ಶಾಸಕಾಂಗ ನಿಂದನೆ ಆರೋಪ ಕೇಸ್​: ಆರ್ನಬ್ ಗೋಸ್ವಾಮಿಗೆ ಮಧ್ಯಂತರ ಗೆಲುವು

|

Updated on: Nov 06, 2020 | 7:44 PM

ಮುಂಬೈ: ಅನ್ವಯ್ ನಾಯಕ್ ಆತ್ಮಹತ್ಯೆಗೆ ಕಾರಣವಾಗಿದ್ದಾನೆ ಎಂಬ ಆರೋಪದಡಿ ಸದ್ಯ ಬಂಧನದಲ್ಲಿರುವ ರಿಪಬ್ಲಿಕ್ ಟಿವಿ ಸುದ್ದಿವಾಹಿನಿಯ ಪ್ರಧಾನ ಸಂಪಾದಕ ಆರ್ನಬ್ ಗೋಸ್ವಾಮಿಗೆ ಮಹಾರಾಷ್ಟ್ರ ವಿಧಾನಸಭೆ ನಿಂದನಾ ಕೇಸ್​ನಲ್ಲಿ ಸರ್ವೋಚ್ಛ ನ್ಯಾಯಾಲಯದಿಂದ ಸಂತೋಷದ ಸುದ್ದಿ ಸಿಕ್ಕಿದೆ. ಮಹಾರಾಷ್ಟ್ರ ವಿಧಾನ ಸಭೆ ಕೊಟ್ಟ ಶಾಸಕಾಂಗ ನಿಂದನಾ ನೋಟಿಸನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಕ್ಕೆ ಮರು ನೋಟಿಸ್ ಕೊಟ್ಟಿರುವ ಮಹಾರಾಷ್ಟ್ರ ವಿಧಾನ ಸಭೆಯ ಕ್ರಮದ ವಿರುದ್ಧ ಗೋಸ್ವಾಮಿ ಮತ್ತೆ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಇಂದು ಈ ಕೇಸನ್ನು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ […]

ಶಾಸಕಾಂಗ ನಿಂದನೆ ಆರೋಪ ಕೇಸ್​: ಆರ್ನಬ್ ಗೋಸ್ವಾಮಿಗೆ ಮಧ್ಯಂತರ ಗೆಲುವು
Follow us on

ಮುಂಬೈ: ಅನ್ವಯ್ ನಾಯಕ್ ಆತ್ಮಹತ್ಯೆಗೆ ಕಾರಣವಾಗಿದ್ದಾನೆ ಎಂಬ ಆರೋಪದಡಿ ಸದ್ಯ ಬಂಧನದಲ್ಲಿರುವ ರಿಪಬ್ಲಿಕ್ ಟಿವಿ ಸುದ್ದಿವಾಹಿನಿಯ ಪ್ರಧಾನ ಸಂಪಾದಕ ಆರ್ನಬ್ ಗೋಸ್ವಾಮಿಗೆ ಮಹಾರಾಷ್ಟ್ರ ವಿಧಾನಸಭೆ ನಿಂದನಾ ಕೇಸ್​ನಲ್ಲಿ ಸರ್ವೋಚ್ಛ ನ್ಯಾಯಾಲಯದಿಂದ ಸಂತೋಷದ ಸುದ್ದಿ ಸಿಕ್ಕಿದೆ. ಮಹಾರಾಷ್ಟ್ರ ವಿಧಾನ ಸಭೆ ಕೊಟ್ಟ ಶಾಸಕಾಂಗ ನಿಂದನಾ ನೋಟಿಸನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಕ್ಕೆ ಮರು ನೋಟಿಸ್ ಕೊಟ್ಟಿರುವ ಮಹಾರಾಷ್ಟ್ರ ವಿಧಾನ ಸಭೆಯ ಕ್ರಮದ ವಿರುದ್ಧ ಗೋಸ್ವಾಮಿ ಮತ್ತೆ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.

ಇಂದು ಈ ಕೇಸನ್ನು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರ ಪೀಠ ಮಹಾರಾಷ್ಟ್ರ ವಿಧಾನ ಸಭೆ ಕಾರ್ಯದರ್ಶಿಯ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಮುಂದಿನ ವಿಚಾರಣಾ ದಿನದಂದು ಮಹಾರಾಷ್ಟ್ರ ವಿಧಾನ ಸಭೆಯ ಕಾರ್ಯದರ್ಶಿಗೆ ಖುದ್ದಾಗಿ ಹಾಜರಿರಲು ನಿರ್ದೇಶನ ನೀಡಿದೆ. ಅಕ್ಟೋಬರ್​ 13ರಂದು ಮಹಾರಾಷ್ಟ್ರ ವಿಧಾನಸಭಾ ಕಾರ್ಯದರ್ಶಿ ಗೋಸ್ವಾಮಿಗೆ ಬರೆದು, ತಾವು ಈ ಹಿಂದೆ ಕೊಟ್ಟ ಶಾಸಕಾಂಗ ನಿಂದನಾ ನೋಟಿಸ್​ಮ ಸರ್ವೋಚ್ಛ ನ್ಯಾಯಾಲಯಕ್ಕೆ ಒಪ್ಪಿಸಿದ ಅವರ ಕ್ರಮವನ್ನು ಪ್ರಶ್ನಿಸಿದ್ದರು. ಅಷ್ಟೇ ಅಲ್ಲ, ಇದು ತೀವ್ರ ಖಂಡನೀಯ ಎಂದು ಹೇಳಿ ಮತ್ತೊಂದು ನೋಟಿಸ್​ನ ಸಹ ನೀಡಿದ್ದರು.

ವಿಧಾನಸಭಾ ಕಾರ್ಯದರ್ಶಿಯ ಈ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆಯವರ ಪೀಠ ವಿಧಾನಸಭಾ ಕಾರ್ಯದರ್ಶಿಯ ಈ ಕೃತ್ಯವನ್ನು ಖಂಡಿಸಿದ್ದಾರೆ. ಓರ್ವ ನಾಗರಿಕ, ತನಗೆ ಅನ್ಯಾಯವಾದಾಗ ನ್ಯಾಯಾಲಯದ ಮೆಟ್ಟಿಲೇರುವ ಮೂಲಭೂತ ಹಕ್ಕನ್ನು ಪ್ರಶ್ನಿಸಿದಂತಾಗುತ್ತದೆ. ಇದು ಸಂವಿಧಾನದ 32ನೇ ಕಲಂನ ಅನ್ವಯ ಅಪರಾಧವಾಗಿರುತ್ತದೆ. ವಿಧಾನಸಭಾ ಕಾರ್ಯದರ್ಶಿಯವರ ಈ ಕ್ರಮ ನ್ಯಾಯಾಂಗ ನಿಂದನೆಯಾಗುತ್ತದೆ. ನಾಗರೀಕರು ತಮ್ಮ ಹಕ್ಕಿನಿಂದ ವಂಚಿತರಾಗುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್​ ಹೇಳಿದೆ. ಆದ್ದರಿಂದ, ಇದು ಗಂಭೀರ ವಿಚಾರ ಎಂದು ಹೇಳಿದ ನ್ಯಾಯಾಲಯ ವಿಧಾನಸಭಾ ಕಾರ್ಯದರ್ಶಿಯ ನಡೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ವಿಧಾನ ಸಭಾ ಕಾರ್ಯದರ್ಶಿಗೆ ಮುಂದಿನ ವಿಚಾರಣೆಯ ವೇಳೆ ಖುದ್ದಾಗಿ ಹಾಜರಿರುವಂತೆ ಮತ್ತು ನ್ಯಾಯಾಲಯಕ್ಕೆ ಸ್ಪಷ್ಟೀಕರಣ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಆದೇಶಿಸಿದ್ದಾರೆ.