AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್​​​ ಪರ ನಿಮ್ಮ ಹೇಳಿಕೆ ನಮಗೆ ನಿರಾಶೆ ತಂದಿದೆ ಎಂದ ತರೂರ್, ಹೇಳಿಕೆಯಿಂದ ಹಿಂದೆ ಸರಿದ ಕೊಲಂಬಿಯಾ

ಪಾಕ್​​​​​ನಲ್ಲಿ ಬಲಿಯಾದವರ ಬಗ್ಗೆ ಸಂತಾಪ ಸೂಚಿಸಿದ ಕೊಲಾಂಬಿಯಾ ತನ್ನ ಹೇಳಿಕೆಯನ್ನು ವಾಪಸ್ಸು ಪಡೆದುಕೊಂಡಿದೆ. 30ರಂದು ಶಶಿ ತರೂರ್​ ಅವರು ಭಾರತ-ಪಾಕಿಸ್ತಾನ ಸಂಘರ್ಷದ ಬಗ್ಗೆ ಕೊಲಂಬಿಯಾ ತನ್ನ ಹಿಂದಿನ ನಿಲುವನ್ನು ಬದಲಾಯಿಸಿದೆ ಎಂದು ಹೇಳಿದ್ದಾರೆ. ಈ ಹಿಂದೆ ಭಾರತೀಯ ವೈಮಾನಿಕ ದಾಳಿಯ ನಂತರ ಪಾಕಿಸ್ತಾನಿಗಳಿಗೆ ಸಂತಾಪ ಸೂಚಿಸಿದ್ದಕ್ಕಾಗಿ ಈ ನಿಲುವು ಟೀಕೆಗೆ ಗುರಿಯಾಗಿತ್ತು. ಇದೀಗ ತನ್ನ ಹೇಳಿಕೆಯನ್ನು ವಾಪಸ್ಸು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

ಪಾಕ್​​​ ಪರ ನಿಮ್ಮ ಹೇಳಿಕೆ ನಮಗೆ ನಿರಾಶೆ ತಂದಿದೆ ಎಂದ ತರೂರ್, ಹೇಳಿಕೆಯಿಂದ ಹಿಂದೆ ಸರಿದ ಕೊಲಂಬಿಯಾ
ಶಶಿ ತರೂರ್
ಅಕ್ಷಯ್​ ಪಲ್ಲಮಜಲು​​
|

Updated on: May 31, 2025 | 10:39 AM

Share

ಪಾಕಿಸ್ತಾನದ ಪರ ಸಹಾನುಭೂತಿ ತೋರಿದ ಕೊಲಂಬಿಯಾ ಸರ್ಕಾರ ಇದೀಗ ತನ್ನ ಹೇಳಿಕೆಯನ್ನು ವಾಪಸ್ಸು ತೆಗೆದುಕೊಂಡಿದೆ. ಈ ಹೇಳಿಕೆಯನ್ನು ಹಿಂದೆ ಸರಿಯಲು ಪ್ರಮುಖ ಕಾರಣ ಭಾರತದಿಂದ ಹೋಗಿರುವ ನಿಯೋಗ ಕಾರಣವಾಗಿದೆ. ನಿಯೋಗದ ನೇತೃತ್ವ ವಹಿಸಿದ ಶಶಿ ತರೂರ್ (Shashi Tharoor) ಕೊಲಂಬಿಯಾದ (Colombia) ಹೇಳಿಕೆಗೆ ನಿರಾಶೆ ವ್ಯಕ್ತಪಡಿಸಿದರು. ಇದೀಗ ಕೊಲಂಬಿಯಾ ಕೂಡ ತನ್ನ ಹೇಳಿಕೆಯನ್ನು ವಾಪಸ್ಸು ತೆಗೆದುಕೊಂಡಿದೆ. ಮೇ. 30ರಂದು ಶಶಿ ತರೂರ್​ ಅವರು ಭಾರತ-ಪಾಕಿಸ್ತಾನ ಸಂಘರ್ಷದ ಬಗ್ಗೆ ಕೊಲಂಬಿಯಾ ತನ್ನ ಹಿಂದಿನ ನಿಲುವನ್ನು ಬದಲಾಯಿಸಿದೆ ಎಂದು ಹೇಳಿದ್ದಾರೆ. ಈ ಹಿಂದೆ ಭಾರತೀಯ ವೈಮಾನಿಕ ದಾಳಿಯ ನಂತರ ಪಾಕಿಸ್ತಾನಿಗಳಿಗೆ ಸಂತಾಪ ಸೂಚಿಸಿದ್ದಕ್ಕಾಗಿ ಈ ನಿಲುವು ಟೀಕೆಗೆ ಗುರಿಯಾಗಿತ್ತು. ಇದೀಗ ತನ್ನ ಹೇಳಿಕೆಯನ್ನು ವಾಪಸ್ಸು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

ಆಪರೇಷನ್ ಸಿಂಧೂರ್​​​ದ ಭಾಗವಾಗಿ ಪಾಕಿಸ್ತಾನವನ್ನು ಜಗತ್ತಿನ ಮುಂದೆ ಬೆತ್ತಲೆ ಮಾಡಲು ಹಾಗೂ ಭಯೋತ್ಪಾದನೆಯನ್ನು ನಾಶ ಮಾಡಲು ಭಾರತದ ಜತೆಗೆ ಜಗತ್ತಿನ ರಾಷ್ಟ್ರಗಳು ನಿಲ್ಲಬೇಕು ಎಂದು ಭಾರತ ಸರ್ಕಾರ ಸರ್ವಪಕ್ಷ ಸಂಸದರ ನಿಯೋಗವನ್ನು ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಿಗೆ ಕಳಿಸಲಾಗಿದೆ. ಇದೀಗ ಇದರ ಭಾಗವಾಗಿ ಭಾರತಕ್ಕೆ ಬೆಂಬಲ ನೀಡಲು ಕೊಲಾಂಬಿಯಾವನ್ನು ಕೂಡ ಕೇಳಲಾಗಿದೆ. ಸದ್ಯದಲ್ಲೇ ಅದು ಕೂಡ ಭಾರತದ ಹೋರಾಟಕ್ಕೆ ಬೆಂಬಲ ನೀಡಲಿದೆ. ಈ ಬಗ್ಗೆ ಹೇಳಿಕೆ ನೀಡಿದ ಶಶಿ ತರೂರ್ ನಾವು ಕೊಲಾಂಬಿಯಾದ ವಿದೇಶಾಂಗ ಸಚಿವಾಲಯವನ್ನು ಭೇಟಿದ್ದೇವು, ಅಲ್ಲಿ ನಮಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇದರ ಜತೆಗೆ ನಮಗೆ ಒಳ್ಳೆಯ ಸುದ್ದಿಯನ್ನು ಕೂಡ ಕಾದಿತ್ತು. ಅದು ಪಾಕಿಸ್ತಾನದಲ್ಲಿ ಸತ್ತವರಿಗೆ ಸಂತಾಪ ಸೂಚಿಸಿ ನೀಡಿದ ಹೇಳಿಕೆಯನ್ನು ವಾಪಸ್ಸು ಪಡೆದುಕೊಂಡದ್ದು, ಪಾಕ್​​​​ ಪರ ಈ ಹೇಳಿಕೆ ನೀಡಿದಕ್ಕೆ ನಿರಾಶೆಯನ್ನು ನಾವು ವ್ಯಕ್ತಪಡಿಸಿದ್ದೇವು. ಇದೀಗ ಕೊಲಾಂಬಿಯಾ ತನ್ನ ಈ ಹೇಳಿಕೆಯನ್ನು ವಾಪಸ್ಸು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

ಅಲ್ಲಿನ ಮುಖ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಮಹಾತ್ಮ ಗಾಂಧಿಯವರ ಸುಂದರವಾದ ಪ್ರತಿಮೆಯ ಮುಂದೆ ನಿಂತು ಅವರಿಗೆ ಗೌರವ ಸಲ್ಲಿಸಲಾಯಿತು. ಅಲ್ಲಿಂದ ಬೊಗೋಟಾದ ಟಾಡಿಯೊ ಲೊಜಾನೊ ವಿಶ್ವವಿದ್ಯಾಲಯಕ್ಕೆ ನಮ್ಮ ನಿಯೋಗ ಭೇಟಿ ನೀಡಿದೆ. ಅಲ್ಲಿನ ವೇದಿಕೆಯಲ್ಲಿ ನಿಂತು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಸರಣಿ ಮಿಲಿಟರಿ ದಾಳಿಯಾದ ಆಪರೇಷನ್ ಸಿಂಧೂರ್​​ಕ್ಕೆ ಕೊಲಂಬಿಯಾದ ಪ್ರತಿಕ್ರಿಯೆಯ ಬಗ್ಗೆ ತರೂರ್ ನಿರಾಶೆ ವ್ಯಕ್ತಪಡಿಸಿದ್ದರು . ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಲಿಪಶುಗಳಿಗೆ ಬದಲಾಗಿ ಪಾಕಿಸ್ತಾನದ ಸಾವುನೋವುಗಳಿಗೆ ಕೊಲಂಬಿಯಾ ಸಹಾನುಭೂತಿ ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೀರಿನ ವಿಚಾರದಲ್ಲಿ ಪಾಕಿಸ್ತಾನ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ: ಆಸಿಮ್ ಮುನೀರ್

ಭಾರತೀಯ ದಾಳಿಯ ನಂತರ ಪಾಕಿಸ್ತಾನದಲ್ಲಿ ಸಂಭವಿಸಿದ ಜೀವಹಾನಿಗೆ ಕೊಲಂಬಿಯಾ ಸರ್ಕಾರ ತೀವ್ರ ಸಂತಾಪ ವ್ಯಕ್ತಪಡಿಸಿತು.ಆದರೆ ಭಯೋತ್ಪಾದನೆಯಿಂದ ಬಲಿಯಾದ ಜನರ ಬಗ್ಗೆ ಸಹಾನುಭೂತಿ ತೋರಿಸಿಲ್ಲ. ಇದರಿಂದ ನಾವು ಸ್ವಲ್ಪ ನಿರಾಶೆಗೊಂಡಿದ್ದೇವೆ ಹೇಳಿದ್ದಾರೆ. ಭಯೋತ್ಪಾದನೆಯ ಬಗ್ಗೆ ಭಾರತದ ಶೂನ್ಯ ಸಹಿಷ್ಣುತೆಯ ನಿಲುವನ್ನು ತಿಳಿಸುವ ರಾಜತಾಂತ್ರಿಕ ಪ್ರಯತ್ನದ ಭಾಗವಾಗಿ ಬಹುಪಕ್ಷ ನಿಯೋಗದ ನೇತೃತ್ವ ವಹಿಸಿದ್ದಾರೆ. ಮೊದಲು ಅಮೆರಿಕಕ್ಕೆ ಹೋಗಿತ್ತು. ಅಲ್ಲಿಂದ ಪನಾಮ ಮತ್ತು ಗಯಾನಾಗೆ ಭೇಟಿ ನೀಡಿದ ನಂತರ , ತಂಡವು ಗುರುವಾರ ಕೊಲಂಬಿಯಾಕ್ಕೆ ಭೇಟಿ ನೀಡಿದೆ. ಇಲ್ಲಿಂದ ಬ್ರೆಜಿಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಭೇಟಿ ನೀಡಲಿದ್ದಾರೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ​

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ