COVID19 Vaccination ‘ಮನೆಯಿಲ್ಲದವರಿಗೆ ಕೊವಿಡ್ ಲಸಿಕೆ ನೋಂದಣಿ ನಿರ್ಬಂಧಿಸಲಾಗಿದೆ’ ಮಾಧ್ಯಮ ವರದಿ ಆಧಾರ ರಹಿತ: ಕೇಂದ್ರ ಆರೋಗ್ಯ ಸಚಿವಾಲಯ

ಕೊವಿಡ್ ವ್ಯಾಕ್ಸಿನೇಷನ್‌ಗೆ ಮೊಬೈಲ್ ಫೋನ್‌ ಇರಲೇಬೇಕಿಂದಿಲ್ಲ. ವ್ಯಾಕ್ಸಿನೇಷನ್ ಪಡೆಯಲು ವಿಳಾಸ ಪುರಾವೆ ಸಹ ಕಡ್ಡಾಯವಲ್ಲ. ಲಸಿಕೆ ಪಡೆಯಲು ಕೋ-ವಿನ್‌ನಲ್ಲಿ ಆನ್‌ಲೈನ್‌ನಲ್ಲಿ ಮೊದಲೇ ನೋಂದಾಯಿಸಿಕೊಳ್ಳುವುದು ಕಡ್ಡಾಯವಲ್ಲ.

COVID19 Vaccination 'ಮನೆಯಿಲ್ಲದವರಿಗೆ ಕೊವಿಡ್ ಲಸಿಕೆ ನೋಂದಣಿ ನಿರ್ಬಂಧಿಸಲಾಗಿದೆ' ಮಾಧ್ಯಮ ವರದಿ ಆಧಾರ ರಹಿತ: ಕೇಂದ್ರ ಆರೋಗ್ಯ ಸಚಿವಾಲಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 23, 2021 | 5:17 PM

ದೆಹಲಿ: ತಾಂತ್ರಿಕ ಅವಶ್ಯಕತೆಗಳ ಅಲಭ್ಯತೆಯಿಂದಾಗಿ ಮನೆಯಿಲ್ಲದ ಜನರನ್ನು ಕೊವಿಡ್ ಲಸಿಕೆಗಾಗಿ ನೋಂದಾಯಿಸುವುದನ್ನು ‘ನಿರ್ಬಂಧಿಸಲಾಗಿದೆ ಮತ್ತು ಸ್ಪಷ್ಟವಾಗಿ ಬಿಟ್ಟುಬಿಡಲಾಗಿದೆ’ ಎಂದು ಕೆಲವು ಮಾಧ್ಯಮ ವರದಿಗಳು ಬಂದಿವೆ. ಲಸಿಕೆ ಹಾಕಿಸಿಕೊಳ್ಳುವ ಜನರಿಗೆ ‘ಡಿಜಿಟಲ್‌ ನೋಂದಣಿ ಮಾಡುವ ಅವಶ್ಯಕತೆ’, ‘ಇಂಗ್ಲಿಷ್‌ ಜ್ಞಾನ ಮತ್ತು ಕಂಪ್ಯೂಟರ್‌ ಆಕ್ಸೆಸ್ ಅಥವಾ ಇಂಟರ್‌ನೆಟ್‌ಗೆ ಸಂಪರ್ಕ ಹೊಂದಿದ ಸ್ಮಾರ್ಟ್ ಫೋನ್‌’ ಇರಬೇಕು ಎಂದು ಮಾಧ್ಯಮ ವರದಿಯಲ್ಲಿ ಹೇಳಿದೆ. ಆದರೆ ಇವೆಲ್ಲವೂ ಆಧಾರ ರಹಿತ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಈ ಬಗ್ಗೆ ಬುಧವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪತ್ರಿಕಾಪ್ರಕಟಣೆ ಹೊರಡಿಸಿದ್ದು, ಮಾಧ್ಯಮಗಳಲ್ಲಿನ ವರದಿ ಆಧಾರ ರಹಿತ ಎಂದಿದೆ.

ಕೊವಿಡ್ ವ್ಯಾಕ್ಸಿನೇಷನ್‌ಗೆ ಮೊಬೈಲ್ ಫೋನ್‌ ಇರಲೇಬೇಕಿಂದಿಲ್ಲ ವ್ಯಾಕ್ಸಿನೇಷನ್ ಪಡೆಯಲು ವಿಳಾಸ ಪುರಾವೆ ಸಹ ಕಡ್ಡಾಯವಲ್ಲ. ಲಸಿಕೆ ಪಡೆಯಲು ಕೋ-ವಿನ್‌ನಲ್ಲಿ ಆನ್‌ಲೈನ್‌ನಲ್ಲಿ ಮೊದಲೇ ನೋಂದಾಯಿಸಿಕೊಳ್ಳುವುದು ಕಡ್ಡಾಯವಲ್ಲ. ಬಳಕೆದಾರರನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು, ಕೋ-ವಿನ್ ಈಗ 12 ಭಾಷೆಗಳಲ್ಲಿ ಲಭ್ಯವಿದೆ. ಇವುಗಳಲ್ಲಿ ಹಿಂದಿ, ಮಲಯಾಳಂ, ತಮಿಳು, ತೆಲುಗು, ಕನ್ನಡ, ಮರಾಠಿ, ಗುಜರಾತಿ, ಒಡಿಯಾ, ಬಂಗಾಳಿ, ಅಸ್ಸಾಮೀಸ್, ಗುರುಮುಖಿ (ಪಂಜಾಬಿ) ಮತ್ತು ಇಂಗ್ಲಿಷ್ ಸೇರಿವೆ.

ಕೋ-ವಿನ್ ಪ್ಲಾಟ್‌ಫಾರ್ಮ್ ಒಂದು ಅಂತರ್ಗತ ಐಟಿ ಸಿಸ್ಟಂ ಆಗಿದ್ದು, ಇದು ದೇಶದ ದೂರದ ಪ್ರದೇಶಗಳಲ್ಲಿ ಮತ್ತು ಹೆಚ್ಚು ದುರ್ಬಲರಾಗಿರುವವರಿಗೆ ವ್ಯಾಪ್ತಿಯನ್ನು ಒದಗಿಸಲು ಅಗತ್ಯವಿರುವ ಎಲ್ಲಾ ವೈಶಿಷ್ಟ್ಯಗಳೊಂದಿಗೆ ಹೊಂದಿಕೊಳ್ಳುವ ಚೌಕಟ್ಟನ್ನು ಒದಗಿಸುತ್ತದೆ. ಆಧಾರ್, ಮತದಾರರ ಫೋಟೋ ಗುರುತಿನ ಚೀಟಿ, ಫೋಟೋ ಹೊಂದಿರುವ ರೇಷನ್ ಕಾರ್ಡ್, ಅಂಗವೈಕಲ್ಯ ಐಡಿ ಸೇರಿದಂತೆ ಒಂಬತ್ತು ಗುರುತಿನ ಚೀಟಿಗಳಲ್ಲಿ ಒಂದು ಸಾಕು. ನಿರ್ದಿಷ್ಟಪಡಿಸಿದ ಒಂಬತ್ತು ಗುರುತಿನ ಚೀಟಿಗಳಲ್ಲಿ ಯಾವುದೂ ಇಲ್ಲದಿರುವ ಅಥವಾ ಮೊಬೈಲ್ ಫೋನ್ ಹೊಂದಿರುವವರಿಗೆ ವ್ಯಾಕ್ಸಿನೇಷನ್ ಅವಧಿಗಳನ್ನು ಆಯೋಜಿಸಲು ಭಾರತ ಸರ್ಕಾರವು ವಿಶೇಷ ನಿಬಂಧನೆಗಳನ್ನು ಮಾಡಿದೆ.

ಅಂತಹ ನಿಬಂಧನೆಗಳ ಸಂಪೂರ್ಣ ಲಾಭವನ್ನು ಪಡೆದು, ಇಂತಹ 2 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ವೃದ್ಧರು ಮತ್ತು ಅಂಗವೈಕಲ್ಯ ಹೊಂದಿರುವವರಿಗೆ ಮನೆ-ಮನೆಗೆ ಲಸಿಕೆ ಕೇಂದ್ರದ ಸೇವೆಗಳನ್ನು ಸಹ ಒದಗಿಸಲಾಗುತ್ತಿದೆ. 2021 ರ ಮೇ 27 ರಂದು ವೃದ್ಧರು ಮತ್ತು ಅಂಗವೈಕಲ್ಯ ಹೊಂದಿರುವವರಿಗೆ ಮನೆ-ಮನೆಗೆ ಲಸಿಕೆ ಕೇಂದ್ರ ಸೇವೆಗಳಿಗೆ ಭಾರತ ಸರ್ಕಾರ ಸಲಹೆ ನೀಡಿದೆ.

ಇಂಟರ್ನೆಟ್ ಅಥವಾ ಸ್ಮಾರ್ಟ್ ಫೋನ್‌ಗಳಿಗೆ ಅಥವಾ ಮೊಬೈಲ್ ಫೋನ್‌ಗೆ ಆಕ್ಸೆಸ್ ಇಲ್ಲದವರಿಗೆ ಆನ್-ಸೈಟ್ ನೋಂದಣಿಗೆ ಉಚಿತವಾಗಿ (ವಾಕ್-ಇನ್) ಮತ್ತು ವ್ಯಾಕ್ಸಿನೇಷನ್ ಎಲ್ಲಾ ಸರ್ಕಾರಿ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಲಭ್ಯವಿದೆ. ಎಲ್ಲಾ ಲಸಿಕೆ ಪ್ರಮಾಣಗಳಲ್ಲಿ ಶೇ 80 ಇಲ್ಲಿಯವರೆಗೆ ಆನ್-ಸೈಟ್ ವ್ಯಾಕ್ಸಿನೇಷನ್ ಮೋಡ್​ನಲ್ಲಿ​ ನೀಡಲಾಗುತ್ತದೆ. ಆನ್-ಸೈಟ್ (ಅಥವಾ ವಾಕ್-ಇನ್) ವ್ಯಾಕ್ಸಿನೇಷನ್‌ನಲ್ಲಿ ನೋಂದಣಿ, ವ್ಯಾಕ್ಸಿನೇಷನ್ ಮತ್ತು ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಿಗಾಗಿ ಎಲ್ಲಾ ಡೇಟಾ ರೆಕಾರ್ಡಿಂಗ್ ಅನ್ನು ವ್ಯಾಕ್ಸಿನೇಟರ್ ಮಾಡುತ್ತಾರೆ ಮತ್ತು ಫಲಾನುಭವಿ ಮೂಲಭೂತ ಕನಿಷ್ಠ ಅಗತ್ಯ ಮಾಹಿತಿಯನ್ನು ಒದಗಿಸುವುದು ಅಗತ್ಯವಾಗಿರುತ್ತದೆ.

ಇದಲ್ಲದೆ ಕೊವಿಡ್ ವ್ಯಾಕ್ಸಿನೇಷನ್ ವ್ಯಾಪ್ತಿಯು ಬುಡಕಟ್ಟು ಜಿಲ್ಲೆಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದೆ. ಶೇ 70 ಕ್ಕಿಂತಲೂ ಹೆಚ್ಚು ವ್ಯಾಕ್ಸಿನೇಷನ್ ಕೇಂದ್ರಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 26,000 ಕ್ಕಿಂತ ಹೆಚ್ಚು ಮತ್ತು ಉಪ ಆರೋಗ್ಯ ಕೇಂದ್ರಗಳಲ್ಲಿ 26000ಕ ವ್ಯಾಕ್ಸಿನೇಷನ್ ಕೇಂದ್ರಗಳಿವೆ.

ಇದನ್ನೂ ಓದಿ:  ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕೊವಿಡ್ ಲಸಿಕೆ: ಡಿಸಿಎಂ ಡಾ. ಅಶ್ವತ್ಥ್ ನಾರಾಯಣ

(Media reports alleging that homeless people have been barred and conspicuously left out are baseless says Ministry of Health)

Published On - 5:15 pm, Wed, 23 June 21

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು