ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಬೋಧನ್ ಪ್ರದೇಶದಲ್ಲಿ, ಶಿವಾಜಿ ಮಹಾರಾಜರ ಪ್ರತಿಮೆ ವಿಚಾರಕ್ಕೆ ಸಂಬಂಧಪಟ್ಟಂತೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾದ ಬೆನ್ನಲ್ಲೇ ಸೆಕ್ಷನ್ 144 ಜಾರಿಯಾಗಿದೆ. ಈ ಘರ್ಷಣೆ ನಡೆದಿದ್ದು ರಾಜಕೀಯ ಬಣಗಳ ನಡುವೆ ಎಂದು ವರದಿಯಾಗಿದೆ. ಈ ಬಗ್ಗೆ ಸ್ಥಳೀಯ ಬಿಜೆಪಿ ಸಂಸದ ಅರವಿಂದ್ ಧರ್ಮಪುರಿ ಟ್ವೀಟ್ ಮಾಡಿದ್ದು, ಮಹಾರಾಷ್ಟ್ರದ ಗಡಿಯಲ್ಲಿರುವ ಬೋಧನ್ ಪಟ್ಟಣದ, ಅಂಬೇಡ್ಕರ್ ಕ್ರಾಸ್ ರಸ್ತೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಆದರೆ ಅಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಇಡಬಾರದು ಎಂದು ಎಐಎಂಐಎಂ ಮತ್ತು ಟಿಆರ್ಎಸ್ ಪಕ್ಷದ ಕಾರ್ಯಕರ್ತರು ವಿರೋಧಿಸುತ್ತಿದ್ದಾರೆ. ಅಷ್ಟೇ ಅಲ್ಲ ಬಿಜೆಪಿ ಮತ್ತು ಶಿವಸೇನೆ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿಡಿಯೋ ಶೇರ್ ಮಾಡಿಕೊಂಡಿರುವ ಅರವಿಂದ್ ಧರ್ಮಪುರಿ, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಕೆಡವಬೇಕು ಎಂದು ಎಂಐಎಂ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ ಗೂಂಡಾಗಳು ಆಗ್ರಹಿಸುತ್ತಿದ್ದಾರೆ. ಇದೊಂಥರ ಕುಟಿಲ ಮನಸ್ಥಿತಿ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಕೆಡವಬೇಕು, ಅವರದ್ದನ್ನು ಸಾಧಿಸಿಕೊಳ್ಳಬೇಕು ಎಂಬ ಯೋಚನೆ. ಈ ಪ್ರತಿಮೆಯನ್ನು ಧ್ವಂಸಗೊಳ್ಳಲು ಸ್ಥಳೀಯ ಪುರಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದ್ದು ನಿಜಕ್ಕೂ ಖೇದನೀಯ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಸ್ಥಳದಲ್ಲಿ ಈಗಾಗಲೇ ವಾಗ್ವಾದ ನಡೆದಿದೆ. ಗಲಾಟೆಯೂ ನಡೆದಿದೆ. ಸಮಸ್ಯೆಯನ್ನು ಪರಿಹಾರ ಮಾಡಲು ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಬಿಗಿ ಭದ್ರತೆ ಕಲ್ಪಿಸಲಾಗಿದೆ.
The same crooked mindset..Demolish ours—Accomplish theirs!
MIM & TRS goons trying to thwart the unveiling of the statue of Chatrapati Shivaji Maharaj & destroy the statue set up at Bodhan Ambedkar Chowrasta accepted by a municipal resolution!@HMOIndia @BJP4India @BJP4Telangana pic.twitter.com/zv4fiVdCRc
— Arvind Dharmapuri (@Arvindharmapuri) March 20, 2022
ಇದನ್ನೂ ಓದಿ: KL Rahul: ಕೆಎಲ್ ರಾಹುಲ್ ಪಂಜಾಬ್ ಪರ ತುಂಬಾ ನಿಧಾನವಾಗಿ ಆಡಿದ್ದರು: ಮಾಜಿ ಕ್ರಿಕೆಟಿಗನ ಗಂಭೀರ ಆರೋಪ