ಮೇಘಾಲಯದಲ್ಲಿ ಕೊಲೆಗೂ ಮೊದಲಿನ ರಾಜ ರಘುವಂಶಿಯ ಕೊನೆಯ ವಿಡಿಯೋ ಬಯಲು
ಮೇಘಾಲಯದಲ್ಲಿ ನಡೆದ ಕೊಲೆಗೂ ಕೆಲವೇ ಗಂಟೆಗಳ ಮೊದಲು ಪತ್ನಿ ಸೋನಂ ಜೊತೆ ರಾಜಾ ರಘುವಂಶಿ ಟ್ರೆಕ್ಕಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈಶಾನ್ಯ ರಾಜ್ಯವಾದ ಮೇಘಾಲಯದಲ್ಲಿ ದಂಪತಿಗಳು ಹನಿಮೂನ್‌ಗೆ ಹೋಗಿದ್ದಾಗ ಪತಿ ರಾಜಾ ರಘುವಂಶಿಯನ್ನು ಕೊಂದ ಆರೋಪದ ಮೇಲೆ ಸೋನಂ ಹಾಗೂ ಇತರೆ ನಾಲ್ವರನ್ನು ಬಂಧಿಸಲಾಗಿದೆ.

ಶಿಲ್ಲಾಂಗ್, ಜೂನ್ 16: ಇಂದೋರ್ ಮೂಲದ ಉದ್ಯಮಿ ರಾಜ ರಘುವಂಶಿಯ (Raja Raghuvanshi) ಹತ್ಯೆಗೂ ಕೆಲವು ಗಂಟೆಗಳ ಮೊದಲು, ರಾಜ ತಮ್ಮ ಪತ್ನಿ ಸೋನಮ್ (ಪ್ರಮುಖ ಆರೋಪಿ) ಜೊತೆ ಮೇಘಾಲಯದ ಹಚ್ಚ ಹಸಿರಿನ ಪರ್ವತಗಳ ಕಡಿದಾದ ಶಿಖರದ ಮೇಲೆ ಚಾರಣ ಮಾಡುತ್ತಿದ್ದರು. ಈ ವೇಳೆ ಬೇರೆ ಪ್ರಯಾಣಿಕರು ಅದೇ ಮಾರ್ಗದಲ್ಲಿ ಹೋಗುವಾಗ ಅವರಿಬ್ಬರ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಈ ದೃಶ್ಯವನ್ನು ಮೇ 23ರಂದು ಬೆಳಿಗ್ಗೆ 9.45ರ ಸುಮಾರಿಗೆ ರಾಜ ರಘುವಂಶಿ ಬೆಟ್ಟವನ್ನು ಹತ್ತುತ್ತಿರುವುದನ್ನು ಪ್ರವಾಸಿಗರೊಬ್ಬರು “ಆಕಸ್ಮಿಕವಾಗಿ” ಚಿತ್ರೀಕರಿಸಿದ ವಿಡಿಯೋ ಸೆರೆಹಿಡಿದಿದೆ. ಅದೇ ದಿನ ಮಧ್ಯಾಹ್ನ ಸೋನಮ್ ಮತ್ತು ಆಕೆಯ ಪ್ರೇಮಿ ರಾಜ್ ಕುಶ್ವಾಹ ನೇಮಿಸಿಕೊಂಡಿದ್ದ ಮೂವರು ಹಂತಕರು ರಾಜ ಅವರನ್ನು ಕೊಲೆ ಮಾಡಿ ಕಣಿವೆಗೆ ಎಸೆದಿದ್ದಾರೆ.
ಶಿಲ್ಲಾಂಗ್‌ನಲ್ಲಿದ್ದ ಪ್ರವಾಸಿಗರೊಬ್ಬರು ರಾಜ ರಘುವಂಶಿ ಅವರ ಸಾವಿಗೆ ಮುನ್ನ ಅವರ ಕೊನೆಯ ಕ್ಷಣಗಳನ್ನು ಆಕಸ್ಮಿಕವಾಗಿ ಸೆರೆಹಿಡಿದಿದ್ದಾರೆ. ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಡಬಲ್ ಡೆಕ್ಕರ್ ಸೇತುವೆಗೆ ಭೇಟಿ ನೀಡುವಾಗ ರಾಜಾ ಮತ್ತು ಸೋನಂ ರಘುವಂಶಿಯನ್ನು ತಿಳಿಯದೆ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ರಾಜಾ ರಘುವಂಶಿ ಮಾದರಿಯ ಕೊಲೆ, ಪತಿಯ ಕೊಂದು ನದಿಗೆ ಎಸೆದಿದ್ದ ಪತ್ನಿ
View this post on Instagram
ಪ್ರವಾಸಿ ದೇವ್ ಸಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ತಾವು ಚಿತ್ರೀಕರಿಸಿದ ವೀಡಿಯೊ ಪೋಸ್ಟ್ ಮಾಡಿದ್ದು, ಅದರಲ್ಲಿ ಸೋನಮ್ ಮುಂದೆ ಬೆಟ್ಟವನ್ನು ಹತ್ತುತ್ತಿದ್ದರು, ರಾಜಾ ಆಕೆಯನ್ನು ಹಿಂಬಾಲಿಸುತ್ತಿದ್ದರು. ಅವಳು ಬಿಳಿ ಟಿ-ಶರ್ಟ್ ಧರಿಸಿರುವುದನ್ನು ನೋಡಬಹುದು. ರಾಜಾ ರಘುವಂಶಿ ಕೂಡ ಬಿಳಿ ಶರ್ಟ್ ಧರಿಸಿದ್ದರು. ಸೋನಮ್ ಧರಿಸಿದ್ದ ಶರ್ಟ್ ಮೇಘಾಲಯದ ಪೊಲೀಸರಿಗೆ ಅಪರಾಧ ನಡೆದ ಸ್ಥಳದ ಬಳಿ ಸಿಕ್ಕಿತ್ತು. ಅವಳು ಪಾಲಿಥಿನ್ ಬ್ಯಾಗ್ ಅನ್ನು ಸಹ ಹೊತ್ತೊಯ್ದಿದ್ದಳು, ಅದರಲ್ಲಿ ರೇನ್‌ಕೋಟ್ ಇತ್ತು ಎಂದು ವರದಿಯಾಗಿದೆ. ಸೋನಮ್‌ನ ಮೂವರು ಸಹಚರರು ಅವರನ್ನು ಹಿಂಬಾಲಿಸುತ್ತಿದ್ದ ಸಮಯ ಇದು.
ಇದನ್ನೂ ಓದಿ: ಮೇಘಾಲಯದ ಹನಿಮೂನ್ನಲ್ಲಿ ಕೊಲೆ; ನಾನೇ ಗಂಡ ರಾಜ ರಘುವಂಶಿಯನ್ನು ಕೊಂದಿದ್ದೆಂದು ಒಪ್ಪಿಕೊಂಡ ಸೋನಂ
ರಾಜ ರಘುವಂಶಿ ಕೊಲೆ:
ಸೋನಮ್ (25) ಮತ್ತು ರಾಜಾ (29) ಮೇ 11ರಂದು ಇಂದೋರ್‌ನಲ್ಲಿ ವಿವಾಹವಾದರು. ಹನಿಮೂನ್ಗಾಗಿ ಮೇ 20ರಂದು ಅವರು ಅಸ್ಸಾಂನ ಗುವಾಹಟಿ ಮೂಲಕ ಮೇಘಾಲಯ ತಲುಪಿದರು. ಇಬ್ಬರೂ ಮೇ 23ರಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾದಲ್ಲಿ ನೊಂಗ್ರಿಯಾತ್ ಗ್ರಾಮದ ಹೋಂಸ್ಟೇಯಿಂದ ಹೊರಬಂದ ಕೆಲವು ಗಂಟೆಗಳ ನಂತರ ನಾಪತ್ತೆಯಾಗಿದ್ದರು. ನಂತರ ಜೂನ್ 2ರಂದು ವೈಸಾವ್ಡಾಂಗ್ ಜಲಪಾತದ ಬಳಿಯ ಕಣಿವೆಯಲ್ಲಿ ರಾಜಾ ಅವರ ಶವ ಪತ್ತೆಯಾಗಿತ್ತು. ಜೂನ್ 9ರ ಮುಂಜಾನೆ ಸುಮಾರು 1,200 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಘಾಜಿಪುರದಲ್ಲಿ ಕಾಣಿಸಿಕೊಂಡಿದ್ದರು. ಪೊಲೀಸರು ಆಕೆಯ ಪ್ರೇಮಿ ರಾಜ್ ಕುಶ್ವಾಹ ಮತ್ತು ರಾಜಾ ಅವರನ್ನು ಕೊಲೆ ಮಾಡಲು ನೇಮಿಸಿಕೊಂಡಿದ್ದ ಮೂವರು ಕಾಂಟ್ರಾಕ್ಟ್ ಕಿಲ್ಲರ್ ಅನ್ನು ಬಂಧಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








