AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲು ಸಾಲು ಏರ್ ಇಂಡಿಯಾ ವಿಮಾನಗಳ ಸೇವೆ ರದ್ದು, ಮುಖ್ಯ ಇಂಜಿನೀಯರ್​ಗೆ ಡಿಜಿಸಿಎ ಸಮನ್ಸ್

ಸಾಲು ಸಾಲು ಏರ್ ಇಂಡಿಯಾ ವಿಮಾನಗಳ ಸೇವೆ ರದ್ದು, ಮುಖ್ಯ ಇಂಜಿನೀಯರ್​ಗೆ ಡಿಜಿಸಿಎ ಸಮನ್ಸ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 17, 2025 | 8:25 PM

Share

ನಿನ್ನೆ ಏರ್ ಇಂಡಿಯಾ ತನ್ನ ಆರು ವಿಮಾನಗಳ ಶೆಡ್ಯೂಲನ್ನು ಒಂದಿಲ್ಲೊಂದು ಕಾರಣಕ್ಕೆ ಒಂದೋ ರದ್ದುಮಾಡಿದೆ ಇಲ್ಲವೇ ಸೇವೆಯನ್ನು ಸ್ಥಗಿತಗೊಳಿಸಿದೆ. ನಿಮಗೆ ನೆನಪಿರಬಹುದು, ಏರ್ ಇಂಡಿಯಾ ಸಂಸ್ಥೆಯ ಒಡೆತನವನ್ನು ಟಾಟಾ ಗ್ರೂಪ್​ ಆಫ್ ಕಂಪನೀಸ್ ವಹಿಸಿಕೊಳ್ಳುವಾಗ ವಿಮಾನಗಳ ತಾಂತ್ರಿಕ ಕ್ಷಮತೆಯ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಅದರೆ ಟಾಟಾ ಅವುಗಳನ್ನು ನಿರ್ಲಕ್ಷಿಸಿತು ಎಂದು ಹೇಳಲಾಗುತ್ತಿದೆ, ಇದೇ ಹಿನ್ನೆಲೆಯಲ್ಲಿ ವಿಮಾನಗಳ ಸೇವೆ ರದ್ದಾಗುತ್ತಿದೆ.

ಬೆಂಗಳೂರು, ಜೂನ್ 17: ಅಹಮದಾಬಾದ್​ನಲ್ಲಿ ಏರ್ ಇಂಡಿಯ 171 ದುರಂತದ ನಂತರ ಸಂಸ್ಥೆಯ ವಿಮಾನಗಳಿಗೆ ಶನಿಕಾಟ ಶುರುವಾದಂತಿದೆ. ಈಗಾಗಲೇ ವರದಿಯಾಗಿರುವಂತೆ ಸ್ಯಾನ್ ಫ್ರಾನ್ಸಿಸ್ಕೋ-ಮುಂಬೈ ಏರ್ ಇಂಡಿಯಾ ವಿಮಾನವು ಕೊಲ್ಕತ್ತಾಗೆ ಬಂದ ಬಳಿಕ ಅದರ ಒಂದು ಎಂಜಿನ್​ನಲ್ಲಿ ತಾಂತ್ರಿಕ ದೋಷ ಕಂಡಿದೆ, ಹಾಗಾಗಿ ಅದು ಮುಂಬೈಗೆ ಹಾರುವುದನ್ನು ರದ್ದು ಮಾಡಿ ಕೊಲ್ಕತ್ತಾದಲ್ಲೇ ನಿಲ್ಲಿಸಲಾಗಿದೆ. ಇವತ್ತು ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ಹೊರಡಬೇಕಿದ್ದ ಏರ್ ಇಂಡಿಯಾ-133 ವಿಮಾನವನ್ನು ರದ್ದುಗೊಳಿಸಲಾಗಿದೆ. ನಿನ್ನೆಯೂ ಏರ್ ಇಂಡಿಯಾ ಸಂಸ್ಥೆಯು ಸಾಲುಸಾಲು ವಿಮಾನಗಳನ್ನು ರದ್ದು ಮಾಡಿತ್ತು. ಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯ ಎಂಜಿನೀಯರ್​ಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

ಇದನ್ನೂ ಓದಿ:  ಕೇದಾರನಾಥ ಧಾಮಕ್ಕೆ ಹೋಗುವಾಗ ತಾಂತ್ರಿಕ ದೋಷದಿಂದ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ