ಅತ್ಯಾಚಾರ ಪ್ರಕರಣ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಿಂಗ್​​ಗೆ 21 ದಿನಗಳ ಕಾಲ ಪೆರೋಲ್

ಹರ್ಯಾಣದ ಸುನಾರಿಯಾ ಜೈಲಿನಲ್ಲಿರುವ ರಾಮ್ ರಹೀಮ್ ಪೆರೋಲ್ ವೇಳೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿರುವ ಆಶ್ರಮದಲ್ಲಿ ತಂಗಲಿದ್ದಾರೆ. ಜನವರಿಯಲ್ಲಿ ರಾಮ್ ರಹೀಮ್‌ಗೆ 40 ದಿನಗಳ ಪೆರೋಲ್ ನೀಡಿದ ವಿವಾದದ ನಂತರ, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸಿ ಪೆರೋಲ್ ಪಡೆಯುವುದು ಡೇರಾ ಸಚ್ಚಾ ಸೌದಾ ಮುಖ್ಯಸ್ಥರ ಹಕ್ಕು ಎಂದು ಹೇಳಿದ್ದರು.

ಅತ್ಯಾಚಾರ ಪ್ರಕರಣ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಿಂಗ್​​ಗೆ 21 ದಿನಗಳ ಕಾಲ ಪೆರೋಲ್
ಗುರ್ಮೀತ್ ರಾಮ್ ರಹೀಮ್ ಸಿಂಗ್
ರಶ್ಮಿ ಕಲ್ಲಕಟ್ಟ

Updated on: Nov 20, 2023 | 7:20 PM

ದೆಹಲಿ ನವೆಂಬರ್ 20: ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್​​ಗೆ (Gurmeet Ram Rahim Singh)21 ದಿನಗಳವರೆಗೆ ಪೆರೋಲ್ ಅನುಮತಿಸಲಾಗಿದೆ. ಇದಕ್ಕೂ ಮುನ್ನ ಜನವರಿಯಲ್ಲಿ ಡೇರಾ ಮುಖ್ಯಸ್ಥ ರಾಮ್ ರಹೀಮ್‌ಗೆ 40 ದಿನಗಳ ಪೆರೋಲ್ ನೀಡಲಾಗಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿಯೂ ಅವರಿಗೆ 40 ದಿನಗಳ ಪೆರೋಲ್ ನೀಡಲಾಗಿತ್ತು.

ಪೆರೋಲ್ ಎಂದರೆ ತಾತ್ಕಾಲಿಕವಾಗಿ ವಿಶೇಷ ಉದ್ದೇಶಕ್ಕಾಗಿ ಅಥವಾ ಶಿಕ್ಷೆಯ ಅವಧಿ ಮುಗಿಯುವ ಮೊದಲು ಸಂಪೂರ್ಣವಾಗಿ ಬಿಡುಗಡೆ ಮಾಡುವುದು. ಉತ್ತಮ ನಡವಳಿಕೆಯ ಕೈದಿಗಳನ್ನುಈ ರೀತಿ ಬಿಡುಗಡೆ ಮಾಡಲಾಗುತ್ತದ. ಫರ್ಲೋ ಎಂದರೆ ಜೈಲಿನಿಂದ ಅಪರಾಧಿಗಳ ಅಲ್ಪಾವಧಿಯ ತಾತ್ಕಾಲಿಕ ಬಿಡುಗಡೆಯಾಗಿದೆ.

ಹರ್ಯಾಣದ ಸುನಾರಿಯಾ ಜೈಲಿನಲ್ಲಿರುವ ರಾಮ್ ರಹೀಮ್ ಪೆರೋಲ್ ವೇಳೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿರುವ ಆಶ್ರಮದಲ್ಲಿ ತಂಗಲಿದ್ದಾರೆ. ಜನವರಿಯಲ್ಲಿ ರಾಮ್ ರಹೀಮ್‌ಗೆ 40 ದಿನಗಳ ಪೆರೋಲ್ ನೀಡಿದ ವಿವಾದದ ನಂತರ, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸಿ ಪೆರೋಲ್ ಪಡೆಯುವುದು ಡೇರಾ ಸಚ್ಚಾ ಸೌದಾ ಮುಖ್ಯಸ್ಥರ ಹಕ್ಕು ಎಂದು ಹೇಳಿದ್ದರು.

ಇದೇ ಪೆರೋಲ್ ಅವಧಿಯಲ್ಲಿ ರಾಮ್ ರಹೀಮ್ ಕತ್ತಿಯಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದು ಕಂಡುಬಂತು.

ಹಿಂದಿನ ಸಂದರ್ಭಗಳಲ್ಲಿ ಪೆರೋಲ್‌ನಲ್ಲಿ ಹೊರಗಿರುವಾಗ, ಸಿರ್ಸಾ-ಪ್ರಧಾನ ಪಂಥದ ಮುಖ್ಯಸ್ಥರು ಹಲವಾರು ಆನ್‌ಲೈನ್ “ಸತ್ಸಂಗ” ಸೆಷನ್‌ಗಳನ್ನು ನಡೆಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us