World Yoga Day 2021: ಇಂದು ಚೀನಾದಲ್ಲೂ ವಿಶ್ವ ಯೋಗ ದಿನಾಚರಣೆ; ಚೀನಿಯರನ್ನೂ ಸೆಳೆಯುತ್ತಿದೆ ಭಾರತ ಮೂಲದ ಯೋಗ

ಮುಂದಿನ ದಿನಗಳಲ್ಲಿ ಚೀನಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯು ಯೋಗ ತರಬೇತಿಗೆ ಸಂಬಂಧಿಸಿ ಕೋರ್ಸ್​ಗಳನ್ನು ಆರಂಭಿಸಲಿದೆ. ಚೀನಾ ಈಗಾಗಲೇ ಕುನ್ಮಿಂಗ್ ಪ್ರಾಂತ್ಯದ ಯುನ್ನಾನ್ ಕುನ್ಮಿಂಗ್  ವಿಶ್ವವಿದ್ಯಾಲಯದಲ್ಲಿ  ಯೋಗ ಕಾಲೇಜನ್ನು ಆರಂಭಿಸಿದೆ. 

World Yoga Day 2021: ಇಂದು ಚೀನಾದಲ್ಲೂ ವಿಶ್ವ ಯೋಗ ದಿನಾಚರಣೆ; ಚೀನಿಯರನ್ನೂ ಸೆಳೆಯುತ್ತಿದೆ ಭಾರತ ಮೂಲದ ಯೋಗ
ಭಾರತೀಯ ರಾಯಭಾರ ಕಚೇರಿಯಲ್ಲಿ ಯೋಗ ತರಬೇತಿ
Follow us
TV9 Web
| Updated By: Skanda

Updated on: Jun 21, 2021 | 8:00 AM

ಇಂದು ವಿಶ್ವ ಯೋಗ ದಿನ. ಈ ದಿನ ಭಾರತಕ್ಕೆ ಅತ್ಯಂತ ಮಹತ್ವದ್ದು, ಏಕೆಂದರೆ ಈ ದಿನಾಚರಣೆ ಆಚರಣೆಯ ಮೂಲ ಭಾರತ. ವಿಶ್ವದಾದ್ಯಂತ ಆಚರಿಸಲ್ಪಡುವ ವಿಶ್ವ ಯೋಗ ದಿನಾಚರಣೆಯನ್ನು ಇತರ ದೇಶಗಳಂತೆ ಚೀನಾದ ಕೆಲವು ಸಂಸ್ಥೆಗಳಲ್ಲಿಯೂ ಆಚರಿಸಲಾಗುತ್ತಿದೆ. ಚೀನಾದಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ಚೀನಾದ 100ಕ್ಕೂ ಹೆಚ್ಚು ಯುವಕ ಯುವತಿಯರು ಯೋಗಾಸನಗಳ ತರಬೇತಿ ಪಡೆದಿದ್ದಾರೆ. ಇವರೆಲ್ಲರೂ ಇಂದು ಯೋಗ ಪ್ರದರ್ಶನ ಮಾಡಲಿದ್ದಾರೆ.

ಮೋಹನ್ ಭಂಡಾರಿ ಅವರು ಸ್ಥಾಪಿಸಿದ ಯೋಗಾ ಯೋಗಿ ಸಂಸ್ಥೆಯು ತರಬೇತಿ ನೀಡಿದ ಚೀನಾದ ಹಲವು ಯೋಗ ಶಿಕ್ಷಕರು ರಾಯಭಾರ ಕಚೇರಿಯ ಆವರಣದಲ್ಲಿ ಇತರರಿಗೆ ಯೋಗ ತರಬೇತಿ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚೀನಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯು ಯೋಗ ತರಬೇತಿಗೆ ಸಂಬಂಧಿಸಿ ಕೋರ್ಸ್​ಗಳನ್ನು ಆರಂಭಿಸಲಿದೆ. ಚೀನಾ ಈಗಾಗಲೇ ಕುನ್ಮಿಂಗ್ ಪ್ರಾಂತ್ಯದ ಯುನ್ನಾನ್ ಕುನ್ಮಿಂಗ್  ವಿಶ್ವವಿದ್ಯಾಲಯದಲ್ಲಿ ಯೋಗ ಕಾಲೇಜನ್ನು ಆರಂಭಿಸಿದೆ.

ಚೀನಾದ ಭಾರತೀಯ ರಾಯಭಾರಿಗಳಾದ ವಿಕ್ರಮ್ ಮಿಸ್ರಿ ಮತ್ತು ಉಪ ರಾಯಭಾರಿ ಡಾ.ಅಕ್ವಿನೊ ವಿಮಲ್ ವಿಶ್ವ ಯೋಗ ದಿನಾಚರಣೆಯನ್ನು ತಮ್ಮ ಕಚೇರಿಯಲ್ಲಿ ನಡೆಸಿಕೊಡಲಿದ್ದಾರೆ. ಚೀನಾದ ಯುವಕರು ಯೋಗ ತರಬೇತಿ ಪಡೆಯುತ್ತಿರುವುದನ್ನು ವೀಕ್ಷಿಸಿದ ರಾಯಭಾರಿ ವಿಕ್ರಮ್ ಮಿಸ್ರಿ, ಬಾಹ್ಯ ಜಗತ್ತಿನ ಒತ್ತಡ ಮತ್ತು ಸಮಸ್ಯೆಗಳಿಂದ ಮಾನಸಿಕವಾಗಿ ಉಂಟಾಗುವ ಕಷ್ಟಗಳನ್ನು ಯೋಗ ನಿವಾರಿಸಲಿದೆ. ನಮ್ಮ ಮನಸ್ಸನ್ನು ನಮಗೆ ಅಗತ್ಯವಿದ್ದಂತೆ ನಿಯಂತ್ರಿಸುವ ಸಾಮರ್ಥ್ಯವನ್ನು ಯೋಗ ನೀಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾನಸಿಕ ಮತ್ತು ದೈಹಿಕ ಸದೃಢತೆಗಳನ್ನು ಪಡೆದುಕೊಳ್ಳಲು ಪ್ರತಿಯೊಬ್ಬರೂ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಸಹ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:  ತೆಲಂಗಾಣದ ಕಾಳೇಶ್ವರಂ ಪ್ರಾಜೆಕ್ಟ್​ ಕುರಿತು ಜೂನ್ 25ಕ್ಕೆ ಡಿಸ್ಕವರಿ ಚಾನೆಲ್ ಸಾಕ್ಷ್ಯಚಿತ್ರ

Covishield: ವಿದೇಶಗಳಿಗೆ ತೆರಳುವವರಿಗೆ 28 ದಿನಕ್ಕೆ 2ನೇ ಡೋಸ್ ಕೊವಿಡ್ ಲಸಿಕೆ; ಜುಲೈ 22ರಿಂದಲೇ ಆರಂಭ

(World Yoga Day 2021 will be celebrated in China today)

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?