AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈವಾಹಿಕ ಅತ್ಯಾಚಾರವು ವಿಚ್ಛೇದನಕ್ಕೆ ಸೂಕ್ತ ಕಾರಣ: ಕೇರಳ ಹೈಕೋರ್ಟ್

"ಪತ್ನಿಯ ದೇಹ ನನಗೆ ಸೇರಿದ್ದು ಎಂದು ಆಕೆಯ ಸಮ್ಮತಿಯಿಲ್ಲದೆಯೂ ಬಳಸಿಕೊಳ್ಳಬಹುದು ಎಂಬ ಪತಿಯ ಮನೋಭಾವವು ವೈವಾಹಿಕ ಅತ್ಯಾಚಾರವಾಗಿದೆ. ಅಂತಹ ನಡವಳಿಕೆಯನ್ನು ಶಿಕ್ಷಿಸಲಾಗದಿದ್ದರೂ, ಅದು ದೈಹಿಕ ಮತ್ತು ಮಾನಸಿಕ ಕ್ರೌರ್ಯದ ಚೌಕಟ್ಟಿನಲ್ಲಿ ಬರುತ್ತದೆ ಎಂದ ಕೇರಳ ಹೈಕೋರ್ಟ್

ವೈವಾಹಿಕ ಅತ್ಯಾಚಾರವು ವಿಚ್ಛೇದನಕ್ಕೆ ಸೂಕ್ತ ಕಾರಣ: ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Aug 06, 2021 | 8:33 PM

Share

ತಿರುವನಂತಪುರಂ: ಕೇರಳ ಹೈಕೋರ್ಟ್ ಶುಕ್ರವಾರ ಭಾರತದಲ್ಲಿ ವೈವಾಹಿಕ ಅತ್ಯಾಚಾರವು ವಿಚ್ಛೇದನಕ್ಕೆ ಸೂಕ್ತವಾದ ಕಾರಣ ಎಂಬ ಒಂದು ಮಹತ್ವದ ತೀರ್ಪು ನೀಡಿದೆ. ಲೈವ್ ಲಾ ವರದಿಯ ಪ್ರಕಾರ, “ಪತ್ನಿಯ ದೇಹ ನನಗೆ ಸೇರಿದ್ದು ಎಂದು ಆಕೆಯ ಸಮ್ಮತಿಯಿಲ್ಲದೆಯೂ ಬಳಸಿಕೊಳ್ಳಬಹುದು ಎಂಬ ಪತಿಯ ಮನೋಭಾವವು ವೈವಾಹಿಕ ಅತ್ಯಾಚಾರವಾಗಿದೆ. ಅಂತಹ ನಡವಳಿಕೆಯನ್ನು ಶಿಕ್ಷಿಸಲಾಗದಿದ್ದರೂ, ಅದು ದೈಹಿಕ ಮತ್ತು ಮಾನಸಿಕ ಕ್ರೌರ್ಯದ ಚೌಕಟ್ಟಿನಲ್ಲಿ ಬರುತ್ತದೆ” ಎಂದು ಕೇರಳ ಹೈಕೋರ್ಟ್ ಹೇಳಿದೆ. “ಭಾರತೀಯ ಕಾನೂನಿನ ಅಡಿಯಲ್ಲಿ ವೈವಾಹಿಕ ಅತ್ಯಾಚಾರವನ್ನು ಗುರುತಿಸದ ಕಾರಣಕ್ಕಾಗಿ, ವಿಚ್ಛೇದನ ನೀಡಲು ಕ್ರೌರ್ಯದ ಒಂದು ರೂಪವೆಂದು ಗುರುತಿಸುವುದನ್ನು ತಡೆಯುವುದಿಲ್ಲ. . ಆದ್ದರಿಂದ,ವಿಚ್ಛೇದನ ಪಡೆಯಲು ವೈವಾಹಿಕ ಅತ್ಯಾಚಾರವು ಉತ್ತಮ ಆಧಾರವಾಗಿದೆ ಎಂದು ನಾವು ಭಾವಿಸುತ್ತೇವೆ ಎಂದು ನ್ಯಾಯಮೂರ್ತಿ ಎ. ಮೊಹಮದ್ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರ ವಿಭಾಗೀಯ ಪೀಠ ಹೇಳಿದೆ. ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಪತಿ ಸಲ್ಲಿಸಿದ ಎರಡು ಮೇಲ್ಮನವಿಗಳನ್ನು ವಜಾಗೊಳಿಸುವಾಗ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.

ಅರ್ಜಿದಾರನು ತನ್ನ ಹೆಂಡತಿಯನ್ನು “ಹಣ ಉಂಟುಮಾಡುವ ಯಂತ್ರ” ಎಂದು ಪರಿಗಣಿಸಿದ್ದನ್ನು ಕೌಟುಂಬಿಕ ನ್ಯಾಯಾಲಯ ಗಮನಿಸಿದೆ.

ವೈದ್ಯ, ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವ ಅರ್ಜಿದಾರ ತನ್ನ ಹೆಂಡತಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವಾಗ ಮತ್ತು ಅವನ ತಾಯಿಯ ಮರಣದ ದಿನ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಗೆ ಒತ್ತಾಯಿಸಿದನು. ಇದಲ್ಲದೆ, ಆತ ತನ್ನ ಮಗಳ ಮುಂದೆ ಅಸ್ವಾಭಾವಿಕ ಲೈಂಗಿ ಕ್ರಿಯೆ ನಡೆಸುವಂತೆ ಮತ್ತು ಲೈಂಗಿಕ ಸಂಭೋಗದಲ್ಲಿ ತೊಡಗುವಂತೆ ಒತ್ತಾಯಿಸಿದನು. ಆಕೆಗೆ ಅಕ್ರಮ ಸಂಬಂಧವಿದೆ ಎಂದು ಆತ ಆರೋಪಿಸಿದನು ಎಂದು ಅರ್ಜಿದಾರನ ವಿರುದ್ಧ ದೂರು ನೀಡಲಾಗಿತ್ತು.

ಪತಿಗೆ ತನ್ನ ಪತ್ನಿಯ ದೇಹವು ತನ್ನ ಆಸ್ತಿ ಎಂಬ ಕಲ್ಪನೆಯಲ್ಲಿದ್ದಾಗ ವೈವಾಹಿಕ ಅತ್ಯಾಚಾರ ಸಂಭವಿಸುತ್ತದೆ. ಆದರೆ ಆಧುನಿಕ ಸಾಮಾಜಿಕ ನ್ಯಾಯಶಾಸ್ತ್ರದಲ್ಲಿ ಮದುವೆಯಲ್ಲಿ ಸಂಗಾತಿಗಳನ್ನು ಸಮಾನ ಪಾಲುದಾರರೆಂದು ಪರಿಗಣಿಸಲಾಗುತ್ತದೆ. ಗಂಡ ಹೆಂಡತಿಯ ಮೇಲೆ ಯಾವುದೇ ಉನ್ನತ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಮದುವೆಯಲ್ಲಿ ಸಂಗಾತಿಯು ತೊಂದರೆ ಅನುಭವಿಸದಿರಲು ಆಯ್ಕೆ ಇದೆ ಎಂದು ನ್ಯಾಯಾಲಯ ಹೇಳಿದೆ, “ನೆಲದ ಕಾನೂನು ಮತ್ತು ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಲಾದ ಸ್ವಾಯತ್ತತೆಗೆ ಇದು ಅಗತ್ಯವಾಗಿದೆ”. ವಿಚ್ಛೇದನವನ್ನು ನಿರಾಕರಿಸುವ ಮೂಲಕ ತನ್ನ ಸಂಗಾತಿಯು ಅವನ/ಅವಳ ಬಯಕೆಯ ವಿರುದ್ಧ ನೋವು ಅನುಭವಿಸುವಂತೆ ಕಾನೂನು ಒತ್ತಾಯಿಸುವುದಿಲ್ಲ.  ವ್ಯಕ್ತಿಯ ಆಯ್ಕೆಯನ್ನು ನಿರ್ಧರಿಸಲು ನ್ಯಾಯಾಲಯವು ಯಾವುದೇ ಅಧಿಕಾರವನ್ನು ಬಳಸಬಾರದು ಎಂದು ಅದು ಹೇಳಿದೆ.

ವಿಚ್ಛೇದನ ಕಾನೂನು ವೈವಾಹಿಕ ಹಾನಿ, ಪರಿಹಾರ ಮತ್ತು ಮಾನವೀಯತೆಯಿಂದ ಮಾನವ ಸಮಸ್ಯೆಗಳನ್ನು ನಿಭಾಯಿಸಲು ಸಜ್ಜಾಗಬೇಕು ಎಂದು ಹೈಕೋರ್ಟ್ ಹೇಳಿದೆ.

ಕನಿಷ್ಠ ಮದುವೆ ಮತ್ತು ವಿಚ್ಛೇದನಕ್ಕಾಗಿ ಎಲ್ಲಾ ಸಮುದಾಯಗಳಿಗೆ ಸಾಮಾನ್ಯ ಕಾನೂನು ಸಂಹಿತೆಯನ್ನು ಹೊಂದಲು ಯಾವುದೇ ತೊಂದರೆ ಇರಬಾರದು. ವ್ಯಕ್ತಿಗಳು ವೈಯಕ್ತಿಕ ಕಾನೂನಿಗೆ ಅನುಸಾರವಾಗಿ ತಮ್ಮ ವಿವಾಹವನ್ನು ಮಾಡಲು ಸ್ವತಂತ್ರರು, ಆದರೆ ಜಾತ್ಯತೀತ ಕಾನೂನಿನ ಅಡಿಯಲ್ಲಿ ವಿವಾಹವನ್ನು ಕಡ್ಡಾಯವಾಗಿ ಮಾಡುವುದರಿಂದ ಅವರನ್ನು ಮುಕ್ತಗೊಳಿಸಲಾಗುವುದಿಲ್ಲ. ಮದುವೆ ಮತ್ತು ವಿಚ್ಛೇದನ ಜಾತ್ಯತೀತ ಕಾನೂನಿನ ಅಡಿಯಲ್ಲಿ ಇರಬೇಕು. ಇದು ಇಂದಿನ ಅಗತ್ಯವಾಗಿದೆ. ನಮ್ಮ ದೇಶದಲ್ಲಿ ವಿವಾಹ ಕಾನೂನನ್ನು ಪರಿಷ್ಕರಿಸುವ ಸಮಯ ಬಂದಿದೆ “ಎಂದು ಕೇರಳ ಹೈಕೋರ್ಟ್ ಗಮನಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳದಿಂದ ನೊಂದು ಆತ್ಮಹತ್ಯೆ: ಕೇರಳದ ವಿಸ್ಮಯಾಳ ಪತಿ ಸರ್ಕಾರಿ ಕೆಲಸದಿಂದ ವಜಾ

ಇದನ್ನೂ ಓದಿ:  ಸಂತ್ರಸ್ತೆಯ ಕಾಲುಗಳನ್ನು ಒಂದಾಗಿಸಿ, ತೊಡೆಗಳ ಸಂಧಿಯಲ್ಲಿ ನಡೆಸುವ ಲೈಂಗಿಕ ಕ್ರಿಯೆಯೂ ಅತ್ಯಾಚಾರ: ಕೇರಳ ಹೈಕೋರ್ಟ್​ ಮಹತ್ವದ ತೀರ್ಪು

(Kerala High Court on Friday held that marital rape is a valid ground for divorce )

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ