ತನ್ನ ಪ್ರೀತಿಯನ್ನು ವಿಧವೆ ನಿರಾಕರಿಸಿದಾಗ ರೊಚ್ಚಿಗೆದ್ದವನು ನಡೆರಸ್ತೆಯಲ್ಲೇ ಅಕೆಯನ್ನು ಇರಿದು ಕೊಂದ
ಸಂಜು ಬನ್ಸೋಡೆ, ರೇಣುಕಾ ಹಿಂದೆ ಬಿದ್ದಿದ್ದ ಮತ್ತು ತನ್ನನ್ನು ಪ್ರೀತಿಸುವಂತೆ ಗೋಗರೆಯುತ್ತಿದ್ದ. ಆದರೆ ಅವನ ಇಂಗಿತವನ್ನು ರೇಣುಕಾ ಅಸಡ್ಡೆ ಮಾಡುತ್ತಿದ್ದರು. ರೇಣುಕಾ ಸಹೋದರ ಪೊಲೀಸರಿಗೆ ಹೇಳಿ ಸಂಜುಗೆ ಎಚ್ಚರಿಸಿದ್ದರಂತೆ. ಆದರೆ ನಾಯಿಬಾಲದಂತಿದ್ದ ಅವನು ಪುನಃ ರೇಣುಕಾರನ್ನು ಅಡ್ಡಗಟ್ಟಿ ಪೀಡಿಸುತ್ತಿದ್ದ. ಅವರು ತನ್ನ ಕೈಗೆ ಸಿಗಲಾರರು ಅಂತ ಖಚಿತವಾದಾಗ ಕಳೆದ ಬುಧವಾರ ಇರಿದು ಕೊಂದುಬಿಟ್ಟಿದ್ದಾನೆ. ಪೊಲೀಸರು ಸಂಜುನನ್ನು ವಶಕ್ಕೆ ಪಡೆದಿದ್ದಾರೆ.
ವಿಜಯಪುರ, ಜೂನ್ 17: ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ಹಂತಕರು ಹಾಡು ಹಗಲು ನಡುರಸ್ತೆಯಲ್ಲಿ ಎಲ್ಲರ ಕಣ್ಣೆದುರೇ ಕೊಲೆಗಳನ್ನು ಮಾಡುತ್ತಿದ್ದಾರೆ. ಪೊಲೀಸರ ಭಯ ಇವರಿಗೆ ಕಿಂಚಿತ್ತೂ ಇದ್ದಂತಿಲ್ಲ. ಕಳೆದ ಬುಧವಾರ ಸಂಜು ಬನ್ಸೋಡೆ ಹೆಸರಿನ ವ್ಯಕ್ತಿಯೊಬ್ಬ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ರೇಣುಕಾ ಸಾಯಿಬಣ್ಣ ಕನ್ನೊಳ್ಳಿ (Renuka Saibanna Kannolli) ಹೆಸರಿನ ಮೂರು ಮಕ್ಕಳ ವಿಧವೆಯನ್ನು ಆಕೆ ತನ್ನ ಆಫೀಸಿಗೆ ಹೋಗುವಾಗ ಚಾಕುವಿನಿಂದ ಮನಬಂದಂತೆ ಇರಿದು ಕೊಂದಿದ್ದಾನೆ. ರೇಣುಕಾ ಸಹೋದರ ಹೇಳುವಂತೆ ಅಕೆ ಇಂಡಿ ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಪತಿ ತೀರಿಕೊಂಡ ನಂತರ ರೇಣುಕಾಗೆ ಅನುಕಂಪ ಆಧಾರದಲ್ಲಿ ನೌಕರಿ ಸಿಕ್ಕಿತ್ತಂತೆ.
ಇದನ್ನೂ ಓದಿ: ಮೇಘಾಲಯದಲ್ಲಿ ಕೊಲೆಗೂ ಮೊದಲಿನ ರಾಜ ರಘುವಂಶಿಯ ಕೊನೆಯ ವಿಡಿಯೋ ಬಯಲು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ