ರಾಹುಲ್ ಗಾಂಧಿ, ರೇವಂತ್ ರೆಡ್ಡಿಯಿಂದ ಸಶಸ್ತ್ರ ಪಡೆಗಳಿಗೆ ಅವಮಾನ; ಕೇಂದ್ರ ಸಚಿವ ಕಿಶನ್ ರೆಡ್ಡಿ ಟೀಕೆ
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿಕೆಗೆ ಕೇಂದ್ರ ಸಚಿವ ಮತ್ತು ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ. ಕಿಶನ್ ರೆಡ್ಡಿ ತಿರುಗೇಟು ನೀಡಿದ್ದಾರೆ. ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ. ರಾಹುಲ್ ಗಾಂಧಿ ದೆಹಲಿಯಿಂದ ಮತ್ತು ರೇವಂತ್ ರೆಡ್ಡಿ ಹೈದರಾಬಾದ್‌ನಿಂದ ಮಾತನಾಡುತ್ತಾರೆ. ಭಾರತೀಯ ಸಶಸ್ತ್ರ ಪಡೆಗಳನ್ನು ಅವಮಾನಿಸುವುದು ಪೂರ್ತಿ ತಪ್ಪು ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನ ಕೂಡ ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿಕೊಂಡಿಲ್ಲ. ಆದರೆ ಈ ಇಬ್ಬರೂ ಹಾಗೆ ಹೇಳಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಹೈದರಾಬಾದ್: ಆಪರೇಷನ್ ಸಿಂಧೂರ್ ಮತ್ತು ಕದನ ವಿರಾಮದ ಕುರಿತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಹೇಳಿಕೆಗೆ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ (Kishan Reddy) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ರೇವಂತ್ ರೆಡ್ಡಿ ಭಾರತದ ಸಶಸ್ತ್ರ ಪಡೆಗಳನ್ನು ಅವಮಾನಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಕಿಶನ್ ರೆಡ್ಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆರಂಭಿಸಲಾದ ಆಪರೇಷನ್ ಸಿಂಧೂರ್ 23 ನಿಮಿಷಗಳಲ್ಲಿ ಪಾಕಿಸ್ತಾನದಲ್ಲಿ 9 ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದೆ ಎಂದು ಪಾಕಿಸ್ತಾನದ ಪ್ರಧಾನಿ ಮತ್ತು ಸೇನೆಯೇ ದೃಢಪಡಿಸಿದೆ ಎಂದು ಹೇಳಿದರು.
ಭಾರತವು ವೀಡಿಯೊ ಪುರಾವೆಗಳೊಂದಿಗೆ ಜಾಗತಿಕವಾಗಿ ದಾಳಿಯನ್ನು ಪ್ರದರ್ಶಿಸಿತು, ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತು, ಪಾಕಿಸ್ತಾನದೊಂದಿಗೆ ವ್ಯಾಪಾರವನ್ನು ಸ್ಥಗಿತಗೊಳಿಸಿತು ಮತ್ತು ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಮೂಲೆಗುಂಪು ಮಾಡಿತು. “ದೇಶ ಒಗ್ಗಟ್ಟಿನಿಂದ ನಿಂತಿದ್ದಾಗ ರಾಹುಲ್ ಗಾಂಧಿ ಮತ್ತು ರೇವಂತ್ ರೆಡ್ಡಿ ಸುಳ್ಳುಗಳನ್ನು ಹರಡಿದರು ಮತ್ತು ನಮ್ಮ ಸಶಸ್ತ್ರ ಪಡೆಗಳ ಯಶಸ್ಸನ್ನು ಪ್ರಶ್ನಿಸಿದರು. ಸೈನಿಕರಿಗೆ ನಮಸ್ಕರಿಸುವ ಬದಲು ನಮ್ಮ ದೇಶದ ಎಷ್ಟು ರಫೇಲ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಕೇಳಿದರು. ಇದು ಸೇನೆಯ ನೈತಿಕತೆಯನ್ನು ಕುಗ್ಗಿಸುತ್ತದೆ ಎಂದು ಕಿಶನ್ ರೆಡ್ಡಿ ಟೀಕಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಬಿಎಸ್‌ಎಫ್ ನೀಡಿದ ಹೊಡೆತದಿಂದ ಹೊರಬರಲು ವರ್ಷಗಳೇ ಬೇಕು; ಅಮಿತ್ ಶಾ
“ಸರ್ಜಿಕಲ್ ಸ್ಟ್ರೈಕ್‌ಗಳಿಂದ ಹಿಡಿದು ವೈಮಾನಿಕ ದಾಳಿಗಳವರೆಗೆ ಮತ್ತು ಆಪರೇಷನ್ ಸಿಂಧೂರ್‌ವರೆಗೆ ಪ್ರಧಾನಿ ಮೋದಿ ಯಾವುದೇ ಕಾಂಗ್ರೆಸ್ ಆಡಳಿತಕ್ಕಿಂತ ಭಿನ್ನವಾಗಿ ದೃಢ ನಿರ್ಧಾರವನ್ನು ತೋರಿಸಿದ್ದಾರೆ. ಯುಪಿಎ ಅವಧಿಯಲ್ಲಿ ಅವರಿಗೆ ಭಯೋತ್ಪಾದನೆಯನ್ನು ನಿಯಂತ್ರಿಸಲು ಆಗಲಿಲ್ಲ. ಮೋದಿ ಅವಧಿಯಲ್ಲಿ ಸೇನೆಗೆ ಪ್ರತೀಕಾರ ತೀರಿಸಿಕೊಳ್ಳಲು ಅಧಿಕಾರ ನೀಡಲಾಯಿತು. ಪಾಕಿಸ್ತಾನ ಕೂಡ ಭಾರತದ ರಫೇಲ್‌ಗಳನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಲಿಲ್ಲ, ಆದರೆ ರಾಹುಲ್ ಗಾಂಧಿ ಗೊಂದಲ ಸೃಷ್ಟಿಸಲು ಸುಳ್ಳುಗಳನ್ನು ಹರಡುತ್ತಲೇ ಇದ್ದಾರೆ. ಕಾಂಗ್ರೆಸ್ ಚುನಾವಣೆಯಲ್ಲಿ ಕುಸಿಯುತ್ತಿದೆ. ತನ್ನ ನಕಾರಾತ್ಮಕ ನಿರೂಪಣೆಯಿಂದಾಗಿ ಒಂದರ ನಂತರ ಒಂದರಂತೆ ರಾಜ್ಯಗಳನ್ನು ಕಳೆದುಕೊಳ್ಳುತ್ತಿದೆ. 10 ವರ್ಷಗಳ ಮೋದಿಯ ಕಠಿಣ ನಿಲುವಿನಿಂದಾಗಿ ಪಾಕಿಸ್ತಾನ ಜಾಗತಿಕವಾಗಿ ಭಿಕ್ಷುಕನಾಗಿದೆ” ಎಂದು ಅವರು ಹೇಳಿದ್ದಾರೆ.
#WATCH | Delhi | On Telangana CM Revanth Reddy’s statement, Union Minister and Telangana BJP President G Kishan Reddy says, “I condemn this statement… ‘Bade Miyan’ Rahul Gandhi speaks from Delhi and ‘Chhote Miyan’ Revanth Reddy speaks from Hyderabad… Insulting Indian armed… pic.twitter.com/bH4pmprFd9
— ANI (@ANI) May 30, 2025
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೊದಲ ದಿನವೇ 23 ನಿಮಿಷಗಳಲ್ಲಿ, ಭಾರತೀಯ ಪಡೆಗಳು ಪಾಕಿಸ್ತಾನಿ ನೆಲದಲ್ಲಿ 9 ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದವು. ಈ ಸಂಗತಿಯನ್ನು ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನಿ ಪ್ರಧಾನಿ ಇಬ್ಬರೂ ಒಪ್ಪಿಕೊಂಡರು. ನಮ್ಮ ಕ್ಷಿಪಣಿಗಳಿಂದ ಉಂಟಾದ ವಿನಾಶದ ವೀಡಿಯೊ ದೃಶ್ಯಾವಳಿಗಳನ್ನು ನಾವು ಒದಗಿಸಿದ್ದೇವೆ.
ಇದನ್ನೂ ಓದಿ: ಇಡೀ ಜಗತ್ತೇ ಭಾರತದ ಹೆಣ್ಣಿನ ಸಿಂಧೂರದ ಶಕ್ತಿ ಕಂಡಿದೆ; ಪ್ರಧಾನಿ ಮೋದಿ
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭಾರತದ ಮೇಲೆ ದಾಳಿ ಮಾಡಲು ಯೋಜಿಸಿದ ನಂತರ, ಭಾರತೀಯ ಸಶಸ್ತ್ರ ಪಡೆಗಳು ಆ ರಾತ್ರಿಯೇ ಅವರ ವಾಯು ನೆಲೆಗಳ ಮೇಲೆ ದಾಳಿ ಮಾಡಿವೆ ಎಂದು ಬಹಿರಂಗವಾಗಿ ಒಪ್ಪಿಕೊಂಡರು. ಆದರೆ ಇಲ್ಲಿ ಭಾರತದಲ್ಲಿ ರಾಹುಲ್ ಗಾಂಧಿ ಮತ್ತು ರೇವಂತ್ ರೆಡ್ಡಿಯಂತಹ ಕಾಂಗ್ರೆಸ್ ನಾಯಕರು ಆಧಾರರಹಿತ ವಾದಗಳನ್ನು ಹರಡಲು ಪ್ರಾರಂಭಿಸಿದರು ಎಂದು ಕಿಶನ್ ರೆಡ್ಡಿ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ