‘‘ನಾಳೆ ಬೆಳಗ್ಗೆಯೊಳಗೆ ಅಮಿತ್ ಮಾಳವಿಯಾರನ್ನು ಬಿಜೆಪಿ ಐಟಿ ಸೆಲ್‌ನಿಂದ ಕಿತ್ತೊಗೆಯದಿದ್ದರೆ ಪಕ್ಷಕ್ಕೆ ನನ್ನನ್ನು ಸಮರ್ಥಿಸುವ ಇರಾದೆ ಇಲ್ಲವೆಂದು ಅರ್ಥೈಸಿಕೊಳ್ಳಬೇಕಾಗುತ್ತದೆ. ಪಕ್ಷದಲ್ಲಿ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಬೇರೆ ವೇದಿಕೆ ಇಲ್ಲದಿರುವುದರಿಂದ ನನ್ನನ್ನು ನಾನು ಸಮರ್ಥಿಸಿಕೊಳ್ಳಬೇಕಾಗಿದೆ.,’’ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಮಾಳವಿಯಾ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಮತ್ತೊಂದು ಟ್ವೀಟ್ ಮಾಡಿದ್ದು ಅದರಲ್ಲಿ, ‘‘ಮಾಳವಿಯಾ ಅವರಿಂದಾಗಿ ಪಕ್ಷದ ಐಟಿ ಸೆಲ್ ಗಬ್ಬು ನಾರುತ್ತಿದೆ, ನಮ್ಮದು ಮರ್ಯಾದಾ ಪರುಷೋತ್ತಮ ರಾಮನ ಪಕ್ಷವೇ ಹೊರತು, ರಾವಣ ಅಥವಾ ದುಶ್ಶಾಸನನ ಪಕ್ಷವಲ್ಲ,’’ ಎಂದಿದ್ದಾರೆ.
ಎನ್ಇಇಟಿ ಪರೀಕ್ಷೆಯ ಬಗ್ಗೆ ಮಾಡಿರುವ ಟ್ವೀಟ್ನಲ್ಲಿ ಸ್ವಾಮಿ, ವಿದ್ಯಾರ್ಥಿಗಳ ಪರ ಕೆ ಟಿ ಎಸ್ ತುಳ್ಸಿ ಅವರು ವಕಾಲತ್ತು ಮಾಡಲಿದ್ದು ಅವರೊಬ್ಬ ಅತ್ಯಂತ ಸಮರ್ಥ ವಕೀಲರಾಗಿದ್ದಾರೆ ಎಂದು ಹೇಳಿದ್ದಾರೆ.
‘‘ಇಂದು ಸರ್ವೋಚ್ಛ ನ್ಯಾಯಾಲಯ ಎನ್ಇಇಟಿ ವಿಷಯದ ವಿಚಾರಣೆಯನ್ನು ಕೈಗೆತ್ತಿಕೊಂಡಾಗ ವಿದ್ಯಾರ್ಥಿಗಳ ಪರವಾಗಿ ಕೆ ಟಿ ಎಸ್ ತುಳ್ಸಿ ಅವರು ವಾದಿಸಲಿದ್ದಾರೆ. ಅವರು ನಿಸ್ಸಂದೇಹವಾಗಿಯೂ ಒಬ್ಬ ಅತ್ಯುತ್ತಮ ವಕೀಲ. 199
ಹಾಗೆಯೇ, ಇವತ್ತಿನ ಮತ್ತೊಂದು ಟ್ವೀಟ್ನಲ್ಲಿ ಸ್ವಾಮಿ ಅವರು, ನಟಿ ಕಂಗನಾ ರನೌತ್ ಅವರಿಗೆ ಹೆದರದಿರುವಂತೆ ಹೇಳಿದ್ದಾರೆ. ‘‘ಕಂಗನಾ ವಿಶ್ವಾಸ ಕಳೆದುಕೊಳ್ಳುವ ಅಗತ್ಯವಿಲ್ಲ, ನಾವೆಲ್ಲ ಆಕೆಯ ಹೋರಾಟದಲ್ಲಿ ಜೊತೆಗಿದ್ದೇವೆ,’‘ ಎಂದು ಸ್ವಾಮಿ ಹೇಳಿದ್ದಾರೆ