ವಿದೇಶಿ ಮಣ್ಣಲ್ಲಿ ನಿಂತು ದೇಶಕ್ಕೆ ಕಪ್ಪು ಮಸಿ ಬಳಿಯುವ ರಾಹುಲ್ ಒಬ್ಬ ಫೇಕ್ ಗಾಂಧಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

Fake Gandhi: ಏನೂ ಅರಿಯದೇ ಇದ್ದಕ್ಕಿದ್ದಂತೆ ಎಲ್ಲದರಲ್ಲೂ ಪರಿಣಿತನಾಗಿರುವಂತೆ ರಾಹುಲ್ ಗಾಂಧಿ ವರ್ತಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟಾಂಗ್ ನೀಡಿದ್ದಾರೆ.

ವಿದೇಶಿ ಮಣ್ಣಲ್ಲಿ ನಿಂತು ದೇಶಕ್ಕೆ ಕಪ್ಪು ಮಸಿ ಬಳಿಯುವ ರಾಹುಲ್ ಒಬ್ಬ ಫೇಕ್ ಗಾಂಧಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ
ವಿದೇಶಿ ಮಣ್ಣಲ್ಲಿ ನಿಂತು ದೇಶಕ್ಕೆ ಕಪ್ಪು ಮಸಿ ಬಳಿಯುವ ರಾಹುಲ್ ಒಬ್ಬ ಫೇಕ್ ಗಾಂಧಿ
Follow us
ಸಾಧು ಶ್ರೀನಾಥ್​
|

Updated on:Jun 01, 2023 | 5:25 PM

ಗಾಂಧಿ ಹೆಸರಿನ ನೆರಳಲ್ಲೇ ರಾಜಕೀಯ ಮಾಡುವ ರಾಹುಲ್, ಒಬ್ಬ ಫೇಕ್ ಗಾಂಧಿ ( Mr. Fake Gandhi) ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ವಾಗ್ದಾಳಿ ನಡೆಸಿದ್ದಾರೆ. ಅಮೆರಿಕಾದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯಲ್ಲಿ (Foreign Trip) ಭಾಷಣ ಮಾಡಿದ್ದ ರಾಹುಲ್ ಗಾಂಧಿ (Rahul Gandhi) ಭಾರತ ದೇಶದ ಒಂದು ವರ್ಗ ತನಗೆ ಎಲ್ಲವೂ ಗೊತ್ತು ಎಂದು ತಿಳಿದಿದೆ, ದೇವರಿಗೂ ಹೇಳಿಕೊಡುವಷ್ಟು ತಮಗೆ ಗೊತ್ತಿದೆ ಎಂದು‌ ಭಾವಿಸಿದೆ. ಭಾರತ ದೇಶದ ಪ್ರಧಾನ ಮಂತ್ರಿಯೂ ಆ ಸಾಲಿಗೆ ಸೇರುತ್ತಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಎದುರಿಗೆ ದೇವರು ಬಂದರೆ ಆಗ ಮೋದಿಯವರು ದೇವರಿಗೇ ಈ ಸೃಷ್ಟಿಯ ಬಗ್ಗೆ ವಿವರಿಸುವಂತಹವರು ಎಂದು ವ್ಯಂಗ್ಯವಾಡಿದ್ದ ರಾಹುಲ್ ಗಾಂಧಿ ಈ ಭಾಷಣದಲ್ಲಿ ಪದೇ ಪದೇ ಭಾರತದ ದೇಶದ ಒಂದು ವರ್ಗ ಎಂದು ಮೂದಲಿಸಿ ಮಾತನಾಡಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು (Pralhad Joshi) ಟ್ಚಿಟ್ಟರ್ ಮೂಲಕ ತಿರುಗೇಟು ನೀಡಿದ್ದಾರೆ.

“ಮಿಸ್ಟರ್ ಫೇಕ್ ಗಾಂಧಿಗೆ ಭಾರತದ ತಿರುಳು, ಅದರ ಸಂಸ್ಕೃತಿ ಗೊತ್ತಿಲ್ಲ, ದೇಶಕ್ಕೆ ಕಳಂಕ ತರಲು ವಿದೇಶಿ ಮಣ್ಣನ್ನು ಬಳಸುವ ರಾಹುಲ್ ಗಾಂಧಿಯಂಥವರಿಂದ ಬೇರೆ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಭಾರತೀಯರು ತಮ್ಮ ಇತಿಹಾಸದ ಬಗ್ಗೆ ಬಹಳ ಹೆಮ್ಮೆಪಡುತ್ತಾರೆ ಮತ್ತು ತಮ್ಮ ಭೌಗೋಳಿಕತೆಯನ್ನು ಚೆನ್ನಾಗಿ ರಕ್ಷಿಸಿಕೊಳ್ಳುತ್ತಾರೆ ಎಂದು ಸಚಿವ ಪ್ರಲ್ಹಾದ್ ಜೋಶಿ ಹೆಮ್ಮೆಪಟ್ಟಿದ್ದಾರೆ.

ಏನೂ ಅರಿಯದೇ ಇದ್ದಕ್ಕಿದ್ದಂತೆ ಎಲ್ಲದರಲ್ಲೂ ಪರಿಣಿತನಾಗಿರುವಂತೆ ರಾಹುಲ್ ಗಾಂಧಿ ವರ್ತಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟಾಂಗ್ ನೀಡಿದ್ದಾರೆ. ರಾಹುಲ್ ಹೇಳಿಕೆ ಹಿನ್ನೆಲೆಯಲ್ಲಿ ಪ್ರಲ್ಹಾದ ಜೋಶಿಯವರು ತಿರುಗೇಟು ನೀಡಿರುವ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾಜ್ಯ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​​ ಮಾಡಿ

Published On - 5:22 pm, Thu, 1 June 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್