ದೆಹಲಿ: ಹೊಸ ವರ್ಷಕ್ಕೆ ದೃಷ್ಟಿ ವಿಕಲಚೇತನರಿಗೆ ಆರ್ಬಿಐ ವಿನೂತನ ಕೊಡುಗೆ ನೀಡಿದೆ. ಇನ್ಮುಂದೆ ಹಣವನ್ನು ಗುರುತಿಸಲು ಬೇರೆ ಯಾರ ಸಹಾಯ ಪಡೆಯದೆ ತಾವೆ ಗುರುತಿಸುವಂತ ಸೌಲಭ್ಯ ಕಲ್ಪಿಸಿದೆ. ಆರ್ಬಿಐ ದೃಷ್ಟಿ ವಿಕಲಚೇತನರಿಗೆ ನೋಟು ಗುರುತಿಸಲು ಮನಿ ಎಂಬ ಆ್ಯಪ್ ಬಿಡುಗಡೆ ಮಾಡಿದೆ. ಮೊಬೈಲ್ ಅಪ್ಲಿಕೇಶನ್‌ನ ಸಹಾಯದಿಂದ, ದೃಷ್ಟಿ ವಿಕಲಚೇತನರು ಮೊಬೈಲ್ ಕ್ಯಾಮೆರಾದ ಮುಂದೆ ನೋಟನ್ನು ಇಟ್ಟು ಚಿತ್ರವನ್ನು ಸೆರೆಹಿಡಿಯುವ ಮೂಲಕ ಮಹಾತ್ಮ ಗಾಂಧಿ ಚಿತ್ರ ಹಾಗೂ ಮುಖಬೆಲೆಯನ್ನು ಗುರುತಿಸಲು ಸಾಧ್ಯವಾಗುತ್ತದೆ.
Mobile Aided Note Identifier- MANI
ಈ ಆ್ಯಪ್ ಉಚಿತವಾಗಿ ಎಲ್ಲಾ ಆಂಡ್ರಾಯ್ಡ್ ಮೊಬೈಲ್ಗಳಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಈ ಆಪ್ ಬಿಡುಗಡೆ ಮಾಡಿದರು. ಇದರ ಸಹಾಯದಿಂದ ದೃಷ್ಟಿ ವಿಕಲಚೇತನರು ಯಾರ ಸಹಾಯವಿಲ್ಲದೆ ತಮ್ಮ ಬಳಿ ಎಷ್ಟು ಹಣವಿದೆ ಎಂದು ತಿಳಿದುಕೊಳ್ಳಬಹುದಾಗಿದೆ.
RBI Governor @DasShaktikanta today launched a mobile application MANI (Mobile Aided Note Identifier) to aid visually impaired persons in identifying denomination of currency notes. The app can be freely downloaded from Android Play Store and iOS App Store
#rbitoday #rbigovernor pic.twitter.com/YXUzP3MBxt— ReserveBankOfIndia (@RBI) January 1, 2020
MANI – RBI's App for currency identification
https://t.co/8VCA394b23 pic.twitter.com/VmHvp0vaN9— ReserveBankOfIndia (@RBI) January 1, 2020
Published On - 5:28 pm, Wed, 1 January 20