Yogi Adityanath: ಯುಪಿ ಚುನಾವಣೆಯಲ್ಲಿ ರಾಮಭಕ್ತರು ಗೆಲ್ಲಬೇಕು, ರಾಮ ಭಕ್ತರ ಮೇಲೆ ಗುಂಡು ಹಾರಿಸಿದವರು ಸೋಲಬೇಕು: ಯೋಗಿ ಆದಿತ್ಯನಾಥ್

|

Updated on: May 09, 2023 | 12:33 PM

ಉತ್ತರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಬಿಜೆಪಿಗೆ ಮತಯಾಚನೆ ಸಮಯದಲ್ಲಿ ಸಭೆಯನ್ನದ್ದೇಶಿ ಮಾತನಾಡಿದ್ದಾರೆ.

Yogi Adityanath: ಯುಪಿ ಚುನಾವಣೆಯಲ್ಲಿ ರಾಮಭಕ್ತರು ಗೆಲ್ಲಬೇಕು, ರಾಮ ಭಕ್ತರ ಮೇಲೆ ಗುಂಡು ಹಾರಿಸಿದವರು ಸೋಲಬೇಕು: ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್
Follow us on

ಅಯೋಧ್ಯೆ: ಉತ್ತರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಬಿಜೆಪಿಗೆ ಮತಯಾಚನೆ ಸಮಯದಲ್ಲಿ ಸಭೆಯನ್ನದ್ದೇಶಿ ಮಾತನಾಡಿದ್ದಾರೆ. ಬಿಜೆಪಿ ಅಯೋಧ್ಯೆಯನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯಲಿದೆ ಎಂದು ಹೇಳಿದ್ದಾರೆ. ರಾಮಭಕ್ತರೊಬ್ಬರು ಮುನ್ಸಿಪಲ್ ಚುನಾವಣೆಯಲ್ಲಿ ಗೆದ್ದರೆ, ಅದು ಸಕಾರಾತ್ಮಕ ಪ್ರಭಾವ ಬೀರುತ್ತದೆ. ಆದರೆ, ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಗೆದ್ದರೆ, ಅದು ತುಂಬಾ ನಕಾರಾತ್ಮಕ ಸಂದೇಶವನ್ನು ನೀಡುತ್ತದೆ ಎಂದು ಯೋಗಿ ಆದಿತ್ಯನಾಥ್ ಮತದಾರರಿಗೆ ಜವಾಬ್ದಾರಿಯುತವಾಗಿ ಮತ ಚಲಾಯಿಸುವಂತೆ ಸಲಹೆ ನೀಡಿದರು.

ರಾಜ್ಯದ 760 ಸ್ಥಳೀಯ ಸಂಸ್ಥೆಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ನಗರ ಸ್ಥಳೀಯ ಸಂಸ್ಥೆಗಳ ಎರಡನೇ ಹಂತದ ಚುನಾವಣೆಗೆ ಮೇ 11 ರಂದು ಮತದಾನ ನಡೆಯಲಿದೆ. ಮೇ 13 ರಂದು ಮತ ಎಣಿಕೆ ನಡೆಯಲಿದೆ.

ಮಣಿರಾಮದಾಸ್ ಕಂಟೋನ್ಮೆಂಟ್‌ನಲ್ಲಿ ಸೋಮವಾರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮೇಯರ್ ಅಭ್ಯರ್ಥಿ ಗಿರೀಶ್ ಪತಿ ತ್ರಿಪಾಠಿ ಅವರ ಪರವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ಅಯೋಧ್ಯೆ ನಮ್ಮದು, ಮತ್ತು ಅದರ ಬಗ್ಗೆ ನಮಗೆ ಸಾಮೂಹಿಕ ಜವಾಬ್ದಾರಿಯೂ ಇದೆ, ನಾವು ಅಯೋಧ್ಯೆಯನ್ನು ಎತ್ತರಕ್ಕೆ ಕೊಂಡೊಯ್ಯುತ್ತೇವೆ. ಅಯೋಧ್ಯೆಯು ರಾಷ್ಟ್ರ ಮತ್ತು ಪ್ರಪಂಚದ ಗಮನಸೆಳೆದಿರುವುದರಿಂದ ಸಮಗ್ರ ಅಭಿವೃದ್ಧಿಗಾಗಿ ಬಲವಾದ ಮಂಡಳಿಯನ್ನು ರಚಿಸಬೇಕು.

ಇದನ್ನೂ ಓದಿ;Yogi Adityanath: ಯುಪಿ ಸಿಎಂ ಯೋಗಿ ಆದಿತ್ಯನಾಥ್​ಗೆ ಜೀವ ಬೆದರಿಕೆ, ಪ್ರಕರಣ ದಾಖಲು

ಬಲಿಷ್ಠ ಮಂಡಳಿ ರಚನೆಯಾದಾಗ ಅಭಿವೃದ್ಧಿ ಕಾರ್ಯಗಳು ಶೀಘ್ರವಾಗಿ ನಡೆಯಲಿವೆ ಎಂದು ಮುಖ್ಯಮಂತ್ರಿ ಹೇಳಿದರು. ಇಂದು ಪ್ರಪಂಚದಾದ್ಯಂತ ಭಾರತವನ್ನು ವಿಭಿನ್ನವಾಗಿ ನೋಡಲಾಗುತ್ತಿದೆ. ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಜಗತ್ತು ಈಗ ಪ್ರಧಾನಿ ಮೋದಿಯತ್ತ ನೋಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬದಲಾಗುತ್ತಿರುವ ಭಾರತದೊಂದಿಗೆ ನಮ್ಮನ್ನು ನಾವು ಬೆಸೆಯಬೇಕಾಗಿದೆ.

ಆರು ವರ್ಷಗಳಲ್ಲಿ ಯುಪಿ ತನ್ನ ಗ್ರಹಿಕೆಯನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು. ವಿರೋಧ ಪಕ್ಷಗಳು ಯುಪಿ ಸಂತರ ಬಗ್ಗೆ ಸಕಾರಾತ್ಮಕ ಅನಿಸಿಕೆ ಹೊಂದಿರಲಿಲ್ಲ, ಆದರೆ ಇಂದಿನ ಜಗತ್ತಿನಲ್ಲಿ, ಯುಪಿ ಎಲ್ಲೆಡೆ ಗೌರವಿಸಲ್ಪಟ್ಟಿದೆ ಮತ್ತು ಸಂತರಿಗೆ ಗೌರವ ಸಿಗುತ್ತಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ