ಬ್ಯಾಂಕ್‌ಗೆ ಕಟ್ಟಲು ತಂದಿದ್ದ 81,800 ರೂ.ಕಸಿದು ಮರವೇರಿ ಹಣ ಎಸೆದ ಮಂಗ; ಹಣ ಹೆಕ್ಕಲು ಮುಗಿಬಿದ್ದ ಜನ

ಶಿಮ್ಲಾ ಡಿಸಿ ಕಚೇರಿ ಆವರಣದಲ್ಲಿ ಮಂಗನೊಂದು ಭಾರಿ ಹೈಡ್ರಾಮಾ ಸೃಷ್ಟಿಸಿದೆ. ಬ್ಯಾಂಕ್‌ಗೆ ಜಮಾ ಮಾಡಲು ವ್ಯಕ್ತಿಯೊಬ್ಬರು ತಂದಿದ್ದ ₹81,800 ನಗದನ್ನು ಕಸಿದುಕೊಂಡ ಕಪಿ ಮರವೇರಿ ನೋಟುಗಳ ಮಳೆ ಸುರಿಸಿತು. ಜನರು ಹಣ ಹೆಕ್ಕಲು ಮುಗಿಬಿದ್ದರು. ಬಹುತೇಕ ಹಣ ವಾಪಸ್ ಸಿಕ್ಕರೂ, ₹1,500 ನಷ್ಟವಾಗಿದೆ ಮತ್ತು ಕೆಲವು ನೋಟುಗಳು ಹರಿದಿವೆ. ಶಿಮ್ಲಾದಲ್ಲಿ ಮಂಗಗಳ ಹಾವಳಿ ಹೆಚ್ಚಾಗುತ್ತಿದ್ದು, ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಬ್ಯಾಂಕ್‌ಗೆ ಕಟ್ಟಲು ತಂದಿದ್ದ 81,800 ರೂ.ಕಸಿದು ಮರವೇರಿ ಹಣ ಎಸೆದ ಮಂಗ; ಹಣ ಹೆಕ್ಕಲು ಮುಗಿಬಿದ್ದ ಜನ
81,800 ನಗದನ್ನು ಕಸಿದುಕೊಂಡ ಕಪಿ ಮರವೇರಿ ನೋಟುಗಳ ಮಳೆ
Image Credit source: Tv9 kannada

Updated on: Nov 13, 2026 | 6:36 PM

ಶಿಮ್ಲಾ, ನ.13: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಂಗವೊಂದು ಭಾರಿ ಹೈಡ್ರಾಮಾ ಸೃಷ್ಟಿಸಿದೆ. ಬ್ಯಾಂಕ್‌ಗೆ ಜಮಾ ಮಾಡಲು ವ್ಯಕ್ತಿಯೊಬ್ಬರು ತಂದಿದ್ದ 81,800 ರೂ. ನಗದು ಕಂತೆಯನ್ನು ಕಸಿದುಕೊಂಡ ಕಪಿ, ಸಮೀಪದ ಮರವನ್ನೇರಿ ಮೇಲಿನಿಂದ ನೋಟುಗಳ ಮಳೆ ಸುರಿಸಿದೆ. ಮರದಿಂದ ತೂರಿ ಬರುತ್ತಿದ್ದ 500 ರೂಪಾಯಿ ನೋಟುಗಳನ್ನು ಕಂಡು ಜನರು ಹಣ ಹೆಕ್ಕಲು ಮುಗಿಬಿದ್ದ ಘಟನೆ ನಡೆದಿದೆ.

ವ್ಯಕ್ತಿಯೊಬ್ಬರು ಬ್ಯಾಂಕ್‌ಗೆ ಕಟ್ಟುವ ಸಲುವಾಗಿ 81,800 ರೂ. ನಗದನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಡಿಸಿ ಕಚೇರಿ ಆವರಣದ ಮೂಲಕ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ದಾಳಿ ನಡೆಸಿದ ಮಂಗವೊಂದು ಅವರ ಜೇಬಿನಲ್ಲಿದ್ದ ನೋಟಿನ ಕಂತೆಯನ್ನು ಕಸಿದುಕೊಂಡಿದೆ. ಅವರು ಸುಧಾರಿಸಿಕೊಳ್ಳುವಷ್ಟರಲ್ಲಿ ಮಂಗ ಸಮೀಪದ ಮರವೇರಿ, ಒಂದೊಂದೇ ನೋಟುಗಳನ್ನು ಕೆಳಗೆ ಎಸೆಯಲು ಆರಂಭಿಸಿದೆ.

Loading...

ಇಲ್ಲಿದೆ ನೋಡಿ ವಿಡಿಯೋ:

ಮರದಿಂದ ನೋಟುಗಳು ಬೀಳುತ್ತಿರುವ ಅಪರೂಪದ ದೃಶ್ಯ ಕಂಡು ಡಿಸಿ ಕಚೇರಿ ಆವರಣದಲ್ಲಿ ಭಾರಿ ಜನಸಂದಣಿ ಸೇರಿತು. ಕಂಗಾಲಾಗಿದ್ದ ವ್ಯಕ್ತಿಯ ನೆರವಿಗೆ ಧಾವಿಸಿದ ಕಚೇರಿ ಸಿಬ್ಬಂದಿ ಮತ್ತು ಸಾರ್ವಜನಿಕರು ಮರದ ಸುತ್ತಮುತ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ನೋಟುಗಳನ್ನು ಹೆಕ್ಕಿ ಅವರಿಗೆ ಮರಳಿಸಿದ್ದಾರೆ. ಸತತ ಪ್ರಯತ್ನದ ಬಳಿಕ ಬಹುತೇಕ ಹಣವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾದರೂ, ಸುಮಾರು ₹1,500 ನಗದು ನಾಪತ್ತೆಯಾಗಿದೆ ಎಂದು ಹಣ ಕಳೆದುಕೊಂಡ ವ್ಯಕ್ತಿ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ, ಮಂಗವು ಕೆಲವು ₹500 ಮುಖಬೆಲೆಯ ನೋಟುಗಳನ್ನು ಹರಿದು ಹಾಕಿರುವುದರಿಂದ ಮತ್ತಷ್ಟು ಆರ್ಥಿಕ ನಷ್ಟ ಉಂಟಾಗಿದೆ.

ಇದನ್ನೂ ಓದಿ: ಕಷ್ಟಪಟ್ಟು ದುಡಿದ ಹಣದಲ್ಲಿ ಸ್ಮಾರ್ಟ್ ಟಿವಿ ಖರೀದಿಸಿ ತಾಯಿಗೆ ಸರ್ಪ್ರೈಸ್ ಕೊಟ್ಟ ಡೆಲಿವರಿ ಬಾಯ್

ಶಿಮ್ಲಾ ನಗರದಲ್ಲಿ ಮಂಗಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸ್ಥಳೀಯರು ಆಹಾರ ಪದಾರ್ಥಗಳು ಹಾಗೂ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ನಿರಂತರ ದೂರುಗಳು ಕೇಳಿಬರುತ್ತಿವೆ. ಇದೀಗ ಜಿಲ್ಲಾಧಿಕಾರಿಗಳ ಕಚೇರಿಯಂತಹ ಪ್ರಮುಖ ಸರ್ಕಾರಿ ಆವರಣದಲ್ಲೇ ಈ ಘಟನೆ ನಡೆದಿರುವುದು, ನಗರದಲ್ಲಿ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಕೊಂಡೊಯ್ಯುವ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us