MiG 21: ರಷ್ಯಾ ನಿರ್ಮಿತ ಮಿಗ್​-21 ಯುದ್ಧ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಿದ ವಾಯುಪಡೆ

|

Updated on: May 21, 2023 | 6:45 AM

ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಭಾರತೀಯ ವಾಯುಪಡೆಯು ಮಿಗ್​-21 ಯುದ್ಧ ವಿಮಾನ ಹಾರಾಟಕ್ಕೆ ತಾತ್ಕಾಲಿಕ ನಿರ್ಬಂಧ ಹೇರಿದೆ.

MiG 21: ರಷ್ಯಾ ನಿರ್ಮಿತ ಮಿಗ್​-21 ಯುದ್ಧ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಿದ ವಾಯುಪಡೆ
ಮಿಗ್​-21 ಯುದ್ಧ ವಿಮಾನ
Follow us on

ದೆಹಲಿ: ರಷ್ಯಾ ನಿರ್ಮಿತ ಮಿಗ್​-21 ಯುದ್ಧ ವಿಮಾನ(Mikoyan-Gurevich MiG 21) ಹಾರಾಟಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ. ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆ ಭಾರತೀಯ ವಾಯುಪಡೆಯು(Indian Air Force) ಮಿಗ್​-21 ಯುದ್ಧ ವಿಮಾನ ಹಾರಾಟಕ್ಕೆ ತಾತ್ಕಾಲಿಕ ನಿರ್ಬಂಧ ಹೇರಿದೆ. ಇತ್ತೀಚೆಗಷ್ಟೇ ರಾಜಸ್ಥಾನದಲ್ಲಿ ಮಿಗ್ 21 ವಿಮಾನ ಪತನಗೊಂಡು ಮೂವರು ಸಾವನ್ನಪ್ಪಿದ್ದರು. ಹೀಗಾಗಿ ಮಿಗ್ -21 ವಿಮಾನ ಹಾರಾಟವನ್ನು ಸದ್ಯಕ್ಕೆ ನಿಲ್ಲಿಸುವ ನಿರ್ಧಾರವನ್ನ ಭಾರತೀಯ ವಾಯುಪಡೆ ತೆಗೆದುಕೊಂಡಿದೆ.

ಹೀಗೆ ಮಿಗ್-21 ವಿಮಾನ ಪದೇಪದೆ ಅಪಘಾತಗಳಿಗೆ ಗುರಿಯಾಗುತ್ತಿದೆ. ಹೀಗಾಗಿ ಸಂಪೂರ್ಣ ತನಿಖೆ ನಡೆಸುವವರೆಗೆ ಮತ್ತು ರಾಜಸ್ಥಾನದಲ್ಲಿ ಸಂಭವಿಸಿದ ಅಪಘಾತದ ಹಿಂದಿನ ಕಾರಣಗಳ ಬಗ್ಗೆ ತನಿಖೆ ನಡೆಸುವವರೆಗೆ ತಾತ್ಕಾಲಿಕವಾಗಿ ಐಎಎಫ್, ಮಿಗ್-21 ವಿಮಾನಗಳ ಹಾರಾಟ ನಿಷೇಧಿಸಲಾಗಿದೆ ಎಂದು ವಾಯುಪಡೆಯಿಂದ ಮಾಹಿತಿ ಸಿಕ್ಕಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಮತ್ತು ಅಪಘಾತಕ್ಕೆ ಕಾರಣಗಳನ್ನು ಕಂಡುಹಿಡಿಯುವವರೆಗೆ MiG-21 ಹಾರಾಟ ನಿಷೇಧಿಸಲಾಗಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: IAF Fighter Aircraft Crash: ಭಾರತೀಯ ವಾಯು ಸೇನೆಯ ಮಿಗ್-21 ಯುದ್ಧ ವಿಮಾನ ಪತನ, ಮೂವರು ಸಾವು

ಇನ್ನು MiG ರೂಪಾಂತರಗಳ ಮೊದಲ ಫ್ಲೀಟ್ ಅನ್ನು 1963 ರಲ್ಲಿ ಭಾರತೀಯ ವಾಯುಪಡೆಗೆ ಸೇರಿಸಲಾಯಿತು. ನಂತರದ ದಶಕಗಳಲ್ಲಿ ಭಾರತವು 700 ಮಿಗ್-ವೇರಿಯಂಟ್ ವಿಮಾನಗಳನ್ನ ಖರೀದಿಸಿತು. IAF ತನ್ನ ವಯಸ್ಸಾದ ಫೈಟರ್ ಫ್ಲೀಟ್ ಅನ್ನು ಬದಲಿಸಲು ಸಹಾಯ ಮಾಡಲು, ಕಳೆದ ವರ್ಷ ಫೆಬ್ರವರಿಯಲ್ಲಿ ರಕ್ಷಣಾ ಸಚಿವಾಲಯವು 83 ತೇಜಸ್ ಯುದ್ಧ ವಿಮಾನಗಳ ಖರೀದಿಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನೊಂದಿಗೆ ₹48,000-ಕೋಟಿ ಒಪ್ಪಂದಕ್ಕೆ ಸಹಿ ಹಾಕಿತು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ