ಅಲೋಪತಿ ವಿರುದ್ಧ ಹೇಳಿಕೆ: ಜುಲೈ 12ಕ್ಕೆ ಬಾಬಾ ರಾಮ್​​ದೇವ್ ಮನವಿ ಆಲಿಸಲಿದೆ ಸುಪ್ರೀಂಕೋರ್ಟ್

Yoga Guru Ramdev: ತನಿಖೆಗೆ ತಡೆ ನೀಡಲು ಮತ್ತು ಪ್ರಕರಣವನ್ನು ದೆಹಲಿಗೆ ವರ್ಗಾಯಿಸಲು ಬಾಬಾ ರಾಮ್ ದೇವ್ ಮನವಿ ಮಾಡಿದುದರ ಬೆನ್ನಲ್ಲೇಅಲೋಪತಿ ಔಷಧದ ಬಳಕೆಯ ಬಗ್ಗೆ ರಾಮ್ ದೇವ್ ಅವರ ಹ ಹೇಳಿಕೆಗಳ ಮೂಲ ದಾಖಲೆಗಳನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.

ಅಲೋಪತಿ ವಿರುದ್ಧ ಹೇಳಿಕೆ: ಜುಲೈ 12ಕ್ಕೆ  ಬಾಬಾ ರಾಮ್​​ದೇವ್ ಮನವಿ ಆಲಿಸಲಿದೆ ಸುಪ್ರೀಂಕೋರ್ಟ್
ಯೋಗಗುರು ಬಾಬಾ ರಾಮ್​ದೇವ್ (ಸಂಗ್ರಹ ಚಿತ್ರ)
TV9kannada Web Team

| Edited By: Rashmi Kallakatta

Jul 05, 2021 | 2:09 PM

ದೆಹಲಿ: ಕೊವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಲೋಪತಿ ಔಷಧಿಗಳನ್ನು ಬಳಸುವುದರ ವಿರುದ್ಧ ಬಾಬಾ ರಾಮ್​​ದೇವ್ ಮಾಡಿದ ಆರೋಪದ ಮೇಲೆ ದಾಖಲಾದ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ವಿಚಾರಣೆಯನ್ನು ತಡೆಹಿಡಿಯಬೇಕೆಂದು ಸಲ್ಲಿಸಿದ್ದ ರಾಮ್​​ದೇವ್ ಅವರ ಮನವಿಯನ್ನು ಜುಲೈ 12 ರಂದು ಆಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಬಾಬಾ ರಾಮ್​​ದೇವ್ ಅವರ ಹೇಳಿಕೆಯ ಮೂಲ ದಾಖಲೆ ಭಾನುವಾರ ತಡರಾತ್ರಿ ಲಭಿಸಿರುವುದಾಗಿ ಕೋರ್ಟ್ ಹೇಳಿದೆ. ತನಿಖೆಗೆ ತಡೆ ನೀಡಲು ಮತ್ತು ಪ್ರಕರಣವನ್ನು ದೆಹಲಿಗೆ ವರ್ಗಾಯಿಸಲು ಬಾಬಾ ರಾಮ್ ದೇವ್ ಮನವಿ ಮಾಡಿದುದರ ಬೆನ್ನಲ್ಲೇಅಲೋಪತಿ ಔಷಧದ ಬಳಕೆಯ ಬಗ್ಗೆ ರಾಮ್ ದೇವ್ ಅವರ ಹ ಹೇಳಿಕೆಗಳ ಮೂಲ ದಾಖಲೆಗಳನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.

“ನಿನ್ನೆ ರಾತ್ರಿ 11 ಗಂಟೆಗೆ, ಹೇಳಿಕೆಗಳು ಮತ್ತು ವಿಡಿಯೊಗಳ ಪ್ರತಿಗಳನ್ನು ಹೊಂದಿರುವ ಬೃಹತ್ ಫೈಲ್‌ಗಳನ್ನು ನಾವು ಪಡೆದುಕೊಂಡಿದ್ದೇವೆ” ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಎಸ್ ಎಸ್ ಬೋಪಣ್ಣ ಮತ್ತು ಹೃಷಿಕೇಶ ರಾಯ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

ರಾಮದೇವ್ ಪರವಾಗಿ ಹಾಜರಾದ ಸಿಜೆಐ ಹಿರಿಯ ವಕೀಲ ಮುಕುಲ್ ರೋಹ್ಟಗಿ ಈ ವಿಷಯವನ್ನು ಬೇರೆ ದಿನದಲ್ಲಿ ತೆಗೆದುಕೊಳ್ಳಬಹುದು ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್ ನಾವು ಒಂದು ವಾರದ ನಂತರ ಈ ವಿಷಯವನ್ನು ಕೈಗೆತ್ತಿಕೊಳ್ಳಲಿದ್ದೇವೆ ಎಂದಿದೆ.

ಈ ಹಿಂದೆ ರಾಮ್‌ದೇವ್ ಅವರು ಹೇಳಿರುವ ಹೇಳಿಕೆಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ನ್ಯಾಯಪೀಠ ಕೋರಿತ್ತು. ಭಾರತೀಯ ವೈದ್ಯಕೀಯ ಸಂಘದ ದೂರುಗಳ ಹಿನ್ನೆಲೆಯಲ್ಲಿ ಪಾಟ್ನಾ ಮತ್ತು ರಾಯ್‌ಪುರದಲ್ಲಿ ರಾಮದೇವ್ ವಿರುದ್ಧ ಅನೇಕ ಎಫ್‌ಐಆರ್ ದಾಖಲಿಸಲಾಗಿದೆ.

ಕ್ರಿಮಿನಲ್ ದೂರುಗಳನ್ನು ರದ್ದುಪಡಿಸುವುದರ ಜೊತೆಗೆ, ರಾಮದೇವ್ ದೂರುಗಳನ್ನೆಲ್ಲ ಒಗ್ಗೂಡಿಸಬೇಕು ಮತ್ತು ದೆಹಲಿಗೆ ವರ್ಗಾಯಿಸಬೇಕು ಎಂದು ಕೋರಿದ್ದರು.

ಕೊವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅಲೋಪತಿ ಔಷಧಿಯನ್ನು ಬಳಸುವುದರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ರಾಮ್ ದೇವ್ ವಿರುದ್ಧ ಬಿಹಾರ್ ಮತ್ತು ಛತ್ತೀಸ್ ಗಡದ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಆರೋಪದ ಮೇಲೆ ಕ್ರಿಮಿನಲ್ ದೂರುಗಳನ್ನು ದಾಖಲಿಸಲಾಗಿದೆ.

ಐಎಂಎಯ ಪಾಟ್ನಾ ಮತ್ತು ರಾಯ್‌ಪುರ ಘಟಕಗಳು ರಾಮದೇವ್ ವಿರುದ್ಧ ದೂರು ದಾಖಲಿಸಿದ್ದು, ಅವರ ಹೇಳಿಕೆಗಳು ಕೊವಿಡ್ ನಿಯಂತ್ರಣ ಕಾರ್ಯವಿಧಾನಕ್ಕೆ ಪೂರ್ವಾಗ್ರಹವನ್ನುಂಟು ಮಾಡುವ ಸಾಧ್ಯತೆಯಿದೆ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಸರಿಯಾದ ಚಿಕಿತ್ಸೆ ಪಡೆಯದಂತೆ ಜನರನ್ನು ತಡೆಯಬಹುದು ಎಂದು ಆರೋಪಿಸಿದ್ದಾರೆ.

ಯೋಗ ಗುರು ರಾಮ್​​ದೇವ್ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಐಪಿಸಿಯ 188 ವಿಭಾಗಗಳು (ಸಾರ್ವಜನಿಕ ಸೇವಕರಿಂದ ಸರಿಯಾಗಿ ಘೋಷಿಸಲ್ಪಟ್ಟ ಆದೇಶಕ್ಕೆ ಅಸಹಕಾರ), 269 (ರೋಗದ ಸೋಂಕನ್ನು ಜೀವಕ್ಕೆ ಅಪಾಯಕಾರಿಯಾಗಿ ಹರಡುವ ಸಾಧ್ಯತೆ) ಮತ್ತು ಐಪಿಸಿಯ 504 (ಶಾಂತಿಯ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ  ಪ್ರಕರಣ ದಾಖಲಾಗಿದೆ.

ಅಲೋಪತಿ ಮತ್ತು ಆಯುರ್ವೇದ ವಿಷಯದ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಯನ್ನು ಹುಟ್ಟುಹಾಕಿದ  ರಾಮ್​​ದೇವ್ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ರ ಅವರ ಪತ್ರವನ್ನು ಸ್ವೀಕರಿಸಿದ ನಂತರ ಮೇ 23 ರಂದು ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಂಡಿದ್ದರು.ರಾಮ್​​ದೇವ್ ಹೇಳಿಕೆ ಅಸಂಬದ್ಧ ಎಂದು ಹರ್ಷವರ್ಧನ್ ಹೇಳಿದ್ದರು.

ಈ ಮಧ್ಯೆ ದೆಹಲಿ ಮೆಡಿಕಲ್ ಅಸೋಸಿಯೇಷನ್ (ಡಿಎಂಎ) ಈ ಪ್ರಕರಣದ ಭಾಗವಾಗಲು ಅನುಮತಿ ಕೋರಿದ್ದು ರಾಮ್ ದೇವ್ ಅಲೋಪತಿಯನ್ನು ಅವಮಾನಿಸಿದ್ದಾರೆ ಮತ್ತು ಲಸಿಕೆಗಳು ಮತ್ತು ಚಿಕಿತ್ಸಾ ಪ್ರೋಟೋಕಾಲ್‌ಗಳನ್ನು ಕಡೆಗಣಿಸಲು ಜನರನ್ನು “ಪ್ರಚೋದಿಸಿದ್ದಾರೆ” ಎಂದು ಆರೋಪಿಸಿದರು. 15 ಸಾವಿರ ದೆಹಲಿ ವೈದ್ಯರು ಸದಸ್ಯರಾಗಿರುವ ಡಿಎಂಎ, ವೈದ್ಯಕೀಯ ಸಂಸ್ಥೆಗಳ ಅನುಮೋದನೆ ಪಡೆಯದ ಕೊರೊನಿಲ್ ಕಿಟ್‌ಗಳನ್ನು ಮಾರಾಟ ಮಾಡುವ ಮೂಲಕ ರಾಮ್‌ದೇವ್ ಅವರ ಪತಂಜಲಿ 1,000 ಕೋಟಿ ರೂ. ಗಳಿಸಿದ್ದಾರೆ ಎಂದು ಆರೋಪಿಸಿದೆ.

ಇದನ್ನೂ ಓದಿ: ತಮ್ಮ ವಿರುದ್ಧ ದಾಖಲಾದ ಎಫ್​ಐಆರ್​​ಗಳ ವಿರುದ್ಧ ಸುಪ್ರಿಂಕೋರ್ಟ್​​ ಮೆಟ್ಟಿಲೇರಿದ ಯೋಗ ಗುರು ಬಾಬಾ ರಾಮ್​ದೇವ್​..

(Alleged remarks against the use of allopathic medicines during the Covid Supreme Court to hear yoga guru Ramdev’s plea on Jul 12 )

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada