AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾದ ಕೂಡಲೆ ಪ್ರೇಮಿಯ ಜೊತೆ ವಧು ಪರಾರಿ; ಸೋನಂ ರೀತಿ ಕೊಲ್ಲಲಿಲ್ಲವಲ್ಲ ಎಂದು ನಿಟ್ಟುಸಿರು ಬಿಟ್ಟ ಗಂಡ!

ಉತ್ತರ ಪ್ರದೇಶದ ಬದೌನ್‌ನಲ್ಲಿ ನವವಿವಾಹಿತ ಮಹಿಳೆ ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ. ರಾಜ ರಘುವಂಶಿಯ ರೀತಿ ಹೆಂಡತಿ ನನ್ನನ್ನು ಕೊಲ್ಲಲಿಲ್ಲವಲ್ಲ ಎಂದು ಆಕೆಯ ಗಂಡ ನಿಟ್ಟುಸಿರು ಬಿಟ್ಟಿದ್ದಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತ ಮಹಿಳೆ ತನ್ನ ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ. ಆಕೆಯ ಪತಿ ಕಾನೂನು ಕ್ರಮ ಕೈಗೊಳ್ಳುವ ಬದಲು ಸದ್ಯ ನನ್ನ ಜೀವಕ್ಕೆ ಆಪತ್ತು ತರಲಿಲ್ಲವಲ್ಲ ಎಂದು ಆಕೆಯನ್ನು ಆಕೆಯ ಇಷ್ಟದಂತೆ ಬದುಕಲು ಬಿಟ್ಟಿದ್ದಾಳೆ.

ಮದುವೆಯಾದ ಕೂಡಲೆ ಪ್ರೇಮಿಯ ಜೊತೆ ವಧು ಪರಾರಿ; ಸೋನಂ ರೀತಿ ಕೊಲ್ಲಲಿಲ್ಲವಲ್ಲ ಎಂದು ನಿಟ್ಟುಸಿರು ಬಿಟ್ಟ ಗಂಡ!
Sunil
ಸುಷ್ಮಾ ಚಕ್ರೆ
|

Updated on:Jun 17, 2025 | 8:27 PM

Share

ನವದೆಹಲಿ, ಜೂನ್ 17: ಮೊದಲೆಲ್ಲ ಮದುವೆಯಾದ ಮಹಿಳೆ ಗಂಡನನ್ನು ಬಿಟ್ಟು ಓಡಿಹೋದರೆ ಅದು ದೊಡ್ಡ ಸುದ್ದಿಯಾಗುತ್ತಿತ್ತು. ಆದರೆ, ಇತ್ತೀಚೆಗೆ ವಿವಾಹಿತ ಮಹಿಳೆಯರು ತಮ್ಮ ಗಂಡನನ್ನು ಕೊಲ್ಲುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ, ಹೆಂಡತಿ ತಮ್ಮನ್ನು ಬದುಕಲು ಬಿಟ್ಟರೆ ಸಾಕು ಎಂದುಕೊಳ್ಳುವ ಗಂಡಂದಿರು ಹೆಚ್ಚಾಗಿದ್ದಾರೆ. ಇದೀಗ ಉತ್ತರ ಪ್ರದೇಶದ ಮಹಿಳೆ ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ. ಆದರೆ, ಆಕೆಯ ಗಂಡ ಪೊಲೀಸರಿಗೆ ದೂರು ಕೊಡುವ ಬದಲು ಆಕೆ ಹೋಗಿದ್ದೇ ಒಳ್ಳೆಯದಾಯಿತು ಎಂದು ಸುಮ್ಮನಾಗಿದ್ದಾನೆ. ಸದ್ಯ ರಾಜ ರಘುವಂಶಿಯನ್ನು (Raja Raghuvanshi) ಆತನ ಹೆಂಡತಿ ಕೊಲೆ ಮಾಡಿದಂತೆ ನನ್ನ ಹೆಂಡತಿ ನನ್ನನ್ನು ಕೊಲ್ಲದೆ ಬಿಟ್ಟು ಹೋಗಿದ್ದಾಳಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಮದುವೆಯಾಗಿ ಕೆಲವು ದಿನಗಳ ನಂತರ ಮಹಿಳೆ ಪ್ರಿಯಕರನೊಂದಿಗೆ ಪತ್ನಿ ಓಡಿಹೋಗಿದ್ದಾಳೆ. ಮೇಘಾಲಯದಲ್ಲಿ ತನ್ನ ಪತ್ನಿಯಿಂದ ಹನಿಮೂನ್ ಸಮಯದಲ್ಲಿ ಕೊಲೆಯಾದ ಇಂದೋರ್ ವ್ಯಕ್ತಿಯ ರಾಜ ರಘುವಂಶಿಯಂತೆ ನಾನು ಕೊನೆಯಾಗಲಿಲ್ಲವಲ್ಲ, ಆದ್ದರಿಂದ ನಾನು ಸಂತೋಷವಾಗಿದ್ದೇನೆ ಎಂದು ಆಕೆಯ ಗಂಡ ಹೇಳಿದ್ದಾರೆ.

ಇದನ್ನೂ ಓದಿ: ಮೇಘಾಲಯದ ಹನಿಮೂನ್​ನಲ್ಲಿ ಕೊಲೆ; ನಾನೇ ಗಂಡ ರಾಜ ರಘುವಂಶಿಯನ್ನು ಕೊಂದಿದ್ದೆಂದು ಒಪ್ಪಿಕೊಂಡ ಸೋನಂ

20 ವರ್ಷದ ಮಹಿಳೆ ಮೇ 17ರಂದು 23 ವರ್ಷದ ಸುನಿಲ್ ಅವರನ್ನು ವಿವಾಹವಾಗಿದ್ದಳು. 9 ದಿನಗಳ ಕಾಲ ತನ್ನ ಅತ್ತೆಯ ಮನೆಯಲ್ಲಿದ್ದ ಆಕೆ ನಂತರ ತನ್ನ ತಾಯಿಯ ಮನೆಗೆ ತೆರಳಿದಳು. ಅಲ್ಲಿಂದ ಆಕೆ ವಾಪಾಸ್ ಬರಲೇ ಇಲ್ಲ. ಅದರ ಬದಲು, ಅವಳು ಮದುವೆಯಾದ 10 ದಿನಗಳ ನಂತರ ತನ್ನ ಪ್ರಿಯಕರನೊಂದಿಗೆ ಓಡಿಹೋದಳು. ಸೋಮವಾರ, ಆ ಮಹಿಳೆ ಪೊಲೀಸ್ ಠಾಣೆಗೆ ಹೋಗಿ ತಾನು ತನ್ನ ಪ್ರಿಯಕರನೊಂದಿಗೆ ವಾಸಿಸಲು ಬಯಸುವುದಾಗಿ ಘೋಷಿಸಿದಳು. ಪೊಲೀಸರು ಮತ್ತು ಅವರ ಕುಟುಂಬದ ಸದಸ್ಯರ ಮುಂದೆ ಆಕೆ ಈ ಹೇಳಿಕೆ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಮದುವೆಯ ಸಮಯದಲ್ಲಿ ವಿನಿಮಯ ಮಾಡಿಕೊಂಡ ಉಡುಗೊರೆಗಳನ್ನು, ಆಭರಣಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಹಿಂದಿರುಗಿಸಿದ ನಂತರ ಎರಡೂ ಕುಟುಂಬಗಳು ಬೇರೆಯಾಗಲು ಒಪ್ಪಿಕೊಂಡಿದ್ದರಿಂದ ಪೊಲೀಸರು ಈ ವಿಷಯವನ್ನು ಇತ್ಯರ್ಥಪಡಿಸಿದರು. ಎರಡೂ ಕಡೆಯವರು ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ.

ಇದನ್ನೂ ಓದಿ: ಮೇಘಾಲಯದಲ್ಲಿ ಕೊಲೆಗೂ ಮೊದಲಿನ ರಾಜ ರಘುವಂಶಿಯ ಕೊನೆಯ ವಿಡಿಯೋ ಬಯಲು

ಈ ಬಗ್ಗೆ ಮಾತನಾಡಿರುವ ಆಕೆಯ ಗಂಡ ಸುನಿಲ್, “ನಮ್ಮ ಹನಿಮೂನ್​ಗಾಗಿ ನಾನು ಅವಳನ್ನು ನೈನಿತಾಲ್‌ಗೆ ಕರೆದೊಯ್ಯಲು ಪ್ಲಾನ್ ಮಾಡಿದ್ದೆ. ಆದರೆ ಅವಳು ತನ್ನ ಪ್ರಿಯಕರನೊಂದಿಗೆ ಇರಲು ಬಯಸಿದರೆ ನಾನು ಕೂಡ ಸಂತೋಷವಾಗಿದ್ದೇನೆ. ನನ್ನ ಜೀವ ಕೂಡ ರಾಜಾ ರಘುವಂಶಿಯಂತೆ ಕೊನೆಗೊಂಡಿಲ್ಲವಲ್ಲ ಎಂದು ನನಗೆ ಸಂತೋಷವಾಗಿದೆ. ಈಗ ನಾವು ಮೂವರೂ ಸಂತೋಷವಾಗಿದ್ದೇವೆ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:27 pm, Tue, 17 June 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ