜಟಾಪಟಿ: ಅಚ್ಚರಿಯ ಹೇಳಿಕೆ ಕೊಟ್ಟ ಸತೀಶ್​​ ಜಾರಕಿಹೊಳಿ
ಸಿಲಿಂಡರ್​​ ಸ್ಫೋಟಗೊಂಡು ಮನೆಗೆ ಮನೆಯೇ ಸರ್ವನಾಶ!
ಸಿಲಿಂಡರ್​​ ಸ್ಫೋಟಗೊಂಡು ಮನೆಗೆ ಮನೆಯೇ ಸರ್ವನಾಶ!