Dawood Ibrahim Brother: ಮುಂಬೈ‌ನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್‌ ಅರೆಸ್ಟ್​

Iqbal Kaskar arrested: ಭೂಗತ ಪಾತಕಿ ದಾವೂದ್ ಸಹೋದರ ಇಕ್ಬಾಲ್ ಕಸ್ಕರ್‌ನನ್ನು ಬಂಧಿಸಲಾಗಿದೆ. ಬಂಧಿಸಿದ NCB ಅಧಿಕಾರಿಗಳು ಇಕ್ಬಾಲ್ ಕಸ್ಕರ್‌ನನ್ನು ಡ್ರಗ್ಸ್ ಪ್ರಕರಣದಲ್ಲಿ ಇಕ್ಬಾಲ್ ಕಸ್ಕರ್‌ನನ್ನು  ಮಾದಕ ವಸ್ತು ನಿಯಂತ್ರಣ ಬ್ಯೂರೊ (Narcotics control Bureau -NCB) ಅಧಿಕಾರಿಗಳು ಬಂಧಿಸಿದ್ದಾರೆ. 

Dawood Ibrahim Brother: ಮುಂಬೈ‌ನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್‌ ಅರೆಸ್ಟ್​
Dawood Ibrahim Brother: ಮುಂಬೈ‌ನಲ್ಲಿ ಭೂಗತ ಪಾತಕಿ ದಾವೂದ್ ಸಹೋದರ ಇಕ್ಬಾಲ್ ಕಸ್ಕರ್‌ ಅರೆಸ್ಟ್​
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 23, 2021 | 4:23 PM

ಮುಂಬೈ‌: ಭೂಗತ ಪಾತಕಿ ದಾವೂದ್ ಇಬ್ರಾಹಿಂ ತಮ್ಮ ಇಕ್ಬಾಲ್ ಕಸ್ಕರ್‌ನನ್ನು ಬಂಧಿಸಲಾಗಿದೆ. ಬಂಧಿಸಿದ NCB ಅಧಿಕಾರಿಗಳು ಇಕ್ಬಾಲ್ ಕಸ್ಕರ್‌ನನ್ನು ಡ್ರಗ್ಸ್ ಪ್ರಕರಣದಲ್ಲಿ ಇಕ್ಬಾಲ್ ಕಸ್ಕರ್‌ನನ್ನು  ಮಾದಕ ವಸ್ತು ನಿಯಂತ್ರಣ ಬ್ಯೂರೊ (Narcotics control Bureau -NCB) ಅಧಿಕಾರಿಗಳು ಬಂಧಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ನಡೆದಿದ್ದ ಅಂತರರಾಜ್ಯ ಮಾದಕ ವಸ್ತು ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೂದ್ ಇಬ್ರಾಹಿಂ ಸೋದರ ಇಕ್ಬಾಲ್ ಕಸ್ಕರ್‌ನನ್ನು ಬಂಧಿಸಲಾಗಿದೆ. ಜಮ್ಮು ಕಾಶ್ಮೀರದಿಂದ  ಪಂಜಾಬ್​ ಮೂಲಕ  ಮಾದಕ ವಸ್ತು ತಂದು ಮುಂಬೈನಲ್ಲಿ ಮಾರಾಟ ಮಾಡುತ್ತಿದ್ದ  ಎಂದು ತಿಳಿದುಬಂದಿದೆ.

ಥಾಣೆಯಲ್ಲಿ ಗೃಹ ನಿರ್ಮಾಣದಾರರಿಂದ ಹಫ್ತಾ ವಸೂಲಿ ವೇಳೆ 2017ರಲ್ಲಿ ಇಕ್ಬಾಲ್ ಕಸ್ಕರ್‌ನನ್ನು  ಬಂಧಿಸಲಾಗಿತ್ತು. ಅವನ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ (Maharashtra Control of Organised Crime Act -MCOCA) ದಾಖಲಿಸಲಾಗಿತ್ತು.

ಹತ್ಯೆ ಪ್ರಕರಣವೊಂದರಲ್ಲಿ 2003ರಲ್ಲಿ ಅರಬ್​ ಕೊಲ್ಲಿ ರಾಷ್ಟ್ರಗಳಿಂದ ಇಕ್ಬಾಲ್ ಕಸ್ಕರ್‌ನನ್ನು ಗಡಿಪಾರು ಮಾಡಲಾಗಿತ್ತು.  ಆದರೆ 2007ರಲ್ಲಿ ಆ ಪ್ರಕರಣದಲ್ಲಿ ಅವನನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಲಾಗಿತ್ತು.

(Dawood Ibrahim brother Iqbal Kaskar has been detained by Narcotics Control Bureau in Mumbai)

Published On - 4:09 pm, Wed, 23 June 21