ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ, ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi)ಅವರಿಗೆ ಮಹಿಳೆಯೊಬ್ಬರು ಅವರ ತಾಯಿ ಸೋನಿಯಾ ಗಾಂಧಿ ಅವರು ಭಾವಚಿತ್ರವನ್ನು ರಾಹುಲ್ ಗಾಂಧಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ರಾಹುಲ್ ಗಾಂಧಿ ಅವರು 10 ದಿನಗಳ ಅಮೆರಿಕ ಪ್ರವಾಸದಲ್ಲಿದ್ದು, ತಮ್ಮ ಪ್ರವಾಸದ ವೇಳೆ ಪ್ರತಿಭಾವಂತ ಕಲಾವಿದರು ಸಾಕಷ್ಟು ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಮಾಧ್ಯಮ ಮತ್ತು ಸಂವಹನ ವೃತ್ತಿಪರ ಮತ್ತು ಕಲಾವಿದೆಯಾಗಿರುವ ಸರಿತಾ ಪಾಂಡೆ ಅವರು ಟ್ವಿಟರ್‌ನಲ್ಲಿ ರಾಹುಲ್ ಗಾಂಧಿ ಅವರ ತಾಯಿ ಮತ್ತು ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಇದ್ದಿಲು ಮತ್ತು ಜಲವರ್ಣ ವರ್ಣಚಿತ್ರವನ್ನು ಕಾಂಗ್ರೆಸ್ ನಾಯಕನಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹಂಚಿಕೊಂಡಿದ್ದಾರೆ. ಕಳೆದ ವಾರ ವಾಷಿಂಗ್ಟನ್, ಡಿಸಿಗೆ ಭೇಟಿ ನೀಡಿದಾಗ ಸೋನಿಯಾ ಗಾಂಧಿ ಅವರ ಸೂಪರ್-ಕ್ವಿಕ್ ಚಾರ್ಕೋಲ್, ಜಲವರ್ಣ ವರ್ಣಚಿತ್ರವನ್ನು ರಾಹುಲ್ ಗಾಂಧಿ ಅವರಿಗೆ ಉಡುಗೊರೆಯಾಗಿ ನೀಡಿದ್ದೇನೆ. ನಾನು ಅದನ್ನು ಅವರಿಗೆ ಹಸ್ತಾಂತರಿಸಿದಾಗ, ಇದನ್ನು ನಿಮ್ಮ ತಾಯಿ ಅವರಿಗೆ ನೀಡಿ ಎಂದು ಹೇಳಿದ್ದಾರೆ. ಇದನ್ನು ನನ್ನ ತಾಯಿ ಅವರಿಗೆ ನೀಡುತ್ತೇನೆ ಎಂದು ರಾಹುಲ್ ಗಾಂಧಿ ಅವರು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.
ಸರಿತಾ ಪಾಂಡೆ ಅವರು ಹಂಚಿಕೊಂಡ ಈ ಫೋಸ್ಟ್ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಈ ಫೋಸ್ಟ್ 415,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 5,200 ಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣ ಬಳಕೆದಾರರೂ ಸರಿತಾ ಪಾಂಡೆ ಅವರು ಚಿತ್ರಕಲೆ ಕೌಶಲ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ ಸುಂದರವಾದ ಸಂದೇಶದೊಂದಿಗೆ ಸುಂದರವಾದ ಎಂದು ಬರೆದಿದ್ದಾರೆ. “ತುಂಬಾ ಚೆನ್ನಾಗಿದೆ, ಇದ್ದಿಲು ಮತ್ತು ಜಲವರ್ಣ ಮಾಡುವುದು ತುಂಬಾ ಕಷ್ಟದ ಕೆಲಸ ಎಂದು ಮತ್ತೊಬ್ಬ ಬಳಕೆದಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Gifted @RahulGandhi a super-quick charcoal + watercolor painting of Sonia Gandhi Ji when he was visiting Washington, DC, last week. As I handed it to him, I said, “From one mother to another,” and he said he will pass it to her. I hope he does. ❤️#ArtistOnTwitter pic.twitter.com/mkVXQKSuKa
— Sarita Pandey (@saritapandey) June 9, 2023
ಇದನ್ನೂ ಓದಿ: ಗುರುನಾನಕ್ ಥಾಯ್ಲೆಂಡ್‌ಗೆ ಹೋಗಿದ್ದರು ಎಂದ ರಾಹುಲ್; ಇದೆಲ್ಲ ಎಲ್ಲಿ ಓದಿದ್ದು? ಎಂದು ಕೇಳಿದ ಬಿಜೆಪಿ
ರಾಹುಲ್ ಗಾಂಧಿಯವರ ಅಮೇರಿಕಾ ಭೇಟಿಯು ಬಗ್ಗೆ ಮಿಶ್ರ ಪ್ರತಿಕ್ರಿಯೆ ಬಂದಿದ್ದು, ಅವರ ಮೂರು ಯುಎಸ್ಯ ಮೂರು ಪ್ರವಾಸ ನಗರಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಟೀಕೆಯನ್ನು ಮಾಡಿದ್ದಾರೆ. ಮೋದಿ ಸರ್ಕಾರವು ತನ್ನ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಲು ತನ್ನೆಲ್ಲ ಶಕ್ತಿಯನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ರಾಷ್ಟ್ರದಾದ್ಯಂತ 4,000 ಕಿ.ಮೀ ಉದ್ದದ “ಏಕತಾ ಮೆರವಣಿಗೆ” ರಾಹುಲ್ ಗಾಂಧಿಯವರು ನಡೆಸಿದ್ದರು. ಬಿಜೆಪಿ ಸರ್ಕಾರ ಭಾರತದ ಜನರಿಗೆ ಬೆದರಿಕೆ ಹಾಕಲು ಕೇಂದ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
Published On - 11:41 am, Sat, 10 June 23