ಸೋನಿಯಾ ರಾಜೀನಾಮೆಗೆ ಮನಮೋಹನ್‌ ಸಿಂಗ್‌ ವಿರೋಧ, ಅಧ್ಯಕ್ಷರಾಗಿ ಮುಂದುವರಿಯಲು ಆಗ್ರಹ

| Updated By: ಸಾಧು ಶ್ರೀನಾಥ್​

Updated on: Aug 24, 2020 | 1:10 PM

ನವದೆಹಲಿ: ಕಾಂಗ್ರೆಸ್‌ ಪಕ್ಷದ ಮುಂದಿನ ಅಧ್ಯಕ್ಷರು ಯಾರಾಗಬೇಕೆಂಬ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದಲ್ಲಿನ ಅನಿಶ್ಚಿತತೆ ಇನ್ನೂ ಮುಂದುವರಿದಿದೆ. ನೂತನ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ನಡೆಯುತ್ತಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ರಾಜೀನಾಮೆ ಪತ್ರವನ್ನು ಸಭೆಯ ಮುಂದಿಟ್ಟಿದ್ದಾರೆ. ಅದರಲ್ಲಿ ತಮ್ಮ ಮಧ್ಯಂತರ ಅಧ್ಯಕ್ಷ ಸ್ಥಾನದ ಅವಧಿ ಆಗಸ್ಟ್‌ 10ಕ್ಕೆ ಮುಗಿದಿದ್ದು, ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಅವರು ಸಭೆಗೆ ತಿಳಿಸಿದ್ದಾರೆ. ಈ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿ […]

ಸೋನಿಯಾ ರಾಜೀನಾಮೆಗೆ ಮನಮೋಹನ್‌ ಸಿಂಗ್‌ ವಿರೋಧ, ಅಧ್ಯಕ್ಷರಾಗಿ ಮುಂದುವರಿಯಲು ಆಗ್ರಹ
Follow us on

ನವದೆಹಲಿ: ಕಾಂಗ್ರೆಸ್‌ ಪಕ್ಷದ ಮುಂದಿನ ಅಧ್ಯಕ್ಷರು ಯಾರಾಗಬೇಕೆಂಬ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದಲ್ಲಿನ ಅನಿಶ್ಚಿತತೆ ಇನ್ನೂ ಮುಂದುವರಿದಿದೆ.

ನೂತನ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ನಡೆಯುತ್ತಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ರಾಜೀನಾಮೆ ಪತ್ರವನ್ನು ಸಭೆಯ ಮುಂದಿಟ್ಟಿದ್ದಾರೆ. ಅದರಲ್ಲಿ ತಮ್ಮ ಮಧ್ಯಂತರ ಅಧ್ಯಕ್ಷ ಸ್ಥಾನದ ಅವಧಿ ಆಗಸ್ಟ್‌ 10ಕ್ಕೆ ಮುಗಿದಿದ್ದು, ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಅವರು ಸಭೆಗೆ ತಿಳಿಸಿದ್ದಾರೆ.

ಈ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ ಸೋನಿಯಾ ಗಾಂಧಿಯವರ ರಾಜೀನಾಮೆ ಪತ್ರವನ್ನ ಸಭೆಗೆ ಓದಿ ತಿಳಿಸಿದ್ದಾರೆ. ಆದರೆ ಸೋನಿಯಾ ಗಾಂಧಿಯವರ ಈ ಪ್ರಸ್ತಾಪಕ್ಕೆ ಮಾಜಿ ಪ್ರಧಾನಿ ಹಾಗೂ ಹಿರಿಯ ಕಾಂಗ್ರೆಸ್‌ ನಾಯಕ ಡಾ. ಮನಮೋಹನ್‌ ಸಿಂಗ್‌ ವಿರೋಧ ವ್ಯಕ್ತಪಡಿಸಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಪೂರ್ಣ ಪ್ರಮಾಣದ ಅಧ್ಯಕ್ಷರಾಗಿ ನೀವೇ ಮುಂದುವರಿಯಬೇಕು ಎಂದು ಮನವಿ ಮಾಡಿದ್ದಾರೆ.

ಡಾ. ಮನಮೋಹನ್‌ ಸಿಂಗ್‌ ಅವರ ಈ ಮಾತಿಗೆ ಬೆಂಬಲ ಸೂಚಿಸಿರುವ ಮತ್ತೊಬ್ಬ ಹಿರಿಯ ನಾಯಕ ಎ ಕೆ ಆಂಟನಿ ಕೂಡಾ ಅಧ್ಯಕ್ಷರಾಗಿ ನೀವೇ ಮುಂದುವರಿಯಿರಿ ಎಂದು ಸೋನಿಯಾ ಗಾಂಧಿಗೆ ಮನವಿ ಮಾಡಿದ್ದಾರೆ.

ಇದಾದ ನಂತರ ಒಂದು ವೇಳೆ ಸೋನಿಯಾ ಅವರಿಗೆ ಆಸಕ್ತಿ ಇಲ್ಲವಾದರೆ, ರಾಹುಲ್‌ ಗಾಂಧಿ ಮತ್ತೊಂದು ಅವಧಿಗೆ ಅಧ್ಯಕ್ಷರಾಗಲಿ ಎಂದು CWC ಸದಸ್ಯರು ರಾಹುಲ್‌ಗೆ ಮನವಿ ಮಾಡಿದ್ದಾರೆ.

ಆಗ ಮಾತು ಆರಂಭಿಸಿರುವ ರಾಹುಲ್‌ ಗಾಂಧಿ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಪಕ್ಷ ಸಂಕಷ್ಟದಲ್ಲಿರುವ ಸಮಯದಲ್ಲಿ ಕೆಲವರು ಅಧ್ಯಕ್ಷೆ ಸೊನಿಯಾ ಗಾಂಧಿಗೆ ಪತ್ರ ಬರೆದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಸೋನಿಯಾ ಅನಾರೋಗ್ಯದ ಮಧ್ಯೆ ಪತ್ರ ಬರೆದಿರುವುದಷ್ಟೇ ಅಲ್ಲ, ಆ ಪತ್ರ ಮಾಧ್ಯಮಗಳಿಗೆ ಲೀಕ್ ಆಗಿದೆ. ಪತ್ರ ಲೀಕ್ ಆಗಿರುವುದು ನನಗೆ ಸಾಕಷ್ಟು ನೋವು ತರಿಸಿದೆ ಎಂದು ರಾಹುಲ್ ಗಾಂಧಿ ತಮ್ಮ ಅಸಮಾಧಾನವನ್ನು CWC ಸಭೆಯಲ್ಲಿ ಹೊರಹಾಕಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕೆಲ ಸದಸ್ಯರು, ಗಾಂಧಿ ಕುಟುಂಬದ ಹೊರತು ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡಲು ಒತ್ತಾಯಿಸಲ್ಲ. ಸೋನಿಯಾಗೆ ಬರೆದ ಪತ್ರದಲ್ಲಿ ಇಂಥ ಒತ್ತಾಯ ಮಾಡಿಲ್ಲ. ಕೇವಲ ಪೂರ್ಣ ಪ್ರಮಾಣದ ಅಧ್ಯಕ್ಷರು ಬೇಕೆಂದು ಮಾತ್ರ ಹೇಳಿದ್ದೇವೆ. ಈ ಪತ್ರದ ಬಗ್ಗೆ ತಪ್ಪು ಗ್ರಹಿಕೆ ಬೇಡ ಎಂದು ಕೆಲ ಹಿರಿಯ ನಾಯಕರು ರಾಹುಲ್ ಅವರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೆಯಾಗಲು ಪ್ರಿಯಾಂಕಾ ಗಾಂಧಿ ನಿರಾಕರಣೆಯ ಅಸಲಿ ಕಾರಣ ಏನು ಗೊತ್ತಾ?
ಈ ಮಧ್ಯೆ,  ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆಯಾಗಲು ಪ್ರಿಯಾಂಕಾ ಗಾಂಧಿ ನಿರಾಕರಿಸಿದ್ದಾರೆ ಎನ್ನುವ ಮಾತು ದೆಹಲಿ ವಲಯದಿಂದ ಕೇಳಿ ಬಂದಿದೆ. ಇದಕ್ಕೆ ಕಾರಣ ಅವರ ಪತಿ ರಾಬರ್ಟ್‌ ವಾದ್ರಾ.

ಹೌದು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಸ್ಥಾನ ತೆರವುಗೊಳಿಸಿ ನೂತನ ಅಧ್ಯಕ್ಷರನ್ನು ನೇಮಕ ಮಾಡಲು ಆಸಕ್ತರಾಗಿದ್ದಾರೆ. ಇದಕ್ಕೆ ಕೆಲ ಗಾಂಧಿ ಕುಟುಂಬದ ಕೆಲ ನಿಷ್ಠರು ಸೋನಿಯಾ ಇಲ್ಲವಾದ್ರೆ ಅವರ ಮಗ ರಾಹುಲ್‌ ಗಾಂಧಿ ಅಧ್ಯಕ್ಷರಾಗಲಿ ಅವರೂ ಆಗಲ್ಲ ಅಂದ್ರೆ ಮಗಳು ಪ್ರೀಯಾಂಕಾ ಗಾಂಧಿ ಅಧ್ಯಕ್ಷೆಯಾಗಲಿ ಎಂದು ಹರಸಾಹಸ ಪಡುತ್ತಿದ್ದಾರೆ.

ಆದ್ರೆ ರಾಹುಲ್‌ ಗಾಂಧಿ ಈಗಾಗಲೇ ಖಡಕ್‌ ಆಗಿ ಮತ್ತೆ ಅಧ್ಯಕ್ಷರಾಗಲು ನಿರಾಕರಿಸಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಗಾಂಧಿ ಕುಟುಂಬದ ನಷ್ಠರ ಚಿತ್ತ ಈಗ ಪ್ರೀಯಂಕಾ ಗಾಂಧಿಯತ್ತ ಹೊರಳಿದೆ. ಆದ್ರೆ ಪ್ರೀಯಾಂಕಾ ಕೂಡಾ ಅಧ್ಯಕ್ಷೆಯಾಗಲು ನಿರಾಕರಿಸುತ್ತಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಕಾರಣ ಅವರ ಪತಿ ರಾಬರ್ಟ್‌ ವಾದ್ರಾ ಮಾಡಿದ್ದಾರೆನ್ನಲಾದ ಹಗರಣಗಳು.

ಸಧ್ಯಕ್ಕೆ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶಕ್ಕಷ್ಟೇ ತಮ್ಮ ಗಮನ ಕೇಂದ್ರೀಕೃತಗೊಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿಯೇ ಉತ್ತರ ಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿದ್ದರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಪ್ರಿಯಾಂಕಾ ಗಮನ ಈಗ 2022 ರ ಯುಪಿ ವಿಧಾನ ಸಭಾ ಚುನಾವಣೆಗೆ ಮಾತ್ರ ಸೀಮಿತವಾಗಿದೆ.

ಇಷ್ಟೇ ಅಲ್ಲ ಪ್ರಿಯಾಂಕಾಗೆ ಪತಿ ರಾಬರ್ಟ್ ವಾದ್ರಾ ಕೂಡಾ ಪ್ರಿಯಾಂಕಾ ಎಚ್ಚರಿಕೆಯ ಹೆಜ್ಜೆ ಇಡಲು ಕಾರಣ ಎನ್ನಲಾಗ್ತಿದೆ. ಪ್ರಿಯಾಂಕಾ ಅಧ್ಯಕ್ಷರಾದರೇ ಪತಿ ರಾಬರ್ಟ್ ವಾದ್ರಾ ವಿರುದ್ಧದ ಭೂ ಹಗರಣ ಮತ್ತೆ ಮುನ್ನೆಲೆಗೆ ಬರುತ್ತದೆ. ಪತಿ ರಾಬರ್ಟ್ ವಾದ್ರಾ ಹಗರಣ ಮುನ್ನೆಲೆಗೆ ತಂದು ಪ್ರಿಯಾಂಕಾಗೆ ಇರಿಸು ಮುರಿಸು ಮಾಡಲು ಬಿಜೆಪಿಗೆ ಸಲಿಸಾಗುತ್ತೆ.

ಅಷ್ಟೇ ಅಲ್ಲ ಕೇಂದ್ರ ಮತ್ತು ಹರಿಯಾಣಾದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಹರಿಯಾಣದ ಭೂ ಹಗರಣ ತನಿಖೆಯನ್ನು ಚುರುಕು ಕೂಡಾ ಮಾಡಬಹುದು. ಹಾಗೇನಾದ್ರೂ ಆದ್ರೆ ಅದು ರಾಬರ್ಟ್ ವಾದ್ರಾಗೆ ಸಂಕಷ್ಟ ತರಲಿದೆ. ಭೂ ಪರಿವರ್ತನೆ ಮಾಡಿಸಿಕೊಂಡು ಬಾರಿ ಲಾಭ ಮಾಡಿಕೊಂಡಿರುವ ರಾಬರ್ಟ್ ವಾದ್ರಾ ವಿರುದ್ಧ ಇ‌.ಡಿ. ತನಿಖೆ ಪೂರ್ಣಗೊಳಿಸಿ ರಾಬರ್ಟ್ ವಾದ್ರಾ ಮತ್ತು ಪ್ರಿಯಾಂಕಾ ಅವರನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಹೀಗಾಗಿ ಪ್ರಿಯಾಂಕಾ ನಿರಾಸಕ್ತಿ ತೋರಿದ್ದಾರೆ ಎನ್ನಲಾಗ್ತಿದೆ.