Air India: ದೆಹಲಿ-ಸ್ಯಾನ್ ಫ್ರಾನ್ಸಿಸ್ಕೊ ​​​​ವಿಮಾನದಲ್ಲಿ ತೊಂದರೆಗೊಳಗಾದ ಎಲ್ಲಾ ಪ್ರಯಾಣಿಕರಿಗೆ ಹಣ ಮರುಪಾವತಿ: ಏರ್ ಇಂಡಿಯಾ

|

Updated on: Jun 08, 2023 | 5:57 PM

ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೊಕ್ಕೆ ಹಾರಾಟ ನಡೆಸಿದ್ದ ಏರ್​ ಇಂಡಿಯಾ ವಿಮಾನದ ಎಂಜಿನ್​​ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ರಷ್ಯಾದ ಮಗದನ್‌ನಲ್ಲಿ ಲ್ಯಾಂಡಿಂಗ್ ಆಗಿದೆ. ಆದರೆ ತಕ್ಷಣ ಈ ಬಗ್ಗೆ ಏರ್​​ ಇಂಡಿಯಾ ಕಾಳಜಿ ವಹಿಸಿ ಪ್ರಯಾಣಿಕರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿದೆ. ಇದೀಗ ಪ್ರಯಾಣಿಕರು ಪಾವತಿಸಿದ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ಏರ್​​​ ಇಂಡಿಯಾ ಹೇಳಿದೆ.

Air India: ದೆಹಲಿ-ಸ್ಯಾನ್ ಫ್ರಾನ್ಸಿಸ್ಕೊ ​​​​ವಿಮಾನದಲ್ಲಿ ತೊಂದರೆಗೊಳಗಾದ ಎಲ್ಲಾ ಪ್ರಯಾಣಿಕರಿಗೆ ಹಣ ಮರುಪಾವತಿ: ಏರ್ ಇಂಡಿಯಾ
ಏರ್ ಇಂಡಿಯಾ
Follow us on

ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೊಕ್ಕೆ ಹಾರಾಟ ನಡೆಸಿದ್ದ ಏರ್​ ಇಂಡಿಯಾ ವಿಮಾನದ ಎಂಜಿನ್​​ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ರಷ್ಯಾದ ಮಗದನ್‌ನಲ್ಲಿ ಲ್ಯಾಂಡಿಂಗ್ ಆಗಿದೆ. ಆದರೆ ತಕ್ಷಣ ಈ ಬಗ್ಗೆ ಏರ್​​ ಇಂಡಿಯಾ ಕಾಳಜಿ ವಹಿಸಿ ಪ್ರಯಾಣಿಕರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿದೆ. ಇದೀಗ ಪ್ರಯಾಣಿಕರು ಪಾವತಿಸಿದ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ಏರ್​​​ ಇಂಡಿಯಾ ಹೇಳಿದೆ. ದೆಹಲಿ-ಸ್ಯಾನ್ ಫ್ರಾನ್ಸಿಸ್ಕೊ ​​​​ವಿಮಾನದಲ್ಲಿ 216 ಪ್ರಯಾಣಿಕರಿಗೆ ಏರ್ ಇಂಡಿಯಾ ಸಂಪೂರ್ಣ ಮರುಪಾವತಿಯನ್ನು ನೀಡುತ್ತದೆ. ನಾವು ಪ್ರಯಾಣದ ದರವನ್ನು ಸಂಪೂರ್ಣವಾಗಿ ಮರುಪಾವತಿಸುತ್ತೇವೆ ಮತ್ತು ಹೆಚ್ಚುವರಿಯಾಗಿ, ಏರ್ ಇಂಡಿಯಾದಲ್ಲಿ ಪ್ರಯಾಣಿಕರಿಗೆ ಭವಿಷ್ಯದ ಪ್ರಯಾಣಕ್ಕಾಗಿ ವೋಚರ್​​​ನ್ನು ಒದಗಿಸುತ್ತೇವೆ ಎಂದು ಹಿರಿಯ ಏರ್‌ಲೈನ್ ಕಾರ್ಯನಿರ್ವಾಹಕ ರಾಜೇಶ್ ಡೋಗ್ರಾ ಹೇಳಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಹಲವು ಸಹಾಯ ಸೇರಿದಂತೆ ಪ್ರಯಾಣಿಕರಿಗೆ ನೀಡಲಾಗುವುದು ಎಂದು ಏರ್‌ಲೈನ್ಸ್ ಈ ಹಿಂದೆ ಹೇಳಿತ್ತು. ನಮ್ಮ ಪ್ರಯಾಣಿಕರನ್ನು SFOಗೆ ಕರೆತರುವ ನಮ್ಮ ಪ್ರಯತ್ನಕ್ಕೆ ಬೆಂಬಲ ನೀಡಿದ ಸರ್ಕಾರಿ ಸಂಸ್ಥೆಗಳು, ನಿಯಂತ್ರಕ ಅಧಿಕಾರಿಗಳು ಮತ್ತು ನಮ್ಮ ಸಿಬ್ಬಂದಿ, ಪಾಲುದಾರರಿಗೆ ಏರ್ ಇಂಡಿಯಾದ ವತಿಯಿಂದ ಧನ್ಯವಾದಗಳು. ರಷ್ಯಾದ ಮಗದನ್‌ನಲ್ಲಿರುವಾಗ ನಮ್ಮ ಪ್ರಯಾಣಿಕರಿಗೆ ಹೆಚ್ಚಿನ ಕಾಳಜಿಯನ್ನು ವಹಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Air India: ಏರ್ ಇಂಡಿಯಾ ವಿಮಾನದ ಮೂಲಕ ರಷ್ಯಾದಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತಲುಪಿದ ಭಾರತೀಯರು

ಏರ್​​ ಇಂಡಿಯಾದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ

ಜೂನ್​​​ 6ರಂದು ವಿಮಾನ AI 173 ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 12:05ಕ್ಕೆ (IST) ಹೊರಟಿತು. ಇದು ಸ್ಯಾನ್ ಫ್ರಾನ್ಸಿಸ್ಕೋವನ್ನು ಸಂಜೆ 7 ಗಂಟೆಗೆ (ಸ್ಥಳೀಯ ಕಾಲಮಾನ) ತಲುಪಬೇಕಿತ್ತು ಆದರೆ ಅದರ ಇಂಜಿನ್‌ನಲ್ಲಿ ಸಮಸ್ಯೆ ಕಂಡುಬಂದ ನಂತರ 1.30ಕ್ಕೆ (ಸ್ಥಳೀಯ ಸಮಯ) ರಷ್ಯಾದ ಮಗದನ್ ಬಳಿಯ ಸೊಕೊಲ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಯಿತು.

ಪೂರ್ವ ರಷ್ಯಾದ ಪಟ್ಟಣದಲ್ಲಿ ಏರ್‌ಲೈನ್ ಕಚೇರಿಯನ್ನು ಹೊಂದಿಲ್ಲದ ಕಾರಣ ಪ್ರಯಾಣಿಕರ ಸಹಾಯಕ್ಕಾಗಿ ಮುಂಬೈನಿಂದ ತಂಡವನ್ನು ಕಳುಹಿಸಲಾಗಿತ್ತು ಎಂದು ಏರ್ ಇಂಡಿಯಾ ಬುಧವಾರ ತಿಳಿಸಿದೆ.

ಸಿಬ್ಬಂದಿಯನ್ನು ಹೊತ್ತೊಯ್ಯುವ ವಿಮಾನವು ಆಹಾರ ಮತ್ತು ನೀರಿನಂತಹ ಅಗತ್ಯ ವಸ್ತುಗಳನ್ನು ಸಹ ಸಾಗಿಸಿತು. ಈ ಹಿಂದೆ ಆನ್‌ಲೈನ್‌ನಲ್ಲಿ ವೈರಲ್​​ ಆಗಿದ್ದ ದೃಶ್ಯಗಳಿಗೆ ಏರ್​ ಇಂಡಿಯಾ ಸ್ಪಷ್ಟನೆಯನ್ನು ಕೂಡ ನೀಡಿದೆ. ಹೋಟೆಲ್‌ಗಳು ಬುಕಿಂಗ್​​ ಆಗಿರುವ ಕಾರಣ ಪ್ರಯಾಣಿಕರನ್ನು ವಿಮಾನ ನಿಲ್ದಾಣದ ಸಮೀಪವಿರುವ ಡಾರ್ಮಿಟರಿಗಳು ಮತ್ತು ಹಾಸ್ಟೆಲ್‌ಗಳಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.

ವೈದ್ಯಕೀಯ ಕಾಲೇಜಿನ ವಸತಿ ನಿಲಯದಲ್ಲಿ ಮಕ್ಕಳಿರುವ ಮಹಿಳೆಯರು ಮತ್ತು ಗರ್ಭಿಣಿಯರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಾದೇಶಿಕ ಸಚಿವರೊಬ್ಬರು ಹೇಳಿರುವುದನ್ನು ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ಉಲ್ಲೇಖಿಸಿದೆ. ಏರ್ ಇಂಡಿಯಾಗೆ ರಷ್ಯಾದ ಅತ್ಯಂತ ಹಳೆಯ ಮತ್ತು ದೊಡ್ಡ ವಾಹಕಗಳಲ್ಲಿ ಒಂದಾದ ರೊಸ್ಸಿಯಾ ಏರ್‌ಲೈನ್ಸ್ ಸಹಾಯ ಮಾಡಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Thu, 8 June 23