ಅಪರೂಪದ ಖನಿಜಗಳ ಕುರಿತ ಅಂತರ್ ಸಚಿವಾಲಯದ ಸಭೆಯಲ್ಲಿ ಕೇಂದ್ರ ಸಚಿವ ಕಿಶನ್ ರೆಡ್ಡಿ ಭಾಗಿ
ಅಪರೂಪದ ಖನಿಜಗಳ ಪೂರೈಕೆ ಸರಪಳಿ ಸುರಕ್ಷಿತಗೊಳಿಸುವ ಮಾರ್ಗಗಳ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಜೊತೆ ಕೇಂದ್ರ ಕಲ್ಲಿದ್ದಲು ಸಚಿವ ಕಿಶನ್ ರೆಡ್ಡಿ ಸಭೆ ನಡೆಸಿದ್ದಾರೆ. ಈ ಬಗ್ಗೆ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ ಕಿಶನ್ ರೆಡ್ಡಿ ಟ್ವೀಟ್ ಮಾಡಿದ್ದಾರೆ. ಗೌರವಾನ್ವಿತ ಕೇಂದ್ರ ಸಚಿವ ಜೆಚ್.ಡಿ. ಕುಮಾರಸ್ವಾಮಿ ಮತ್ತು ಪರಮಾಣು ಶಕ್ತಿ, ಉಕ್ಕು, ಭಾರೀ ಕೈಗಾರಿಕೆಗಳು ಮತ್ತು ವಾಣಿಜ್ಯ ಸಚಿವಾಲಯಗಳ ಅಧಿಕಾರಿಗಳೊಂದಿಗೆ ಅಂತರ-ಸಚಿವಾಲಯ ಸಭೆ ನಡೆಸಿದ್ದಾಗಿ ಕಿಶನ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.

ನವದೆಹಲಿ, ಜೂನ್ 17: ಎಲೆಕ್ಟ್ರಾನಿಕ್ಸ್ ಉದ್ಯಮ, ಇಂಧನ ಮತ್ತು ರಾಷ್ಟ್ರೀಯ ಭದ್ರತೆಗೆ ಅತ್ಯಗತ್ಯವಾದ ಅಪರೂಪದ ಭೂಮಿ ಮತ್ತು ನಿರ್ಣಾಯಕ ಖನಿಜಗಳ ಪೂರೈಕೆ ಸರಪಳಿಗಳನ್ನು ಸುರಕ್ಷಿತಗೊಳಿಸುವ ಅಂಶಗಳ ಕುರಿತು ಇಂದು ನಡೆದ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಕಿಶನ್ ರೆಡ್ಡಿ (Kishan Reddy) ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಚರ್ಚಿಸಿದರು. ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ ಕಿಶನ್ ರೆಡ್ಡಿ ಇಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ಮತ್ತು ಕೆಲವು ಕೇಂದ್ರ ಸಚಿವಾಲಯಗಳ ಅಧಿಕಾರಿಗಳೊಂದಿಗೆ ಅಂತರ-ಸಚಿವಾಲಯ ಸಭೆ ನಡೆಸಿದರು. ಈ ವೇಳೆ ಅವರು ಎಲೆಕ್ಟ್ರಾನಿಕ್ಸ್ ಉದ್ಯಮ, ಇಂಧನ ಮತ್ತು ರಾಷ್ಟ್ರೀಯ ಭದ್ರತೆಗೆ ಅತ್ಯಗತ್ಯವಾದ ಅಪರೂಪದ ಭೂಮಿ ಮತ್ತು ನಿರ್ಣಾಯಕ ಖನಿಜಗಳ ಪೂರೈಕೆ ಸರಪಳಿಗಳನ್ನು ಭದ್ರಪಡಿಸುವ ಹಲವಾರು ಅಂಶಗಳ ಕುರಿತು ಚರ್ಚಿಸಿದರು.
ಮೋದಿ ಸರ್ಕಾರವು ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್ (NCMM) ಅನ್ನು ಜಾರಿಗೆ ತಂದಿದೆ ಮತ್ತು ಖನಿಜಗಳಲ್ಲಿ ಭಾರತವನ್ನು “ಆತ್ಮನಿರ್ಭರ”ವನ್ನಾಗಿ ಮಾಡುವತ್ತ ಕೆಲಸ ಮಾಡುತ್ತಿದೆ ಎಂದು ಸಚಿವ ಕಿಶನ್ ರೆಡ್ಡಿ ಹೇಳಿದರು. ಪರಮಾಣು ಶಕ್ತಿ, ಉಕ್ಕು, ಭಾರೀ ಕೈಗಾರಿಕೆಗಳು ಮತ್ತು ವಾಣಿಜ್ಯ ಸಚಿವಾಲಯಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಜಿ7 ಶೃಂಗಸಭೆಗೆ ಪ್ರಧಾನಿ ಮೋದಿಗೆ ಆಹ್ವಾನ; ಕಾಂಗ್ರೆಸ್ ಟೀಕೆಗೆ ಕೇಂದ್ರ ಸಚಿವ ಕಿಶನ್ ರೆಡ್ಡಿ ತಿರುಗೇಟು
Discussions focused on strengthening the value chain, from mining to refining to end-use. @narendramodi govt has implemented the National Critical Mineral Mission (NCMM) and is adopting a whole-of-government approach to make India #Atmanirbhar in minerals. pic.twitter.com/bWt2bIMAKP
— G Kishan Reddy (@kishanreddybjp) June 17, 2025
” ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಪರಮಾಣು ಶಕ್ತಿ, ಉಕ್ಕು, ಭಾರೀ ಕೈಗಾರಿಕೆಗಳು ಮತ್ತು ವಾಣಿಜ್ಯ ಸಚಿವಾಲಯಗಳ ಅಧಿಕಾರಿಗಳೊಂದಿಗೆ ಅಂತರ-ಸಚಿವಾಲಯ ಸಭೆ ನಡೆಸಲಾಯಿತು. ಎಲೆಕ್ಟ್ರಾನಿಕ್ಸ್ ಉದ್ಯಮ, ಇಂಧನ ಮತ್ತು ರಾಷ್ಟ್ರೀಯ ಭದ್ರತೆಗೆ ಅತ್ಯಗತ್ಯವಾದ ಅಪರೂಪದ ಭೂಮಿ ಮತ್ತು ನಿರ್ಣಾಯಕ ಖನಿಜಗಳ ಪೂರೈಕೆ ಸರಪಳಿಗಳನ್ನು ಸುರಕ್ಷಿತಗೊಳಿಸುವ ವ್ಯಾಪಕ ಶ್ರೇಣಿಯ ಅಂಶಗಳ ಕುರಿತು ಚರ್ಚಿಸಲಾಯಿತು” ಎಂದು ಕಿಶನ್ ರೆಡ್ಡಿ ಎಕ್ಸ್ ನಲ್ಲಿನ ಪೋಸ್ಟ್‌ನಲ್ಲಿ ಹೇಳಿದರು.
Held an inter-ministerial meeting with Hon’ble Union Minister Shri @hd_kumaraswamy ji and officials from the Ministries of Atomic Energy, Steel, Heavy Industries & Commerce.
Deliberated on the wide range of aspects of securing the supply chains of Rare Earth & Critical Minerals… pic.twitter.com/tOXsfXV5xe
— G Kishan Reddy (@kishanreddybjp) June 17, 2025
ನವೆಂಬರ್ 2022ರಲ್ಲಿ ಗಣಿ ಸಚಿವಾಲಯವು ರಚಿಸಿದ ಸಮಿತಿಯು 30 ನಿರ್ಣಾಯಕ ಖನಿಜಗಳನ್ನು ಗುರುತಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




