ರೈತರ ಹಣವನ್ನೂ ಬಿಡದ ರಕ್ಕಸರು, ನುಂಗಿದ ಹಣವೆಷ್ಟು ಗೊತ್ತಾ?
ಚೆನ್ನೈ: ಪಿಎಂ-ಕಿಸಾನ್ ಯೋಜನೆಯಡಿ 5.5 ಲಕ್ಷ ಅನರ್ಹ ಜನರ ಬ್ಯಾಂಕ್ ಖಾತೆಗಳಿಗೆ 110 ಕೋಟಿ ರೂಪಾಯಿ ಸಂದಾಯ ಮಾಡಿ ಭಾರೀ ವಂಚನೆ ಮಾಡಲಾಗಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ. ಅನರ್ಹ ಅಭ್ಯರ್ಥಿಗಳನ್ನು ಯೋಜನೆಯ ಫಲಾನುಭವಿಗಳಾಗಿ ಸೇರಿಸಲು ಸರ್ಕಾರಿ ಅಧಿಕಾರಿಗಳು ಹಾಗೂ ದಲ್ಲಾಳಿಗಳಿಗೆ ಸಹಾಯ ಮಾಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಮಧ್ಯೆ, ವಂಚಕರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಮೂಲಕ ಇದುವರೆಗೆ ಸುಮಾರು 10 ದಿನಗಳಲ್ಲಿ 32 ಕೋಟಿ ರೂ. ವಸೂಲಿ ಮಾಡಲು ರಾಜ್ಯಕ್ಕೆ ಸಾಧ್ಯವಾಗಿದೆ ಎಂದು ಕೃಷಿ […]
ಚೆನ್ನೈ: ಪಿಎಂ-ಕಿಸಾನ್ ಯೋಜನೆಯಡಿ 5.5 ಲಕ್ಷ ಅನರ್ಹ ಜನರ ಬ್ಯಾಂಕ್ ಖಾತೆಗಳಿಗೆ 110 ಕೋಟಿ ರೂಪಾಯಿ ಸಂದಾಯ ಮಾಡಿ ಭಾರೀ ವಂಚನೆ ಮಾಡಲಾಗಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.
ಅನರ್ಹ ಅಭ್ಯರ್ಥಿಗಳನ್ನು ಯೋಜನೆಯ ಫಲಾನುಭವಿಗಳಾಗಿ ಸೇರಿಸಲು ಸರ್ಕಾರಿ ಅಧಿಕಾರಿಗಳು ಹಾಗೂ ದಲ್ಲಾಳಿಗಳಿಗೆ ಸಹಾಯ ಮಾಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಮಧ್ಯೆ, ವಂಚಕರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಮೂಲಕ ಇದುವರೆಗೆ ಸುಮಾರು 10 ದಿನಗಳಲ್ಲಿ 32 ಕೋಟಿ ರೂ. ವಸೂಲಿ ಮಾಡಲು ರಾಜ್ಯಕ್ಕೆ ಸಾಧ್ಯವಾಗಿದೆ ಎಂದು ಕೃಷಿ ಕಾರ್ಯದರ್ಶಿ ಗಗನ್‌ದೀಪ್ ಸಿಂಗ್ ಬೇಡಿ ಹೇಳಿದ್ದಾರೆ.
ಇಲಾಖೆ ನಡೆಸಿದ ತನಿಖೆಯ ಪ್ರಕಾರ, 13 ಜಿಲ್ಲೆಗಳಿಂದ ಸುಮಾರು 5.5 ಲಕ್ಷ ಅನರ್ಹ ವ್ಯಕ್ತಿಗಳು ಸುಳ್ಳು ಮಾಹಿತಿ ನೀಡುವ ಮೂಲಕ ನಗದು ಸಹಾಯಧನವನ್ನು ಪಡೆದಿದ್ದಾರೆ. ಕಲ್ಲಕುರಿಚಿ ಮತ್ತು ವಿಲ್ಲುಪುರಂ ಜಿಲ್ಲೆಗಳು ಚೆಂಗಲ್ಪಟ್ಟು, ಕಡಲೂರು, ಧರ್ಮಪುರಿ, ಕಾಂಚೀಪುರಂ, ಕೃಷ್ಣಗಿರಿ, ರಾಣಿಪೇಟೆ, ಸೇಲಂ, ತಿರುವಣ್ಣಾಮಲೈ ಮತ್ತು ವೆಲ್ಲೂರು ಈ ಹಗರಣದ “ಕೇಂದ್ರಬಿಂದು” ಎಂದು ವರದಿಯಾಗಿದೆ.
ಹಗರಣದ ತನಿಖೆ ನಡೆಸುತ್ತಿರುವ ಅಪರಾಧ ಶಾಖೆ-ಅಪರಾಧ ತನಿಖಾ ಇಲಾಖೆ (ಸಿಬಿಸಿಐಡಿ) 18 ಜನರನ್ನು ಬಂಧಿಸಿದೆ. ಹಾಗೂ ಹಗರಣಕ್ಕೆ ಸಂಬಂಧಿಸಿದಂತೆ 80 ಕ್ಕೂ ಹೆಚ್ಚು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಪಿಎಂ-ಕಿಸಾನ್ ಯೋಜನೆಯಲ್ಲಿ ಅಕ್ರಮಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಸೋಮವಾರ ಹೇಳಿದ್ದಾರೆ. ಈ ಯೋಜನೆಯಡಿ ಕೆಲವರು ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಅವರಿಂದ ಹಣವನ್ನು ವಸೂಲಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಹೇಳಿದ್ದಾರೆ.