ರಾಜಸ್ಥಾನ ಚುನಾವಣೆ: ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದ ಬಿಜೆಪಿ
ರಾಜಸ್ಥಾನದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ನವೆಂಬರ್ 25ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 6ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಪಕ್ಷವು ಈ ಬಾರಿ ಗಿರರಾಜ್ಸಿಂಗ್ ಮಾಲಿಂಗ, ಬಾರ್ಮರ್ನಿಂದ ದೀಪಕ್ ಕಡ್ವರ್ಸಾ ಮತ್ತು ಪಚ್ಚಾದ್ರದಿಂದ ಅರುಣ್ ಅಮರ್ರಾಮ್ ಚೌಧರಿಯವರನ್ನು ಕಣಕ್ಕಿಳಿಸಿದೆ.
ರಾಜಸ್ಥಾನ(Rajasthan)ದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ(Assembly Election)ಗೆ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ನವೆಂಬರ್ 25ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 6ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಪಕ್ಷವು ಈ ಬಾರಿ ಗಿರರಾಜ್ಸಿಂಗ್ ಮಾಲಿಂಗ, ಬಾರ್ಮರ್ನಿಂದ ದೀಪಕ್ ಕಡ್ವಸ್ರಾ ಮತ್ತು ಪಚ್ಚಾದ್ರದಿಂದ ಅರುಣ್ ಅಮರ್ರಾಮ್ ಚೌಧರಿಯವರನ್ನು ಕಣಕ್ಕಿಳಿಸಿದೆ.
ಇದಕ್ಕೂ ಮುನ್ನ ಭಾನುವಾರ ಬಿಜೆಪಿಯು 15 ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಪಟ್ಟಿಯ ಪ್ರಕಾರ ಅಮಿತ್ ಚೌಧರಿ ಅವರನ್ನು ಹನುಮಾನ್‌ಗಢದಿಂದ ಕಣಕ್ಕಿಳಿಸಿದೆ. ಅಂಶುಮನ್ ಸಿಂಗ್ ಭಾಟಿ ಅವರಿಗೆ ಕೊಲಾಯತ್ನಿಂದ ಟಿಕೆಕ್ ನೀಡಲಾಗಿದೆ.
ಬಿಜೆಪಿ ಈಗ ಎಲ್ಲಾ 200 ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ನವೆಂಬರ್ 25 ರಂದು ರಾಜಸ್ಥಾನದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಪಟ್ಟಿಯಲ್ಲಿ ಕೆಲವು ಹೊಸ ಮುಖಗಳನ್ನು ಸೇರಿಸಲಾಗಿದೆ. ನಾಮಪತ್ರ ಸಲ್ಲಿಸಲು ನವೆಂಬರ್ 6 ಕೊನೆಯ ದಿನವಾಗಿದೆ. ಎಲ್ಲಾ 200 ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್ 25 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.
ನವೆಂಬರ್ 2 ರಂದು, ಮೂರನೇ ಪಟ್ಟಿಯಲ್ಲಿ, ಪಕ್ಷವು ಮಾಜಿ ಸಚಿವ ದೇವಿ ಸಿಂಗ್ ಭಾಟಿ ಅವರ ಸೊಸೆ ಪೂನಂ ಕನ್ವರ್ ಭಾಟಿ ಮತ್ತು ಬರನ್-ಅತ್ರು ಕ್ಷೇತ್ರದಿಂದ ಸಾರಿಕಾ ಚೌಧರಿ ಹೆಸರನ್ನು ಪ್ರಕಟಿಸಿತ್ತು. ಆದರೆ, ಭಾನುವಾರ ಬಿಡುಗಡೆಯಾದ ಇತ್ತೀಚಿನ ಪಟ್ಟಿಯಲ್ಲಿ ಪೂನಂ ಕನ್ವರ್ ಭಾಟಿ ಅವರ ಪುತ್ರ ಅಂಶುಮಾನ್ ಸಿಂಗ್ ಭಾಟಿ ಅವರಿಗೆ ಬಿಕಾನೇರ್‌ನ ಕೊಲಾಯತ್ ಸ್ಥಾನಕ್ಕೆ ಟಿಕೆಟ್ ನೀಡಲಾಗಿದೆ. ಬರನ್-ಅತ್ರು ಕ್ಷೇತ್ರದಲ್ಲಿ ಸಾರಿಕಾ ಚೌಧರಿ ಬದಲಿಗೆ ರಾಧೇಶ್ಯಾಮ್ ಬೈರ್ವಾ ಅವರಿಗೆ ಟಿಕೆಟ್ ನೀಡಲಾಗಿದೆ.
ಮತ್ತಷ್ಟು ಓದಿ: ರಾಜಸ್ಥಾನ ವಿಧಾನಸಭಾ ಚುನಾವಣೆ ದಿನಾಂಕ ಬದಲಾವಣೆ
ಹನುಮಾನ್‌ಗಢದಿಂದ ಅಮಿತ್ ಚೌಧರಿ, ಕಿಶನ್‌ಪೋಲ್‌ನಿಂದ ಚಂದ್ರಮೋಹನ್ ಬಟ್ವಾಡ, ಭರತ್‌ಪುರದಿಂದ ವಿಜಯ್ ಬನ್ಸಾಲ್, ಸರ್ದರ್ಶಹರ್‌ನಿಂದ ಮಾಜಿ ಶಾಸಕ ರಾಜ್‌ಕುಮಾರ್ ರಿನ್ವಾ, ಕೋಟಾ ಉತ್ತರದಿಂದ ಪ್ರಹ್ಲಾದ್ ಗುಂಜಾಲ್ ಮತ್ತು ಶೇರ್‌ಗಢದಿಂದ ಬಾಬು ಸಿಂಗ್ ರಾಥೋಡ್ ಕಣಕ್ಕಿಳಿದಿದ್ದಾರೆ. ಶಹಪುರ, ರಾಜಖೇಡಾ, ಮಸುದಾ, ಪಿಪಾಲ್ಡಾ ಮತ್ತು ಬರನ್-ಅಟ್ರು ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಘೋಷಿಸಲಾಯಿತು. ಜೈಪುರದ ಸಿವಿಲ್ ಲೈನ್ಸ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ವಿರುದ್ಧ ಪತ್ರಕರ್ತ ಗೋಪಾಲ್ ಶರ್ಮಾ ಕಣಕ್ಕಿಳಿದಿದ್ದಾರೆ.
ಕೋಟಾ ಉತ್ತರ ಕ್ಷೇತ್ರದಿಂದ ಮಾಜಿ ಶಾಸಕ ಪ್ರಹ್ಲಾದ್ ಗುಂಜಾಲ್ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಲಾಗಿದ್ದು, ಅವರು ಕಾಂಗ್ರೆಸ್ ಅಭ್ಯರ್ಥಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲ್ ಅವರನ್ನು ಎದುರಿಸಲಿದ್ದಾರೆ. ಗುಂಜಾಲ್ ಅವರು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರಿಗೆ ಆಪ್ತರು. ಭಾನುವಾರ ರಾತ್ರಿ ಬಿಡುಗಡೆಯಾದ ಕೊನೆಯ ಪಟ್ಟಿಯಲ್ಲಿ ಪಕ್ಷವು ಉಳಿದ ಮೂರು ಸ್ಥಾನಗಳಾದ ಬಾರ್ಮರ್, ಪಚ್ಪದ್ರ ಮತ್ತು ಬಾರಿಗೆ ಅಭ್ಯರ್ಥಿಗಳನ್ನು ಘೋಷಿಸಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:09 am, Mon, 6 November 23