ತಮ್ಮ ವಿರುದ್ಧ ದಾಖಲಾದ ಎಫ್​ಐಆರ್​​ಗಳ ವಿರುದ್ಧ ಸುಪ್ರಿಂಕೋರ್ಟ್​​ ಮೆಟ್ಟಿಲೇರಿದ ಯೋಗ ಗುರು ಬಾಬಾ ರಾಮ್​ದೇವ್​..

ಭಾರತೀಯ ವೈದ್ಯಕೀಯ ಸಂಘ ನೀಡಿದ ದೂರಿನ ಅನ್ವಯ ಬಿಹಾರ ಮತ್ತು ಛತ್ತೀಸ್​ಗಢಗಳಲ್ಲಿ ಬಾಬಾ ರಾಮ್​ದೇವ್​ ವಿರುದ್ಧ ಪ್ರಕರಣ ದಾಖಲಾಗಿದೆ. ಅಲೋಪಥಿಕ್​ ವೈದ್ಯಕೀಯ ಪದ್ಧತಿಗೆ ಬಾಬಾ ರಾಮ್​ ದೇವ್​ ಅಗೌರವ ತೋರಿಸಿದ್ದಾರೆ ಎಂದು ವೈದ್ಯರು ಆರೋಪಿಸಿದ್ದಾರೆ.

ತಮ್ಮ ವಿರುದ್ಧ ದಾಖಲಾದ ಎಫ್​ಐಆರ್​​ಗಳ ವಿರುದ್ಧ ಸುಪ್ರಿಂಕೋರ್ಟ್​​ ಮೆಟ್ಟಿಲೇರಿದ ಯೋಗ ಗುರು ಬಾಬಾ ರಾಮ್​ದೇವ್​..
ಯೋಗ ಗುರು ಬಾಬಾ ರಾಮ್​ದೇವ್​
Follow us
TV9 Web
| Updated By: Lakshmi Hegde

Updated on: Jun 23, 2021 | 4:30 PM

ಅಲೋಪಥಿ ವೈದ್ಯಕೀಯ ಪದ್ಧತಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಯೋಗ ಗುರು ಬಾಬಾ ರಾಮ್​ ದೇವ್ ವಿರುದ್ಧ ಹಲವು ಅಲೋಪಥಿಕ್​ ವೈದ್ಯರು, ಸಂಘಟನೆಗಳು ನೀಡಿದ ದೂರಿನ ಅನ್ವಯ ವಿವಿಧ ರಾಜ್ಯಗಳಲ್ಲಿ ಎಫ್​ಐಆರ್ ದಾಖಲಾಗಿದೆ. ಹೀಗೆ ತಮ್ಮ ವಿರುದ್ಧ ದಾಖಲಾದ ಎಫ್​​ಐಆರ್​​ಗಳ ವಿರುದ್ಧ ಬಾಬಾ ರಾಮ್​ದೇವ್​ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ. ಯೋಗ ಗುರು ಬಾಬಾ ರಾಮ್​ದೇವ್ ಅಲೋಪಥಿಕ್​ ವೈದ್ಯಕೀಯ ಪದ್ಧತಿ ಮೂರ್ಖ ಪದ್ಧತಿ. ಇದರಿಂದ ಕೊವಿಡ್ 19 ಸೋಂಕು ಗುಣಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದನ್ನು ನೋಡಿದ ಅಲೋಪಥಿಕ ವೈದ್ಯರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಬಾಬಾ ರಾಮ್​ದೇವ್​ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದವು. ಹಾಗೇ ಪೊಲೀಸರಿಗೆ ದೂರನ್ನೂ ನೀಡಿದ್ದವು.

ಭಾರತೀಯ ವೈದ್ಯಕೀಯ ಸಂಘ ನೀಡಿದ ದೂರಿನ ಅನ್ವಯ ಬಿಹಾರ ಮತ್ತು ಛತ್ತೀಸ್​ಗಢಗಳಲ್ಲಿ ಬಾಬಾ ರಾಮ್​ದೇವ್​ ವಿರುದ್ಧ ಪ್ರಕರಣ ದಾಖಲಾಗಿದೆ. ಅಲೋಪಥಿಕ್​ ವೈದ್ಯಕೀಯ ಪದ್ಧತಿಗೆ ಬಾಬಾ ರಾಮ್​ ದೇವ್​ ಅಗೌರವ ತೋರಿಸಿದ್ದಾರೆ. ಅಲ್ಲದೆ, ಜನರಿಗೆ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ ಎಂದು ಐಎಂಎ ದೂರಿನಲ್ಲಿ ಉಲ್ಲೇಖಿಸಿದೆ.

ಇದೀಗ ಬೇರೆಬೇರೆ ರಾಜ್ಯಗಳಲ್ಲಿ ದಾಖಲಾಗಿರುವ ಎಫ್​ಐಆರ್​ಗಳನ್ನೆಲ್ಲ ಕ್ಲಬ್​ (ಒಂದಾಗಿಸು) ಮಾಡಬೇಕು ಮತ್ತು ಅದನ್ನ ದೆಹಲಿಗೆ ವರ್ಗಾವಣೆ ಮಾಡಬೇಕು ಎಂದು ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ. ಹಾಗೇ, ಈ ಎಫ್​ಐಆರ್​ಗಳ ವಿಚಾರಣೆಯಿಂದ ಮಧ್ಯಂತರ ತಡೆ ನೀಡಬೇಕು ಎಂದೂ ಕೇಳಿಕೊಂಡಿದ್ದಾರೆ. ಇನ್ನು ಬಾಬಾ ರಾಮ್​ದೇವ್​ ವಿರುದ್ಧ ಸೆಕ್ಷನ್​ 188, 504, 269 ಇತ್ಯಾದಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Simply Explained : ಏನಿದು ಡೆಲ್ಟಾ.. ಡೆಲ್ಟಾ ಪ್ಲಸ್ ವೈರಸ್, 3rd Wave ಹೇಗಿರುತ್ತೆ: ?

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ