AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವು ಭಾರತ-ಪಾಕಿಸ್ತಾನ ಅಲ್ಲ, ನಮ್ಮ ಸಂಬಂಧ ಅಮೀರ್ ಖಾನ್ ಮತ್ತು ಕಿರಣ್​​ ರಾವ್​​ನಂತೆ: ಶಿವಸೇನೆ-ಬಿಜೆಪಿ ಬಗ್ಗೆ ಸಂಜಯ್ ರಾವುತ್

Sanjay Raut: ನಾವು ಭಾರತ-ಪಾಕಿಸ್ತಾನವಲ್ಲ. ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರನ್ನು ನೋಡಿ, ನಾವು ಅವರಂತೆಯೇ. ನಮ್ಮ (ಶಿವಸೇನೆ, ಬಿಜೆಪಿ) ರಾಜಕೀಯ ಮಾರ್ಗಗಳು ವಿಭಿನ್ನವಾಗಿವೆ ಆದರೆ ಸ್ನೇಹ ಅಚಲವಾಗಿದೆ ಎಂದು ರಾವುತ್ ಹೇಳಿದ್ದಾರೆ.

ನಾವು ಭಾರತ-ಪಾಕಿಸ್ತಾನ ಅಲ್ಲ, ನಮ್ಮ ಸಂಬಂಧ ಅಮೀರ್ ಖಾನ್ ಮತ್ತು ಕಿರಣ್​​ ರಾವ್​​ನಂತೆ: ಶಿವಸೇನೆ-ಬಿಜೆಪಿ ಬಗ್ಗೆ ಸಂಜಯ್ ರಾವುತ್
ಸಂಜಯ್ ರಾವುತ್
TV9 Web
| Edited By: |

Updated on: Jul 05, 2021 | 3:52 PM

Share

ಮುಂಬೈ: ತಮ್ಮ ಪಕ್ಷ ಮತ್ತು ಮಾಜಿ ಮೈತ್ರಿ ಪಕ್ಷ ಶಿವಸೇನೆ “ಶತ್ರುಗಳಲ್ಲ” ಎಂದು ಬಿಜೆಪಿಯ ಹಿರಿಯ ಮುಖಂಡ ದೇವೇಂದ್ರ ಫಡ್ನವಿಸ್ ತಮ್ಮ ಹೇಳಿದ ಬೆನ್ನಲ್ಲೇ, ಭಿನ್ನಾಭಿಪ್ರಾಯಗಳಿವೆ ಆದರೆ ನಮ್ಮ ಸಂಬಂಧ ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಅವರ ಚಲನಚಿತ್ರ ನಿರ್ಮಾಪಕಿ ಪತ್ನಿ ಕಿರಣ್ ರಾವ್ ಅವರಂತೆ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ. ಅಮೀರ್ ಖಾನ್ ಮತ್ತು ಕಿರಣ್ ರಾವ್ ಕೆಲವು ದಿನಗಳ ಹಿಂದೆಯಷ್ಟೇ ವಿವಾಹ ವಿಚ್ಛೇದನ ಘೋಷಿಸಿದ್ದರು. ನಾವು ಭಾರತ-ಪಾಕಿಸ್ತಾನವಲ್ಲ. ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರನ್ನು ನೋಡಿ, ನಾವು ಅವರಂತೆಯೇ. ನಮ್ಮ (ಶಿವಸೇನೆ, ಬಿಜೆಪಿ) ರಾಜಕೀಯ ಮಾರ್ಗಗಳು ವಿಭಿನ್ನವಾಗಿವೆ ಆದರೆ ಸ್ನೇಹ ಅಚಲವಾಗಿದೆ ಎಂದು ರಾವುತ್ ಹೇಳಿದ್ದಾರೆ.

ಬಾಲಿವುಡ್ ದಂಪತಿ ಅಮೀರ್ ಖಾನ್ ಮತ್ತು ಕಿರಣ್ ರಾವ್ ಇತ್ತೀಚೆಗೆ ವಿಚ್ಛೇದನವನ್ನು ಘೋಷಿಸಿದ್ದು “ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಬಯಸುತ್ತೇವೆ. ಇನ್ನು ಮುಂದೆ ನಾವು ಗಂಡ ಮತ್ತು ಹೆಂಡತಿ ಅಲ್ಲ.ಆದರೆ ಪರಸ್ಪರ ಪೋಷಕರು ಮತ್ತು ಪರಸ್ಪರ ಕುಟುಂಬವಾಗಿ ಇರುತ್ತೇವೆ ಎಂದುಹೇಳಿದ್ದರು. “ನಾವು ನಮ್ಮ ಮಗ ಆಜಾದ್​​ಗೆ ಪೋಷಕರಾಗಿ ಉಳಿದಿದ್ದೇವೆ. ಅವರು ನಾವು ಒಟ್ಟಿಗೆ ಪೋಷಿಸುತ್ತೇವೆ ಮತ್ತು ಬೆಳೆಸುತ್ತೇವೆ. ಚಲನಚಿತ್ರಗಳು, ಪಾನಿ ಫೌಂಡೇಶನ್ ಮತ್ತು ಇತರ ಯೋಜನೆಗಳ ಸಹಯೋಗಿಗಳಾಗಿ ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ನಮ್ಮ ಹಿತೈಷಿಗಳಿಗೆ ಶುಭ ಹಾರೈಕೆ ಮತ್ತು ಆಶೀರ್ವದಿಸಿ ಎಂದು ವಿನಂತಿಸುತ್ತೇವೆ. ನಮ್ಮಂತೆಯೇ ನೀವು ಈ ವಿಚ್ಛೇೇದನವನ್ನು ಒಂದು ಅಂತ್ಯವಾಗಿ ನೋಡದೆ, ಹೊಸ ಪ್ರಯಾಣದ ಪ್ರಾರಂಭವಾಗಿ ನೋಡುತ್ತೀರಿ ಎಂದು ಭಾವಿಸುತ್ತೇವೆ ”ಎಂದು ಇಬ್ಬರೂ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದರು.

ಎಂವಿಎ ಮೈತ್ರಿಕೂಟದಲ್ಲಿ ಅಸಮಾಧಾನದ ಮಧ್ಯೆ ಹಳೆಯ ಮೈತ್ರಿಪಕ್ಷಗಳು ಮತ್ತೆ ಕೈಜೋಡಿಸುವ ಸೂಚನೆಯಾಗಿ ಖಾನ್ ಮಾತುಗಳನ್ನು ರಾವತ್ ಬಳಸಿದ್ದಾರೆ.

ಶಿವಸೇನೆ ಅಧ್ಯಕ್ಷ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಕಳೆದ ತಿಂಗಳು ದೆಹಲಿಯಲ್ಲಿ ಪ್ರತ್ಯೇಕವಾಗಿ ಭೇಟಿಯಾದ ಹಿನ್ನೆಲೆಯಲ್ಲಿ ರಾಜ್ಯ ಸಚಿವರ ನಿಯೋಗದ ನೇತೃತ್ವ ವಹಿಸಿದ್ದ ಫಡ್ನವೀಸ್ ಅವರ ಹೇಳಿಕೆ ಭಾನುವಾರ ಬಂದಿದೆ. ಹಿಂದಿನ ದಿನ, ಬಿಜೆಪಿ ಮುಖಂಡ ಆಶಿಶ್ ಶೆಲಾರ್ ಅವರೊಂದಿಗಿನ ಭೇಟಿಯ ಬಗ್ಗೆ “ವದಂತಿಗಳನ್ನು” ರಾವುತ್ ತಳ್ಳಿ ಹಾಕಿದ್ದರು.

“ಅಂತಹ ವದಂತಿಗಳು ಹೆಚ್ಚು ಹರಡಿದರೆ, ಎಂವಿಎ ಮೈತ್ರಿ ಬಲಗೊಳ್ಳುತ್ತದೆ. ನಾವು ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಸಾರ್ವಜನಿಕ ಸಮಾರಂಭಗಳಲ್ಲಿ ನಾವು ಮುಖಾಮುಖಿಯಾಗಿ ಬಂದರೆ, ನಾವು ಪರಸ್ಪರ ಸೌಹಾರ್ದಯುತವಾಗಿ ಸ್ವಾಗತಿಸುತ್ತೇವೆ. ನಾನು ಶೆಲಾರ್ ಅವರೊಂದಿಗೆ ಬಹಿರಂಗವಾಗಿ ಕಾಫಿ ಕುಡಿದಿದ್ದೇನೆ “ಎಂದು ಸೇನೆಯ ಮುಖ್ಯ ವಕ್ತಾರರು ಹೇಳಿದ್ದಾರೆ. ಏತನ್ಮಧ್ಯೆ, ಫಡ್ನವೀಸ್ ಅವರು ಪುಣೆಯಲ್ಲಿ ಎಂಪಿಎಸ್ ಸಿ ಆಕಾಂಕ್ಷಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕಾಗಿ ದುಃಖ ವ್ಯಕ್ತಪಡಿಸಿದರು.

ಇಬ್ಬರು ಮಾಜಿ ಮಿತ್ರಪಕ್ಷಗಳು ಮತ್ತೆ ಒಂದಾಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಫಡ್ನವಿಸ್, ಪರಿಸ್ಥಿತಿಯನ್ನು ಅವಲಂಬಿಸಿ “ಸೂಕ್ತ ನಿರ್ಧಾರ” ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಇತ್ತೀಚಿನ ಸಭೆ ಮತ್ತು ಸಾಧ್ಯತೆಯ ಬಗ್ಗೆ ಕೇಳಿದಾಗ ಬಿಜೆಪಿ ಮತ್ತು ಶಿವಸೇನೆ ಮತ್ತೆ ಒಟ್ಟಿಗೆ ಸೇರುತ್ತಿವೆ. ಸಂದರ್ಭಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ನಾಯಕರೊಂದಿಗೆ ಬಹಿರಂಗವಾಗಿ ಕಾಫಿ ಸೇವಿಸಿದ್ದೇನೆ: ಸಂಜಯ್ ರಾವುತ್

ಇದನ್ನೂ ಓದಿ: ಆಮೀರ್ ಖಾನ್​​ಗಿಂತ ವೇಯ್ಟರ್​ ಉತ್ತಮವಾಗಿ ಆ್ಯಕ್ಟ್​ ಮಾಡಿದ್ದ; ಆರ್​ಜಿವಿ ಹೀಗೆ ಹೇಳಿದ್ದರ ಹಿಂದಿತ್ತು ಬೇರೆ ಉದ್ದೇಶ

(We are not India-Pakistan Look at Aamir Khan and Kiran Rao it is like them says Sanjay Raut)

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್