Rajasthan: ಗುರುದ್ವಾರದ ಬಗ್ಗೆ ವಿವಾದಾತ್ಮಕ ಹೇಳಿಕೆ, ಬಿಜೆಪಿ ನಾಯಕ ಸಂದೀಪ್ ಪಕ್ಷದಿಂದ ಉಚ್ಚಾಟನೆ

ಗುರುದ್ವಾರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಜಸ್ಥಾನ ಬಿಜೆಪಿ ನಾಯಕ ಸಂದೀಪ್ ದಾಯ್ಮಾ ಅವರನ್ನು ಪಕ್ಷವು ಉಚ್ಚಾಟಿಸಿದೆ. ಬಿಜೆಪಿ ನಾಯಕ ಸಂದೀಪ್ದಾಯ್ಮಾ ಅಲ್ವಾರ್​ನಲ್ಲಿ ನಡೆದ ಚುನಾವಣೆಗೆ ಸಂಬಂಧಿಸಿದ ಸಭೆಯಲ್ಲಿ ಗುರುದ್ವಾರಗಳನ್ನು ಕ್ಯಾನ್ಸರ್​ ಎಂದು ಕರೆದಿದ್ದಾರೆ. ಈ ಹೇಳಿಕೆ ವಿರುದ್ಧ ಸಿಖ್ ಸಮುದಾಯದ ಜನರು ಪ್ರತಿಭಟನೆ ನಡೆಸಿದರು. ಪಂಜಾಬ್ ಬಿಜೆಪಿ ನಾಯಕರು ಕೂಡ ಪ್ರತಿಭಟನೆ ನಡೆಸಿದರು, ಪಕ್ಷದ ಹೈಕಮಾಂಡ್‌ನಿಂದ ಕ್ರಮಕ್ಕೆ ಒತ್ತಾಯಿಸಿದರು.

Rajasthan: ಗುರುದ್ವಾರದ ಬಗ್ಗೆ ವಿವಾದಾತ್ಮಕ ಹೇಳಿಕೆ, ಬಿಜೆಪಿ ನಾಯಕ ಸಂದೀಪ್ ಪಕ್ಷದಿಂದ ಉಚ್ಚಾಟನೆ
ಸಂದೀಪ್
Image Credit source: NDTV

Updated on: Nov 06, 2023 | 10:21 AM

ಗುರುದ್ವಾರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಜಸ್ಥಾನ ಬಿಜೆಪಿ ನಾಯಕ ಸಂದೀಪ್ ದಾಯ್ಮಾ ಅವರನ್ನು ಪಕ್ಷವು ಉಚ್ಚಾಟಿಸಿದೆ.
ಬಿಜೆಪಿ ನಾಯಕ ಸಂದೀಪ್ದಾಯ್ಮಾ ಅಲ್ವಾರ್​ನಲ್ಲಿ ನಡೆದ ಚುನಾವಣೆಗೆ ಸಂಬಂಧಿಸಿದ ಸಭೆಯಲ್ಲಿ ಗುರುದ್ವಾರಗಳನ್ನು ಕ್ಯಾನ್ಸರ್​ ಎಂದು ಕರೆದಿದ್ದಾರೆ. ಈ ಹೇಳಿಕೆ ವಿರುದ್ಧ ಸಿಖ್ ಸಮುದಾಯದ ಜನರು ಪ್ರತಿಭಟನೆ ನಡೆಸಿದರು. ಪಂಜಾಬ್ ಬಿಜೆಪಿ ನಾಯಕರು ಕೂಡ ಪ್ರತಿಭಟನೆ ನಡೆಸಿದರು, ಪಕ್ಷದ ಹೈಕಮಾಂಡ್‌ನಿಂದ ಕ್ರಮಕ್ಕೆ ಒತ್ತಾಯಿಸಿದರು.

ಬಿಜೆಪಿ ನಾಯಕರು, ಬಿಜೆಪಿ ಯಾವಾಗಲೂ ಸಿಖ್ ಸಮುದಾಯದೊಂದಿಗೆ ನಿಂತಿದೆ ಮತ್ತು ಯಾವಾಗಲೂ ಅದರೊಂದಿಗೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.

ಶಿರೋಮಣಿ ಗುರುದ್ವಾರ ವ್ಯವಸ್ಥಾಪಕರ ಕಾರ್ಯದರ್ಶಿ ಗುರುಚರಣ್ ಸಿಂಗ್ ಗ್ರೆವಾಲ್ ಕೂಡ ಬಿಜೆಪಿ ನಾಯಕ ಸಂದೀಪ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.ಅವರು ಸನಾತನ ಧರ್ಮಕ್ಕಾಗಿ ಸಿಖ್ಖರ ತ್ಯಾಗವನ್ನು ನೆನಪಿಸಿದರು. ಅಕಾಲಿದಳದ ಅಧ್ಯಕ್ಷ ಸುಖಬೀರ್ ಬಾದಲ್ ಕೂಡ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು.

ಗುರುದ್ವಾರಗಳ ಬಗ್ಗೆ ಈ ಮಾತುಗಳು ನನ್ನ ಬಾಯಿಂದ ಹೇಗೆ ಬಂದವೋ ಗೊತ್ತಿಲ್ಲ, ನಾನು ಮಸೀದಿ ಮತ್ತು ಮದರಸಾಗಳ ಬಗ್ಗೆ ಮಾತನಾಡುತ್ತಿದ್ದೆ. ಸನಾತನ ಧರ್ಮಕ್ಕಾಗಿ ತ್ಯಾಗ ಮಾಡಿದ ಸಿಖ್ ಸಮುದಾಯದ ಜನರ ಬಗ್ಗೆ ನಾನು ಈ ರೀತಿ ಯೋಚಿಸಲು ಸಾಧ್ಯವಿಲ್ಲ, ತಪ್ಪಿಗೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಸಂದೀಪ್ ಹೇಳಿದ್ದಾರೆ.

ಮತ್ತಷ್ಟು ಓದಿ: ರಾಜಸ್ಥಾನ ಚುನಾವಣೆ: ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದ ಬಿಜೆಪಿ

ಕಳೆದ ಬುಧವಾರ ಅಲ್ವಾರ್‌ನ ತಿಜಾರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಾಬಾ ಬಾಲಕನಾಥ್ ಅವರ ನಾಮಪತ್ರ ಸಲ್ಲಿಕೆಯಾಗಿತ್ತು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಬಿಜೆಪಿ ನಾಯಕರು ಇದರಲ್ಲಿ ಭಾಗವಹಿಸಿದ್ದರು. ಆಗ ಸಂದೀಪ್ ಭಾಷಣ ಮಾಡುವಾಗ ಗುರುದ್ವಾರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ