AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Swami Ramdev: ಅಲೋಪಥಿ ಬಗ್ಗೆ ವಿವಾದಿತ ಹೇಳಿಕೆ; ದೆಹಲಿ ಹೈಕೋರ್ಟ್​ನಿಂದ ಬಾಬಾ ರಾಮ್​ದೇವ್​ಗೆ ನೋಟಿಸ್ ಜಾರಿ

Ramdev on Allopathy: ಅಲೋಪಥಿ ಪದ್ಧತಿ ಮತ್ತು ಅಲೋಪಥಿ ವೈದ್ಯರ ವಿರುದ್ಧ ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಹೈಕೋರ್ಟ್ ಯೋಗಗುರು ಬಾಬಾ ರಾಮದೇವ್​ಗೆ ಇಂದು ನೋಟಿಸ್ ನೀಡಿದೆ.

Swami Ramdev: ಅಲೋಪಥಿ ಬಗ್ಗೆ ವಿವಾದಿತ ಹೇಳಿಕೆ; ದೆಹಲಿ ಹೈಕೋರ್ಟ್​ನಿಂದ ಬಾಬಾ ರಾಮ್​ದೇವ್​ಗೆ ನೋಟಿಸ್ ಜಾರಿ
ಯೋಗಗುರು ಬಾಬಾ ರಾಮ್​ದೇವ್ (ಸಂಗ್ರಹ ಚಿತ್ರ)
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 30, 2021 | 2:50 PM

ನವದೆಹಲಿ: ಅಲೋಪಥಿ ವೈದ್ಯ ಪದ್ಧತಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ವಿವಾದಕ್ಕೀಡಾಗಿದ್ದ ಯೋಗಗುರು ಬಾಬಾ ರಾಮದೇವ್ (Swami Ramdev) ಅವರಿಗೆ ದೆಹಲಿ ಹೈಕೋರ್ಟ್ (Delhi High court) ನೋಟಿಸ್ ಜಾರಿಗೊಳಿಸಿದೆ. ಕೊರೋನಾಗೆ ಅಲೋಪಥಿ (Allopathy) ಔಷಧಗಳನ್ನು ತೆಗೆದುಕೊಂಡ ಲಕ್ಷಾಂತರ ಜನರು ಈಗಾಗಲೇ ಸಾವನ್ನಪ್ಪಿದ್ದಾರೆ. ಅಲೋಪಥಿಯೊಂದು ಅವಿವೇಕದ ವಿಜ್ಞಾನ ಎಂದು ಹೇಳಿಕೆ ನೀಡಿದ್ದಕ್ಕೆ ಬಾಬಾ ರಾಮದೇವ್ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹೇಳಿಕೆಯನ್ನು ವಿರೋಧಿಸಿ ಅನೇಕ ರಾಜ್ಯಗಳಲ್ಲಿ ಬಾಬಾ ರಾಮದೇವ್ ವಿರುದ್ಧ ಕೇಸ್​ಗಳು ಕೂಡ ದಾಖಲಾಗಿದ್ದವು.

ಅಸಂಬದ್ಧ ಹೇಳಿಕೆಗಳನ್ನು ನೀಡಿ ಜನರಲ್ಲಿ ಅಲೋಪಥಿ ಬಗ್ಗೆ ಭಯ ಹುಟ್ಟಿಸುತ್ತಿರುವ ಬಾಬಾ ರಾಮದೇವ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಹಲವು ವೈದ್ಯರು ದೇಶದ ನಾನಾ ಭಾಗಗಳಲ್ಲಿ ರಾಮದೇವ್ ವಿರುದ್ಧ ದೂರು ದಾಖಲಿಸಿದ್ದರು.

ಬಾಬಾ ರಾಮದೇವ್ ಅಲೋಪಥಿ ಕುರಿತು ನೀಡಿದ ಹೇಳಿಕೆ ಅವೈಜ್ಞಾನಿಕವಾಗಿದೆ ಎಂದು ಹೇಳಿದ್ದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಆ ಹೇಳಿಕೆಯನ್ನು ವಾಪಾಸ್ ಪಡೆಯುವಂತೆ ಬಾಬಾ ರಾಮದೇವ್​ಗೆ ಪತ್ರ ಬರೆದಿದ್ದರು. ತಮ್ಮ ಹೇಳಿಕೆ ವಿವಾದಕ್ಕೀಡಾದ ಬಳಿಕ ಎಚ್ಚೆತ್ತುಕೊಂಡಿದ್ದ ಬಾಬಾ ರಾಮದೇವ್ ಮೇ ತಿಂಗಳಲ್ಲಿ ಕ್ಷಮಾಪಣೆಯನ್ನೂ ಕೇಳಿದ್ದರು. ಹಾಗೇ, ವೈದ್ಯರು ಭೂಲೋಕದ ದೇವದೂತರು. ನಾನು ಕೂಡ ಕೊರೋನಾ ಲಸಿಕೆ ಪಡೆಯುತ್ತೇನೆ ಎಂದು ಹೇಳಿಕೆ ನೀಡಿ ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಮುಂದಾಗಿದ್ದರು.

ಈ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಯೋಗಗುರು ಬಾಬಾ ರಾಮದೇವ್​ಗೆ ಇಂದು ನೋಟಿಸ್ ಜಾರಿ ಮಾಡಿದೆ. ಅಲೋಪಥಿ ಪದ್ಧತಿ ಮತ್ತು ಅಲೋಪಥಿ ವೈದ್ಯರ ವಿರುದ್ಧ ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದ್ದು, ಆಗಸ್ಟ್ 10ರಂದು ಈ ಕುರಿತು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಇದನ್ನೂ ಓದಿ: Ramdev ವೈದ್ಯರು ಭೂಮಿಯ ಮೇಲಿನ ದೇವದೂತರು, ಕೊವಿಡ್ ಲಸಿಕೆ ತೆಗೆದುಕೊಳ್ಳುವೆ: ಬಾಬಾ ರಾಮ್‌ದೇವ್

ಅಲೋಪತಿ ವಿರುದ್ಧ ಹೇಳಿಕೆ: ಜುಲೈ 12ಕ್ಕೆ ಬಾಬಾ ರಾಮ್​​ದೇವ್ ಮನವಿ ಆಲಿಸಲಿದೆ ಸುಪ್ರೀಂಕೋರ್ಟ್

(Swami Ramdev: Delhi High Court issues notice to Baba Ramdev over his Controversial Statement on allopathy)

ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು