AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕೊವಿಡ್ ಲಸಿಕೆ: ಡಿಸಿಎಂ ಡಾ. ಅಶ್ವತ್ಥ್ ನಾರಾಯಣ

ಶಾಲಾ, ಕಾಲೇಜು ಆರಂಭಿಸುವ ಬಗ್ಗೆ ಸಾರ್ವಜನಿಕರು ಗೊಂದಲ ಹೊಂದುವ ಅಗತ್ಯವಿಲ್ಲ. ಲಸಿಕೆ ವಿತರಿಸಿದ ನಂತರವೇ ಹಂತ ಹಂತವಾಗಿ ಶಾಲಾ ಕಾಲೇಜು ಆರಂಭಿಸುವ ಬಗ್ಗೆ ಚರ್ಚೆ ನಡೆಸಲಾಗುವುದು. ಮೊದಲು ಪಿಜಿ, ನಂತರ ಪದವಿ ಕಾಲೇಜುಗಳ ಆರಂಭಿಸಿ, ಬಳಿಕ ಪ್ರೌಢಶಾಲೆಗಳನ್ನು ಆರಂಭ ಮಾಡಲಾಗುವುದು. ಸರ್ಕಾರಕ್ಕೆ ವಿದ್ಯಾರ್ಥಿಗಳ ಕ್ಷೇಮವೆ ಮುಖ್ಯವಾಗಿದ್ದು, ಶಾಲಾ ಕಾಲೇಜು ಆರಂಭಿಸುವ ಆತುರ ಸರ್ಕಾರಕ್ಕೆ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.

ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕೊವಿಡ್ ಲಸಿಕೆ: ಡಿಸಿಎಂ ಡಾ. ಅಶ್ವತ್ಥ್ ನಾರಾಯಣ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Jun 23, 2021 | 3:08 PM

Share

ಬೆಂಗಳೂರು: ಆದ್ಯತೆಯ ಮೇರೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಜುಲೈ ಮೊದಲ ವಾರ ಅಥವಾ 2ನೇ ವಾರದಲ್ಲಿ ಕೊವಿಡ್ ಲಸಿಕೆ ವಿತರಿಸಲಾಗುವುದು ಎಂದು ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಮತ್ತು ರಾಜ್ಯ ಕೊವಿಡ್ ಕಾರ್ಯಪಡೆಯ ಅಧ್ಯಕ್ಷರೂ ಆಗಿರುವ ಡಾ. ಅಶ್ವತ್ಥ್ ನಾರಾಯಣ ತಿಳಿಸಿದರು. ಕಾಲೇಜುಗಳು ಆರಂಭಗೊಂಡ ನಂತರ ಮರಳಿ ಕಾಲೇಜಿಗೆ ಎಂಬ ವಿನೂತನ ಕಾರ್ಯಕ್ರಮ‌ ಹಮ್ಮಿಕೊಳ್ಳುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಸಹ ಅವರು ವಿವರಿಸಿದರು.

ಸದ್ಯ ಆತಂಕಕ್ಕೆ ಕಾರಣವಾಗಿರುವ ಡೆಲ್ಟಾ, ಡೆಲ್ಟಾ ಪ್ಲಸ್ ವೈರಸ್‌ಗೆ ಲಸಿಕೆಯೇ ಸಂಜೀವಿನಿಯಾಗಿದ್ದು, ಕೊರೊನಾ ಕೇಸ್ ಹೆಚ್ಚಾಗುವುದರಿಂದ ವೈರಾಣು ರೂಪಾಂತರವಾಗಲಿದೆ. ಹೀಗಾಗಿ ಕೊವಿಡ್ ಲಸಿಕೆಯೇ ಇದರ ನಿಯಂತ್ರಣಕ್ಕೆ ರಾಮಬಾಣವಾಗಿದೆ. ಹೊಸ ವೈರಸ್ ಬಗ್ಗೆ ಜನ ಭಯಪಡುವ ಅಗತ್ಯತೆ ಇಲ್ಲ. ರಾಜ್ಯ ಸರ್ಕಾರ ಸಮರ್ಥವಾಗಿ ಎಲ್ಲವನ್ನು ನಿಭಾಯಿಸಲಿದೆ. ಜನರು ಕೊವಿಡ್ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಅವರು ಸೂಚಿಸಿದರು.

ಲಸಿಕೆ ವಿತರಿಸಿದ ನಂತರವೇ ಶಾಲಾ ಕಾಲೇಜು ಆರಂಭದ ಬಗ್ಗೆ ಚರ್ಚೆ: ಡಾ.ಸುಧಾಕರ್ ಶಾಲಾ, ಕಾಲೇಜು ಆರಂಭಿಸುವ ಬಗ್ಗೆ ಸಾರ್ವಜನಿಕರು ಗೊಂದಲ ಹೊಂದುವ ಅಗತ್ಯವಿಲ್ಲ. ಲಸಿಕೆ ವಿತರಿಸಿದ ನಂತರವೇ ಹಂತ ಹಂತವಾಗಿ ಶಾಲಾ ಕಾಲೇಜು ಆರಂಭಿಸುವ ಬಗ್ಗೆ ಚರ್ಚೆ ನಡೆಸಲಾಗುವುದು. ಮೊದಲು ಪಿಜಿ, ನಂತರ ಪದವಿ ಕಾಲೇಜುಗಳ ಆರಂಭಿಸಿ, ಬಳಿಕ ಪ್ರೌಢಶಾಲೆಗಳನ್ನು ಆರಂಭ ಮಾಡಲಾಗುವುದು. ಸರ್ಕಾರಕ್ಕೆ ವಿದ್ಯಾರ್ಥಿಗಳ ಕ್ಷೇಮವೆ ಮುಖ್ಯವಾಗಿದ್ದು, ಶಾಲಾ ಕಾಲೇಜು ಆರಂಭಿಸುವ ಆತುರ ಸರ್ಕಾರಕ್ಕೆ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.

ಕೊವಿಡ್‌ನಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗುವ ಭರವಸೆ ಇದೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಶಾಲೆಗಳನ್ನು ಪುನಾರಂಭಿಸುವಂತೆ ಒತ್ತಾಯ; ಶಿಕ್ಷಣ ಸಚಿವರಿಗೆ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ಪತ್ರ

Good News: ರಾಜ್ಯದ 1.55 ಲಕ್ಷ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆಗೆ ನಾಳೆ ಸಿಎಂ ಯಡಿಯೂರಪ್ಪ ಚಾಲನೆ

(Karnataka DCM Dr Ashwathth Narayana says Covid vaccine for college students in the first or second week of July )