ದೆಹಲಿ ಜುಲೈ 12: ಮಾಜಿ ಸಚಿವೆ ಸ್ಮೃತಿ ಇರಾನಿ (Smriti Irani) ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸದಂತೆ ತಮ್ಮ ಬೆಂಬಲಿಗರು ಮತ್ತು ಇತರರರಿಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಶುಕ್ರವಾರ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ (Congress) ನಾಯಕ ಜನರನ್ನು ಅವಮಾನಿಸುವುದು ದೌರ್ಬಲ್ಯದ ಸಂಕೇತ, ಶಕ್ತಿಯಲ್ಲ ಎಂದು ಹೇಳಿದ್ದರು. ಸ್ಮೃತಿ ಇರಾನಿ ಲೋಕಸಭೆ ಚುನಾವಣೆಯಲ್ಲಿ ಅಮೇಠಿಯಲ್ಲಿ ಸೋತಿದ್ದರು. ರಾಹುಲ್ ಗಾಂಧಿ ಅವರ ನಿಷ್ಠಾವಂತ ಕಿಶೋರಿ ಲಾಲ್ ಶರ್ಮಾ ಅವರು 1.5 ಲಕ್ಷ ಮತಗಳ ಅಂತರದಿಂದ ಸ್ಮೃತಿ ಅವರನ್ನು ಪರಾಭವಗೊಳಿಸಿದ್ದರು.
ಜೀವನದಲ್ಲಿ ಸೋಲು-ಗೆಲುವು ಸಂಭವಿಸುತ್ತವೆ. ಶ್ರೀಮತಿ ಸ್ಮೃತಿ ಇರಾನಿ ಬಗ್ಗೆ ಅಥವಾ ಇತರ ಯಾವುದೇ ನಾಯಕರ ಬಗ್ಗೆ ಅವಹೇಳನಕಾರಿ ಭಾಷೆ ಬಳಸಬೇಡಿ ಎಂದು ನಾನು ವಿನಂತಿಸುತ್ತೇನೆ.ಅವಮಾನಿಸುವುದು ದೌರ್ಬಲ್ಯದ ಸಂಕೇತವೇ ಹೊರತು ಶಕ್ತಿಯಲ್ಲ” ಎಂದು ರಾಹುಲ್ ಎಕ್ಸ್ ನಲ್ಲಿ ಬರೆದಿದ್ದಾರೆ. ಅಂದಹಾಗೆ ರಾಹುಲ್ ಗಾಂಧಿ ಮನವಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.
ರಾಹುಲ್ ಟ್ವೀಟ್
Winning and losing happen in life.
I urge everyone to refrain from using derogatory language and being nasty towards Smt. Smriti Irani or any other leader for that matter.
Humiliating and insulting people is a sign of weakness, not strength.
— Rahul Gandhi (@RahulGandhi) July 12, 2024
2019ರ ಲೋಕಸಭೆ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ಅವರನ್ನು ಅವರ ಭದ್ರಕೋಟೆಯಾದ ಅಮೇಠಿಯಲ್ಲಿ 55,000 ಮತಗಳ ಅಂತರದಿಂದ ಸೋಲಿಸಿದ್ದರು. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ, ರಾಹುಲ್ ಗಾಂಧಿ ಅವರು ರಾಯ್ ಬರೇಲಿ ಮತ್ತು ವಯನಾಡ್ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆದ್ದರು. ನಂತರ ಅವರು ವಯನಾಡ್ ಕ್ಷೇತ್ರವನ್ನು ಬಿಟ್ಟುಕೊಟ್ಟರು. ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡ್ ನಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಘೋಷಿಸಿದೆ.
ಜೂನ್‌ನಲ್ಲಿ ನಡೆದ ಚುನಾವಣೆಯಲ್ಲಿ ಸೋತ ನಂತರ, ಸ್ಮೃತಿ ಇರಾನಿ ತಮ್ಮನ್ನು ಬೆಂಬಲಿಸಿದವರಿಗೆ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: ಪ್ರತಿವರ್ಷ ಜೂನ್ 25ರಂದು ಸಂವಿಧಾನ್ ಹತ್ಯಾ ದಿವಸ್ ಆಚರಣೆ; ಅಮಿತ್ ಶಾ ಘೋಷಣೆ
ಜೀವನ ಹೀಗಿದೆ. ನನ್ನ ಜೀವನದ ಒಂದು ದಶಕವು ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹೋಗುವುದು, ಜೀವನವನ್ನು ಕಟ್ಟುವುದು, ಭರವಸೆ ಮತ್ತು ಆಕಾಂಕ್ಷೆಗಳನ್ನು ಪೋಷಿಸುವುದು, ರಸ್ತೆಗಳು, ನಾಲಿ, ಖಡಾಂಜ, ಬೈಪಾಸ್, ವೈದ್ಯಕೀಯ ಕಾಲೇಜು ಮೂಲಭೂತ ಸೌಕರ್ಯಗಳ ಕೆಲಸ ಮಾಡುವುದಾಗಿದೆ. ಸೋಲು ಮತ್ತು ಗೆಲುವಿನಲ್ಲಿ ನನ್ನ ಬೆಂಬಲಕ್ಕೆ ನಿಂತವರಿಗೆ ನಾನು ಚಿರಋಣಿ. ಇಂದು ಆಚರಿಸುತ್ತಿರುವವರಿಗೆ, ಅಭಿನಂದನೆಗಳು. ‘ಜೋಶ್ ಹೇಗಿದೆ?’ ಎಂದು ಕೇಳುವವರಿಗೆ. ನಾನು ಹೇಳುತ್ತೇನೆ- ಇದು ಇನ್ನೂ ಹೆಚ್ಚಿದೆ, ಸರ್ ಎಂದು ಸ್ಮೃತಿ ಎಕ್ಸ್ ನಲ್ಲಿ ಬರೆದಿದ್ದರು. ಚುನಾವಣೆಯಲ್ಲಿ ಸೋತ ನಂತರ ಅವರು ಲುಟ್ಯೆನ್ಸ್‌ನ ದೆಹಲಿಯಲ್ಲಿರುವ 28 ತುಘಲಕ್ ಕ್ರೆಸೆಂಟ್‌ನಲ್ಲಿರುವ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:52 pm, Fri, 12 July 24