AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಲ್ವಾನ್ ಸಂಘರ್ಷದ ನಂತರ ಇನ್ನೂ ಸಿದ್ಧತೆ ಮತ್ತು ತರಬೇತಿ ಅಗತ್ಯವಿದೆ ಎಂದು ಚೀನಾ ಸೇನೆ ಅರಿತುಕೊಂಡಿದೆ: ಜನರಲ್ ಬಿಪಿನ್ ರಾವತ್

General Bipin Rawat: ಈ ಪ್ರದೇಶದ ಚೀನಾದ ಎಲ್ಲಾ ಚಟುವಟಿಕೆಗಳ ಬಗ್ಗೆ ಭಾರತ ನಿಗಾ ಇಡಬೇಕಿದೆ ಮತ್ತು ಈ ಪ್ರದೇಶದಲ್ಲಿ ಹೋರಾಟದಲ್ಲಿ ಭಾರತೀಯ ಸೈನಿಕರು ಬಹಳ ಶಕ್ತರಾಗಿದ್ದಾರೆ ಎಂದು ಜನರಲ್ ರಾವತ್ ಹೇಳಿದರು.

ಗಾಲ್ವಾನ್ ಸಂಘರ್ಷದ ನಂತರ ಇನ್ನೂ ಸಿದ್ಧತೆ ಮತ್ತು ತರಬೇತಿ ಅಗತ್ಯವಿದೆ ಎಂದು ಚೀನಾ ಸೇನೆ ಅರಿತುಕೊಂಡಿದೆ: ಜನರಲ್ ಬಿಪಿನ್ ರಾವತ್
ಬಿಪಿನ್ ರಾವತ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jun 23, 2021 | 2:16 PM

Share

ದೆಹಲಿ: ಪೂರ್ವ ಲಡಾಕ್‌ನಲ್ಲಿ ಕಳೆದ ವರ್ಷ ಗಾಲ್ವಾನ್ ಕಣಿವೆ, ವಾಸ್ತವಿಕ ನಿಯಂತ್ರಣ ರೇಖೆಯ (LAC ) ಸೇರಿದಂತೆ ಇತರ ಪ್ರದೇಶಗಳಲ್ಲಿ ಸಂಘರ್ಷ ನಡೆದ ನಂತರ ತಮ್ಮ ಸೈನ್ಯಕ್ಕೆ ಉತ್ತಮ ತರಬೇತಿ ಮತ್ತು ಸಿದ್ಧತೆ ಬೇಕು ಎಂದು ಚೀನಾ ಅರಿತುಕೊಂಡಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಬುಧವಾರ ಹೇಳಿದ್ದಾರೆ. ಎಎನ್‌ಐ ಜೊತೆ ಮಾತನಾಡಿದ ಜನರಲ್ ರಾವತ್, ಚೀನಾದ ಸೈನಿಕರು ಮುಖ್ಯವಾಗಿ ಅಲ್ಪಾವಧಿಗೆ ಸೇರ್ಪಡೆಗೊಂಡಿದ್ದಾರೆ ಮತ್ತು ಹಿಮಾಲಯದ ಪರ್ವತ ಭೂಪ್ರದೇಶದಲ್ಲಿ ಹೋರಾಡುವ ಹೆಚ್ಚಿನ ಅನುಭವವನ್ನು ಹೊಂದಿಲ್ಲ ಎಂದು ಹೇಳಿದರು. ಎಲ್ಎಸಿ ಉದ್ದಕ್ಕೂ ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ ಹೊಸ ಚಟುವಟಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾವತ್, ಭಾರತದ ಗಡಿಯಲ್ಲಿ ಚೀನಾದ ನಿಯೋಜನೆಯಲ್ಲಿ ಬದಲಾವಣೆ ಆಗಿದೆ. ಅದರಲ್ಲೂ ವಿಶೇಷವಾಗಿ 2020 ರ ಮೇ ಮತ್ತು ಜೂನ್ ತಿಂಗಳಲ್ಲಿ ಗಾಲ್ವಾನ್ ಮತ್ತು ಇತರ ಪ್ರದೇಶಗಳಲ್ಲಿ ನಡೆದ ಘಟನೆಗಳ ನಂತರ. ಇದಾದ ನಂತರ, ಅವರು ಉತ್ತಮ ತರಬೇತಿ ಮತ್ತು ಉತ್ತಮವಾಗಿ ಸಿದ್ಧರಾಗಿರಬೇಕು ಎಂದು ಅವರು ಅರಿತುಕೊಂಡರು ಎಂದಿದ್ದಾರೆ.

“ಅವರ ಸೈನಿಕರು ಮುಖ್ಯವಾಗಿ ನಾಗರಿಕ ಬೀದಿಯಿಂದ ಬಂದವರು. ಅವರನ್ನು ಅಲ್ಪಾವಧಿಗೆ ಸೇರಿಸಿಕೊಳ್ಳಲಾಗುತ್ತದೆ. ಈ ರೀತಿಯ ಪ್ರದೇಶಗಳಲ್ಲಿ ಹೋರಾಡಲು ಮತ್ತು ಈ ರೀತಿಯ ಭೂಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಅವರಿಗೆ ಹೆಚ್ಚಿನ ಅನುಭವವಿಲ್ಲ” ಎಂದು  ರಾವತ್ ಹೇಳಿದರು.

ಈ ಪ್ರದೇಶದ ಚೀನಾದ ಎಲ್ಲಾ ಚಟುವಟಿಕೆಗಳ ಬಗ್ಗೆ ಭಾರತ ನಿಗಾ ಇಡಬೇಕಿದೆ ಮತ್ತು ಈ ಪ್ರದೇಶದಲ್ಲಿ ಹೋರಾಟದಲ್ಲಿ ಭಾರತೀಯ ಸೈನಿಕರು ಬಹಳ ಶಕ್ತರಾಗಿದ್ದಾರೆ ಎಂದು ಜನರಲ್ ರಾವತ್ ಹೇಳಿದರು. ಟಿಬೆಟ್ ಸ್ವಾಯತ್ತ ಪ್ರದೇಶವು ಕಠಿಣ ದೇಶವಾಗಿದು . ಇದು ಪರ್ವತ ಪ್ರದೇಶವಾಗಿದೆ. ಇದಕ್ಕಾಗಿ ನಿಮಗೆ ವಿಶೇಷ ತರಬೇತಿ ಬೇಕು, ಇದರಲ್ಲಿ ನಮ್ಮ ಸೈನಿಕರು ಬಹಳ ಶಕ್ತರಾಗಿದ್ದಾರೆ ಏಕೆಂದರೆ ನಮಗೆ ಸಾಕಷ್ಟು ಪರ್ವತ ಯುದ್ಧ ತರಬೇತಿ ಇದೆ. ನಾವು ಪರ್ವತಗಳಲ್ಲಿ ಕಾರ್ಯನಿರ್ವಹಿಸುತ್ತೇವೆ ಮತ್ತು ನಮ್ಮ ಅಸ್ತಿತ್ವವನ್ನು ನಿರಂತರವಾಗಿ ಕಾಪಾಡಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

“ಆದರೆ ಚೀನಿಯರಿಗೆ ಅದು ಹಾಗಲ್ಲ. ಅವರು ನಡೆಸುತ್ತಿರುವ ತರಬೇತಿಯ ಒಂದು ಭಾಗ ಇದು. ನಾವು ನಮ್ಮ ಕಾವಲು ಕಾಯಬೇಕು ಮತ್ತು ಚೀನಾದ ಪಡೆಗಳ ಎಲ್ಲಾ ಚಟುವಟಿಕೆಗಳ ಬಗ್ಗೆ ನಿಗಾ ಇಡಬೇಕು. ಹಾಗೆ ಮಾಡುವಾಗ ಎಲ್ಎಸಿಯಲ್ ನಾವು ಅಸ್ತಿತ್ವವನ್ನು ಕಾಪಾಡಿಕೊಳ್ಳಬೇಕು.

ಹೆಚ್ಚಿದ ಪಡೆಗಳ ನಿಯೋಜನೆಯ ದೃಷ್ಟಿಯಿಂದ ಪಾಶ್ಚಿಮಾತ್ಯ ಫ್ರಂಟ್​ಗಿಂತ ಉತ್ತರದ ಫ್ರಂಟ್ ಮಹತ್ವದ್ದಾಗಿದೆಯೇ ಎಂದು ಕೇಳಿದಾಗ, ಎರಡೂ ರಂಗಗಳು ದೇಶಕ್ಕೆ ಆದ್ಯತೆಯಾಗಿ ಉಳಿದಿವೆ ಎಂದು ಹೇಳಿದರು.

“ಉತ್ತರ ಗಡಿಗಳಲ್ಲಿ ನಿಯೋಜಿಸಲಾಗಿರುವ ನಮ್ಮ ಸೈನ್ಯವು ಪಶ್ಚಿಮ ಗಡಿಯಲ್ಲಿ ಕಾರ್ಯನಿರ್ವಹಿಸಲು ಸಮರ್ಥವಾಗಿದೆ ಮತ್ತು ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಹೌದು, ಉತ್ತರ ಗಡಿಯಲ್ಲಿ ಕೆಲವು ಹೆಚ್ಚುವರಿ ಸೈನಿಕರನ್ನು ನಾವು ನಿಯೋಜಿಸಿದ್ದೇವೆ ಏಕೆಂದರೆ ಅಲ್ಲಿ ನಮಗೆ ಬೆದರಿಕೆ ಇರುವ ಕಾರಣ ಸಕ್ರಿಯವಾಗಿರಬೇಕಾಗಿದೆ ಎಂದಿದ್ದಾರೆ ರಾವತ್.

ಇದನ್ನೂ ಓದಿ: World Yoga Day 2021: ಇಂದು ಚೀನಾದಲ್ಲೂ ವಿಶ್ವ ಯೋಗ ದಿನಾಚರಣೆ; ಚೀನಿಯರನ್ನೂ ಸೆಳೆಯುತ್ತಿದೆ ಭಾರತ ಮೂಲದ ಯೋಗ

(After the faceoff with Indian forces in Galwan Valley Chinese Army has realised that it needs better training says General Bipin Rawat)

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ