ಕನ್ನಡ ಸಿನಿಮಾಗೆ ಬೆಳಗ್ಗೆ 9.30ಕ್ಕೆ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಜೂನ್ 6ರಂದು ಬಿಡುಗಡೆ ಆದ ‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಈ ಸಿನಿಮಾಗೆ ಸೂಕ್ತ ಸಮಯದ ಶೋ ಸಿಗದೇ ಇರುವ ಸಾಧ್ಯತೆ ಇರುತ್ತದೆ. ಆ ಬಗ್ಗೆ ಸಿನಿಮಾದ ನಾಯಕ ಶ್ರೀನಗರ ಕಿಟ್ಟಿ ಮಾತನಾಡಿದ್ದಾರೆ.
ಇತ್ತೀಚೆಗೆ ಬಿಡುಗಡೆ ಆದ ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಮುಂದಿನ ದಿನಗಳಲ್ಲಿ ಈ ಚಿತ್ರಕ್ಕೆ ಥಿಯೇಟರ್ ಕೊರತೆ ಎದುರಾಗುವ ಸಾಧ್ಯತೆ ಇದೆ. ಆ ಬಗ್ಗೆ ಸಿನಿಮಾದ ನಾಯಕ ಶ್ರೀನಗರ ಕಿಟ್ಟಿ (Srinagra Kitty) ಅವರು ಮಾತನಾಡಿದ್ದಾರೆ. ‘ಇಲ್ಲಿಯ ತನಕ ಏನೂ ಸಮಸ್ಯೆ ಇಲ್ಲ. ನಾವು ಕೇಳಿದ ಸಮಯಕ್ಕೆ ಶೋ ಕೊಟ್ಟಿದ್ದಾರೆ. ಆದರೆ ನಾಡಿದ್ದು ಧನುಷ್, ಆಮಿರ್ ಖಾನ್ ಮುಂತಾದ ನಟರ ಸಿನಿಮಾಗಳು ಬಂದಾಗ ನಮ್ಮ ಸಿನಿಮಾಗೆ ಪ್ರೈಂ ಶೋಗಳನ್ನು ಬಿಟ್ಟು ಬೇರೆ ಸಮಯ ಕೊಡುತ್ತಾರೆ. ನಮಗೆ ಮಾರ್ನಿಂಗ್ ಶೋ ಕೊಡುತ್ತಾರೆ. ಬೆಳಗ್ಗೆ 9.30ಕ್ಕೆ ಶೋ ಕೊಟ್ಟರೆ ಜನ ಇನ್ನೂ ಎದ್ದಿರುವುದಿಲ್ಲ. ಆಗ ಯಾರು ಚಿತ್ರಮಂದಿರಕ್ಕೆ ಬರುತ್ತಾರೆ? ಹಾಗಾಗಿ ನಮಗೆ ಮೇಜರ್ ಶೋಗಳನ್ನು ಕೊಡಿ ಎಂಬುದು ನಮ್ಮ ಡಿಮ್ಯಾಂಡ್’ ಎಂದು ಶ್ರೀನಗರ ಕಿಟ್ಟಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.